Bevoor police department celebrated the new year in an innovative way.

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಿಷೇಶ ವಾರ್ತೆ ಕೊಪ್ಪಳ.
ಕೊಪ್ಪಳ : ಪೋಲಿಸ್ ಎಂದರೇ ಭಯ, ಪೋಲಿಸ್ ಎಂದರೇ ಶಿಸ್ತಿನ ಸಿಫಾಯಿ, ಪೋಲಿಸ್ ಎಂದರೇ ಕಡಕ್ ಮಾತು ಅಷ್ಟೇ ಅಲ್ಲಾ ಪೋಲಿಸ್ ಖಾಕಿ ಸಮವಸ್ತ್ರವೆಂದರೇ ಭಯ ಮೂಡಿಸುವವರು ಎಂದು ತಿಳಿದ ಸಮಾಜದ ಮದ್ಯೆ ಇವರು ಪ್ರತಿನಿತ್ಯ ಬದುಕು ಸಾಗಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.
ಹೌದು, ಪೋಲಿಸ್ ನವರನ್ನು ಕಂಡರೇ ಮಾತನಾಡುವವರು ಸುಮ್ಮನಾಗಿ ಬಿಡುತ್ತಾರೆ. ಯಾಕೆಂದರೇ ಅವರ ಕಡಕ್ ಮುಖ, ಗಂಭೀರ ನೋಟ, ಮೈಮೇಲೆ ಖಾಕಿ ಬಟ್ಟೆ ಇವೆಲ್ಲವನ್ನು ಕಂಡಾಕ್ಷಣ ಮಾತೇ ಗಫ್ ಚುಪ್ ಯಾಕೇ ಬೇಕಪ ಏನರ ಮಾತಾಡಕ ಹೋಗಿ ಏನಾರ ಆದ್ರ ಏನ ಫಜೀತಿ ಅಂತ ಮಾತೇ ನಿಲ್ಲಿಸಿದ ಪ್ರಸಂಗಗಳು ಹಲವಾರು.
ಇವರ ಮುಂದ ಒಂದ ತಪ್ಪು ಮಾತಾಡಿದ್ರು ಕಂಬಿ ಎಣಸಬಕಾಗತ್ತ ಅನ್ನುವ ಭಯ ಸಾರ್ವಜನಿಕ ವಲಯದಲ್ಲಿದೆ.
ಇದೆಲ್ಲವಕ್ಕೂ ತದ್ವಿರುದ್ದ ಎನ್ನುವಂತೆ ಹಲವಾರು ಠಾಣೆಗಳಲ್ಲಿ ಹಲವಾರು ಅಧಿಕಾರಿಗಳಿದ್ದರು, ಅವರ ಸಮವಸ್ತ್ರಕ್ಕೆ ತಕ್ಕಂತೆ ಅವರು ಖಡಕ್ ಆಗಿರುವುದು ಸಾಮಾನ್ಯ ಅವರು ಸಹ ಮಾನವೀಯತೆ ಬದುಕು ನಡೆಸುತ್ತಾ ಹಗಲಿರುಳು ಸಮಾಜದ ಒಳಿತಿಗೆ ಶ್ರಮವಹಿಸುತ್ತಾರೆ ಎನ್ನುವುದು ಗಮನಿಸಲೇಬೇಕು.
ಯಲಬುರ್ಗಾ ತಾಲೂಕಿನ ಬೇವೂರನ ಠಾಣೆಯಲ್ಲಿ ವಿಷೇಶ ವ್ಯಕ್ತಿತ್ವದ ವ್ಯಕ್ತಿಯೊಬ್ಬರಿದ್ದಾರೆ ಅವರ ಬಗ್ಗೆ ಹೇಳಲೇ ಬೇಕು ಅವರೇ ಬೇವೂರ ಪೋಲಿಸ್ ಠಾಣೆಯ ಪಿಎಸ್ಐ ಪ್ರಶಾಂತ ಅವರು ಹೆಸರಿಗೆ ತಕ್ಕಂತೆ ಪ್ರಶಾಂತ ಸ್ವಭಾವದವರು ಆದರೆ. ಮೈಮೇಲೆ ಖಾಕಿ ತೊಟ್ಟರೇ ಮಾತ್ರ ಇಲಾಖೆಯ ಖಡಕ್ ಪೋಲಿಸ್ ಅಧಿಕಾರಿ, ಇಂತಹ ಅಧಿಕಾರಿಯೊಬ್ಬರೂ ಈ ನೂತನ ವರ್ಷಾಚರಣೆ ವಿನೂತನವಾಗಿ ಆಚರಿಸಿಕೊಳ್ಳಲು ತಾವಷ್ಟೇ ಅಲ್ಲದೇ ತಮ್ಮ ಬೇವೂರ ಪೋಲಿಸ್ ಠಾಣಾ ಸಿಬ್ಬಂದಿಗೂ ಒಂದೇ ತರನಾದ ಕಲರ್ ಫುಲ್ ಸಫಾರಿ ಬಟ್ಟೆ ಹಾಕಿಸಿ ನೂತನ ವರ್ಷವನ್ನು ವಿನೂತನವಾಗಿ ಆಚರಿಸಿದರು.
ಈ ಒಂದು ದಿನವಾದರು ತಮ್ಮೆಲ್ಲ ಸಿಬ್ಬಂದಿಗಳು ಅಧಿಕಾರದ ಬಿಂಕ, ಬಿಗುಮಾನ ಬಿಟ್ಟು ಸೌಹಾರ್ದಯುತವಾಗಿ ಒಂದೇ ಬಟ್ಟೆಯನ್ನುಟ್ಟು ನೂತನ ವರ್ಷವನ್ನು ಆಚರಿಸಬೇಕು, ಪ್ರತಿನಿತ್ಯ ನಮ್ಮ ಬಗ್ಗೆ ಇರುವ ಗೌರವದ ಜೊತೆಗೆ ಸ್ನೇಹಮಯವಾಗಿ, ಸಂತೋಷದಿಂದ ಈ ಹೊಸ ವರ್ಷ ಆಚರಿಸೋಣವೆಂದು ಸಂಭ್ರಮದಿಂದ ನೂತನ ವರ್ಷ ಆಚರಿಸಿ ಸಂಭ್ರಮಿಸಿದರು.