Paying money to play ispeet, when is the cutoff for ispeet finance coming closer to home..?
ಸಾಮಾಜಿಕ ಕಳಕಳಿಯಿಂದ ಇರುವವರಿಗೆ ಅತಿಕ್ಕುವ ಕೆಲಸವೇ …
ಸಂಪೂರ್ಣ ಮಾಹಿತಿಗಾಗಿ ಕಾದು ನೋಡಬೇಕು ಇದರ ಹಿನ್ನೆಲೆ ಏನಿರಬಹುದು..?
ಕೊಟ್ಟೂರು: ಪಟ್ಟಣದಲ್ಲಿ ಅತೀ ಹೆಚ್ಚಾಗಿ ನಡೆಯುತ್ತಿರುವುದು ಇಸ್ಪೀಟ್ ದಂಧೆ. ಇಸ್ಪೀಟ್ ದಂಧೆಯ ಮೋಜಿಗೆ ಒಳಗಾಗಿ ಹಲವಾರು ಮಂದಿ ತಮ್ಮ ಜೀವನವನ್ನು, ಕುಟುಂಬವನ್ನು ಬೀದಿಗೆ ತಳ್ಳುವಂತಹ ಪರಿಸ್ಥಿತಿ ಬಂದಿದೆ.
ದಿನದ ಕೆಲಸ ಮುಗಿಯುತ್ತಿದ್ದಂತೆ ಆಟ ಆಡಲೆಂದೇ ಸಣ್ಣ ಹಳ್ಳಿಯಿಂದಲೂ ಇಸ್ಪೀಟ್ ಆಡಲು ವ್ಯಾಪಾರಿಗಳು, ಶಿಕ್ಷಕರು, ನೌಕರರು, ಕೂಲಿ-ಕಾರ್ಮಿಕರೆ ಹೆಚ್ಚಿಗಿ ಸೇರುತ್ತಾರೆ.
ಪಟ್ಟಣದ ಹಲವಾರು ಕಡೆ ಇಸ್ಪೀಟ್ ಅಡ್ಡಾಗಳಿದ್ದು,ಅಲ್ಲೆಲ್ಲಾ ಹಣವಿರುವವರು , ಸಮಾಜದಲ್ಲಿ ಹೆಸರು ಇರುವವರನ್ನು ಕರೆತಂದು ಇಸ್ಪೀಟ್ ಆಡಲು ಇಸ್ಪೀಟ್ ನೆಡಸುವ ಆಟಗಾರರು 10000/ಕ್ಕೆ ಒಂದು ಗಂಟೆಗೆ 1000/ ಬಡ್ಡಿ ಎಂದು ಸಾಲದ ರೂಪದಲ್ಲಿ ಹಣ ನೀಡುವ ಬೊಮ್ಮ ,ದುರ್ಗಪ್ಪ ಹಾಗೂ ಇತರರು..?
ಅವರು ಸೋತ ಮೇಲೆ ಅವರಿಂದ ಕೊಟ್ಟ ಸಾಲವನ್ನು ವಸೂಲಿ ಮಾಡಲು ರಾತ್ರಿ 10 ಗಂಟೆ ಗೆ ಮನೆಗಳ ಹತ್ತಿರ ಬಂದು, ಕುಟುಂಬಸ್ಥರಿಗೆ ಭಯ ಬೀತರನ್ನಾಗಿಸುವದು, ತೊಂದರೆ ನೀಡುತ್ತಿರುವ ಹಲವಾರು ಘಟನೆಗಳು ಜರುಗುತ್ತಿವೆ.
ಆದರೂ ಇದರ ಬಗ್ಗೆ ಕೇಳುವವರು ಯಾರೂ ಇಲ್ಲದಂತಾಗಿದೆ.? ತಮ್ಮನ್ನೇ ನಂಬಿಕೊಂಡ ಬಡಕುಟುಂಬಗಳು ತಮ್ಮ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಪರದಾಡುತ್ತಿರುವ ಬದುಕುಗಳಲ್ಲಿ ಇಂತಹ ಇಸ್ಪೀಟ್ ಸಾಲಗಳು ಅವರ ಬದುಕನ್ನೇ ಛಿದ್ರ ಮಾಡುತ್ತಿವೆ. ಇಂತಹ ಸಾಲಗಳನ್ನು ಮಾಡಿ ಕುಟುಂಬದ ಹೆಸರಿಗೇ ಕಳಂಕ ತರುತ್ತಿರುವುದು ಮನೆಯಲ್ಲಿನ ಕುಟುಂಬದ ಸದಸ್ಯರ ಆಕಾಶದ ಕಡೆಗೆ ನೋಡುವಂತಹದ್ದು ಮತ್ತು ಜೀವಗಳನ್ನೆ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾಲದ ಸುಳಿಗೆ ಸಿಕ್ಕಿ ನಲಗಿರುವ ಕೊಟ್ಟೂರು ಪಟ್ಟಣದ ಮುದಕನ ಕಟ್ಟಿ ವಾಸಿ ಮತ್ತು ಚಪ್ಪರದಹಳ್ಳಿಯ ವಾಸಿ ಈಗಾಗಲೇ ಇವರುಗಳು ಸಾಲಗಾರರ ಜೀವ ಬೆದರಿಕೆಗಳಿಗೆ ಊರನ್ನು ಬಿಟ್ಟಿದ್ದಾರೆ ಕುಟುಂಬಸ್ಥರು ಅಲ್ಲಿ ಇಲ್ಲಿ ಹುಡುಕಿಕೊಂಡು ಮತ್ತೆ ಕರೆ ತಂದಿದ್ದರು ಸಾಲಗಾರರ ತೊಂದರೆ ತಪ್ಪಿಲ್ಲ..?
ಬೀದಿಗೆ ಬೀಳುತ್ತಿರುವ ಕುಟುಂಬಗಳಿಗೆ ಇನ್ನಾದರೂ ನ್ಯಾಯ ಸಿಗುವುದೇ … ಕ್ಷೇತ್ರದ ಶಾಸಕರೇ,ಆಳುವ ಸರ್ಕಾರಗಳು, ಅಧಿಕಾರಿಗಳೇ ಹೀಗೆ ಕಣ್ಮುಚ್ಚಿ ಕುಳಿತರೆ ಜನ ಸಾಮಾನ್ಯರ ಗತಿಯೇನು… ಇಸ್ಪೀಟ್ ಅಡಗಿಸುವ ವರಿಗೆ ಕಡಿವಾಣ ಯಾವಾಗ? ಈ ಬಗ್ಗೆ ಅಧಿಕಾರಿಗಳು ಎಚ್ಚೆತ್ತು ಇಂತಹ ಸಾಲ ನೀಡುವವರ ಜಾಲವನ್ನು ಬೇಧಿಸಿ, ಶೋಷಣೆಗೊಳಗಾದ ಕುಟುಂಬಗಳ ಪರ ನಿಲ್ಲಬೇಕಾಗಿದೆ .ಎಂದು ಸಾರ್ವಜನಿಕರಾದ ಹೆಸರು ಹೇಳದೆ ಇರುವ ಚಪ್ಪರದಹಳ್ಳಿಯ ಕುಟುಂಬಸ್ಥರು, ಮತ್ತು ದುರುಗಮ್ಮ ,ಹುಲಿಗಮ್ಮ, ಕೊಟ್ರೇಶ್ ಪತ್ರಿಕೆಗೆ ತಿಳಿಸಿದ್ದಾರೆ