2024 H. Parasurama Maharaja who was selected for the Narasimhaiya award
ಸಾವಳಗಿ: 2024 ರ ರಾಜ್ಯಮಟ್ಟದ ಎಚ್. ಎನ್. ಪ್ರಶಸ್ತಿಗೆ ಸತ್ಯಶೋಧಕ ಸಂಘದ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ಅವರು ರಾಜ್ಯ ಮಟ್ಟದ 2024ರ ಎಚ್. ನರಸಿಂಹಯ್ಯ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಂಘಟನೆ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸಮಾಜಮುಖಿ ಕೆಲಸಕ್ಕಾಗಿ ಅಭಿನಂದಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನೆ ಪರಿಷತ್ತು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕರ್ನಾಟಕ ಸರ್ಕಾರ ಸಹಕಾರದೊಂದಿಗೆ ಡಿ 28 ಮತ್ತು ಡಿ 29 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ 4 ನೇ ವೈಜ್ಞಾನಿಕ ಸಮ್ಮೇಳನ ನಡೆಯಲಿದೆ, ಈ ಸಮ್ಮೇಳನದಲ್ಲಿ ಪರಶುರಾಮ ಮಹಾರಾಜನವರ ಅವರಿಗೆ ಪ್ರಶಸ್ತಿ ನೀಡಿಲಾಗುತ್ತಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಕೃಷ್ಣ ಬೈರೇಗೌಡ, ಸತೀಶ್ ಜಾರಕಿಹೊಳಿ, ಎನ್. ಎಸ್. ಬೋಸರಾಜ, ಪ್ರಿಯಾಂಕ ಖರ್ಗೆ, ಕೆ. ಎಚ್. ಮುನಿಯಪ್ಪ, ಮಾಜಿ ನ್ಯಾಯಮೂರ್ತಿ ಜಸ್ಟಿಸ್ ನಾಗಮೋಹನ್ಯಾಸ, ಹಾಗೂ ಶ್ರೀಮತಿ ಉಮಾಶ್ರೀ ಸೇರಿದಂತೆ ಅನೇಕರು ಆಗಮಿಸಲಿದ್ದಾರೆ ಎಂದು ಸತ್ಯಶೋಧಕ ಸಂಘಟನೆ ಪತ್ರಿಕಾ ಪ್ರಕಟಣೆ ತಿಳಿಸಿದೆ.