Breaking News

ವಿದ್ಯಾನಗರದ ಚರ್ಚ್ನಲ್ಲಿ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಆಚರಣೆ.

Christmas and New Year celebration in Vidyanagar church.

ಜಾಹೀರಾತು
ಜಾಹೀರಾತು



ಗಂಗಾವತಿ: ನಗರದ ಸಮೀಪದ ವಿದ್ಯಾನಗರದಲ್ಲಿರುವ ಬೆಥೆಸ್ದಾ ಎಟರ್ನಲ್ ಫೆಲೋಶಿಪ್ ಚಾರಿಟೇಬಲ್ ಟ್ರಸ್ಟ್ದಿಂದ ಇಂದು ಕ್ರಿಸ್‌ಮಸ್ ಹಬ್ಬ ಹಾಗೂ ಹೊಸವರ್ಷದ ಅಂಗವಾಗಿ ಅನೇಕ ವೃದ್ಧರಿಗೆ, ವಿಧವೆಯರಿಗೆ, ಮಹಿಳೆಯರಿಗೆ ಬಟ್ಟೆ ಹಾಗೂ ಬೆಡ್‌ಶೀಟ್‌ಗಳನ್ನು ವಿತರಣೆ ಮಾಡಲಾಯಿತು ಎಂದು ಟ್ರಸ್ಟ್ನ ಅಧ್ಯಕ್ಷರಾದ ವಿ. ಜೀವಪ್ರಕಾಶ ಪ್ರಕಟಣೆಯಲ್ಲಿ ತಿಳಿಸಿದರು.
ಅವರು ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಸಂಭ್ರಮಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮ ನೇತೃತ್ವ ವಹಿಸಿ, ಬಡವರಿಗೆ ಮತ್ತು ಅನಾಥರಿಗೆ ವಿಕಲಚೇತನಿಗೆ ಸ್ವಯಂ ಉದ್ಯೋಗ ತರಬೇತಿ ಮತ್ತು ವೃದ್ಧರಿಗೆ, ವಿಧವೆಯರಿಗೆ ಆರೋಗ್ಯದ ಕಾರ್ಯಕ್ರಮಗಳನ್ನು, ಜೊತೆಗೆ ಕ್ರಿಸ್‌ಮಸ್ ಹಬ್ಬದ ದಿನದಂದು ವಿಶೇಷವಾಗಿ ಬಟ್ಟೆ ಮತ್ತು

ಬೆಡ್‌ಶೀಟ್‌ಗಳನ್ನು ಸುಮಾರು ೪೦೦ ಜನಕ್ಕೆ ದಾನ ಮಾಡಿ ಮಾತನಾಡಿದರು. ಜೊತೆಗೆ ಅನ್ನ ಪ್ರಸಾದವನ್ನು ಏರ್ಪಡಿಸಿ ಇಲ್ಲಿ ಬಂದAತಹ ಎಲ್ಲಾ ಭಕ್ತಾದಿಗಳಿಗೂ ಆ ಯೇಸು ಪ್ರಭು ಆಯುಷ್ಯ, ಆರೋಗ್ಯ ಕರುಣಿಸಲೆಂದು ಪ್ರಾರ್ಥಿಸಿದರು. ಬೆಥೆಸ್ಥಾ ಎಟರ್ನಲ್ ಫೆಲೋಶಿಪ್ ಟ್ರಸ್ಟಿಗೆ ಸಹಾಯ ಮಾಡಿದ ಎಲ್ಲಾ ದಾನಿಗಳಿಗೆ ಧನ್ಯವಾದಗಳನ್ನು ಸಮರ್ಪಿಸಿ ದಾನಿಗಳಿಗೆ ದೇವರು ಸುಖ ಸಂತೋಷ ನೆಮ್ಮದಿ ಕೊಡಲೆಂದು ಈ ಸಂದರ್ಭದಲ್ಲಿ ದೇವರನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯರಾದ ಜಾನಕಿರಾಮಯ್ಯ ವಿದ್ಯಾನಗರ, ಹಿರಿಯರಾದ ಸೂರ್ಯನಾರಾಯಣ, ವಿ.ಜ್ಯೋತಿ. ಮಂಜುನಾಥ್ ವಿದ್ಯಾನಗರ. ಶ್ರೀನಿವಾಸ್ ವಿದ್ಯಾನಗರ. ವಿ. ಸತ್ಯನಾರಾಯಣ ಸಿಂಧನೂರು, ದುರ್ಗಮ್ಮ, ಕೆ. ಸತೀಶ್ ಕೊಪ್ಪಳ, ಕಾಸಿಂಬಿ ಹುಲಿಗಿ, ತಾಹೇರಾ ಗಂಗಾವತಿ ಸೇರಿದಂತೆ ನಗರದ ಹಿರೇಜಂತಕಲ್, ವಿರುಪಾಪುರ ತಾಂಡದ ಮಹಿಳೆಯರು, ವೃದ್ಧರು ಮತ್ತು ಜಂಗಮರ ಕಲ್ಗುಡಿ ವೃದ್ಧರು, ಮಹಿಳೆಯರು ಮತ್ತು ವಿದ್ಯಾನಗರದ ಹಿರಿಯರು, ಮಹಿಳೆಯರು ಸೇರಿದಂತೆ ೪೦೦ಕ್ಕೂ ಅಧಿಕ ಭಕ್ತಾದಿಗಳು ಕ್ರಿಸ್‌ಮಸ್ ಹಬ್ಬವನ್ನು ವಿಜೃಂಭಣೆಯಿAದ ಆಚರಿಸಿದರು.

About Mallikarjun

Check Also

ಬೆಳಗಾವಿ ಮಹಾತ್ಮ ಗಾಂಧೀಜಿಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ ಸಮಾವೇಶದ ಶತಮಾನೋತ್ಸವಸಂದರ್ಭ ನಿಮಿತ್ತ ವಿಶೇಷ ಲೇಖನ

A special article on the occasion of the centenary of Congress convention held under the …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.