Yalaburga: 8-year-old schoolgirl dies after being run over by KSRTC bus


ವರದಿ : ಪಂಚಯ್ಯ ಹಿರೇಮಠ.
ಯಲಬುರ್ಗಾ : ಪಟ್ಟಣದ ರಮೇಶ ಜೋಗಿನ ಎನ್ನುವವರ ಮಗಳಾದ ಸಾನ್ವಿ (8) ಎನ್ನುವ ಬಾಲಕಿ ಸ್ಥಳೀಯ ಸಿದ್ರಾಮೇಶ್ವರ ಶಾಲೆಯಿಂದ ಅವರ ಚಿಕ್ಕಪ್ಪನ ಜೊತೆ ಸಾನ್ವಿ ಹಾಗೂ ಸಹೋದರಿ ದ್ವಿಚಕ್ರ ವಾಹನದ ಮೇಲೆ ಶಾಲೆಯಿಂದ ಮರಳಿ ಮನೆಗೆ ಬರುವಾಗ ಬಸ್ ಡಿಕ್ಕಿಯಾಗಿ ಸಾನ್ವಿ ಯ ಮೇಲೆ ಬಸ್ ಹರಿಹಾಯ್ದು ಬಾಲಕಿ ಮೃತಪಟ್ಟ ಘಟನೆ ಸಂಭವಿಸಿದೆ.

ಸೋಮವಾರದಂದು ಎಂದಿನಂತೆ ಸಿದ್ರಾಮೇಶ್ವರ ಶಾಲೆಗೆ ಸಾನ್ವಿ ಹಾಗೂ ಸಹೋದರಿಯರಿಬ್ಬರು ಶಾಲೆಗೆ ಹೋಗಿ ಶಾಲೆ ಬಿಟ್ಟ ನಂತರ ಅವರ ಚಿಕ್ಕಪ್ಪನ ದ್ವಿಚಕ್ರವಾಹನದಲ್ಲಿ ಮರುಳಿ ಮನೆಗೆ ಬರುವಾಗ ಯಲಬುರ್ಗಾ ಪಟ್ಟಣದ ತಾಲೂಕ ಪಂಚಾಯತ ಮುಂದೆ ಇರುವ ಡಿವೈಡರ್ ಪಕ್ಕದಲ್ಲಿ ಹೊರಳಿಸುವಾಗ ವೇಗವಾಗಿ ಬಂದ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಹೊಡೆದಿದ್ದು, ಚಾಲಕನ ನಿರ್ಲಕ್ಷ್ಯತನವೇ ಈ ಘಟನೆಗೆ ಕಾರಣವೆಂದು ತಿಳಿದು ಬಂದಿದೆ.
ಈ ಘಟನೆಯಲ್ಲಿ ಚಿಕ್ಕಪ್ಪ ಹಾಗೂ ಸಹೋದರಿ ಬಸ್ ಡಿಕ್ಕಿಯಿಂದ ಡಿವೈಡರ್ ಪಕ್ಕದಲ್ಲಿ ಬಿದ್ದಿದ್ದು ತೆರೆಚಿದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಈ ಕುರಿತಂತೆ ಯಲಬುರ್ಗಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




