Associations are cooperative for women to become financially empowered: Devendrappa Badagera.
ವರದಿ : ಪಂಚಯ್ಯ ಹಿರೇಮಠ
ಕೊಪ್ಪಳ : ಮಹಿಳೆಯರ ಉದ್ಯೋಗ ಸೃಷ್ಠಿಯಿಂದ ಆರ್ಥಿಕವಾಗಿ ಸಬಲೀಕರಣವಾಗುವ ಜೊತೆಗೆ ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಮುಂದೆ ಬರಲು ಸಂಘಗಳ ಸಹಕಾರಿಯಾಗಲಿವೆ ಎಂದು ದೇವೇಂದ್ರಪ್ಪ ಬಡಗೇರ ಹೇಳಿದರು.
ಕುಕನೂರು ತಾಲೂಕಿನ ರಾಜೂರ ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಂಘದ ಚುನಾವಣೆಯಲ್ಲಿ ಸಂಘದ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ 10 ಜನ ಮಹಿಳಾ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಂತರದಲ್ಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಹಿಳಾ ಸಂಘಗಳು ಹೆಚ್ಚು ಹೆಚ್ಚು ಹುಟ್ಟಿಕೊಳ್ಳುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸಬರಾಗಲು ಸಹಕಾರಿಯಾಗುತ್ತದೆ.
ಸಹಕಾರಿ ಸಂಘಗಳಲ್ಲಿ ಒಬ್ಬರಿಗೊಬ್ಬರು ಸಹಕಾರದಿಂದ ಮುನ್ನೆಡೆದು ಇಲ್ಲಿನ ಮಹಿಳೆಯರು ಪ್ರತಿಯೊಬ್ಬರಿಗೂ ಮಾದರಿಯಾಗಬೇಕು ಎಂದು ಹೇಳಿದರು.
ಸಂಘಗಳಲ್ಲಿ ಸ್ವ-ಹಿತಕ್ಕಿಂತ ಸಾರ್ವಜನಿಕವಾಗಿ ಹಿತಾಸಕ್ತಿ ಇದ್ದು ಯಾರು ಸ್ವಾರ್ಥ ಮನೋಭಾವನೆಯಿಂದ ಯಾವುದೇ ಪಲಾಪೇಕ್ಷೆ ಇಲ್ಲದೇ ಸಂಘದ ಬೆಳವಣಿಗೆಗೆ ಮುಂದಾಗಬೇಕು ಎಂದರು.
ನಂತರದಲ್ಲಿ ಸಂಘದ ಅಧ್ಯಕ್ಷೆ ಪಾರ್ವತಿ ದೊಡ್ಮನಿ ಮಾತನಾಡಿ ಸರ್ವ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲರ ಸಹಕಾರ ಪಡೆದು ಸಂಘದ ಬೆಳವಣಿಗೆಗೆ ಶ್ರಮಿಸಲಾಗುವದು ಎಂದರು.
ನಂತರದಲ್ಲಿ ಫಕೀರಸಾಬ ನದಾಫ್ ಮಾತನಾಡಿ ಮಹಿಳೆಯರ ಸಂಘಗಳು ಯಾವಾಗಲು ಯಶಸ್ವಿಯಾಗುತ್ತವೆ. ನಮ್ಮ ರಾಜೂರ ಗ್ರಾಮದ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಪದ ಗ್ರಹಣವಾಗಿದ್ದು ಎಲ್ಲಾ ಸದಸ್ಯರು ಸೊಸೈಟಿಯನ್ನು ಮೇಲ್ದರ್ಜೇಗೆರೀಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಕಿವಿ ಮಾತನ್ನು ಹೇಳಿದರು.
ಸಂಘವು ನಮಗೇನು ಮಾಡಿದೇ ಎನ್ನುವ ಬದಲು ಸಂಘದ ಪ್ರಗತಿಗೆ ಪ್ರತಿಯೊಬ್ಬ ಮಹಿಳೆಯರು ಶ್ರಮಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಶಾರದಾ ಸೇತುಸಂಧಿ, ಕಾರ್ಯದರ್ಶಿ ಮಂಜುಳಾ ಮುಂದಲಮನಿ, ಸದಸ್ಯರಾದ ಹನಮವ್ವ ಗೊಂದಿ, ನಿರ್ಮಲಾ ಗೊಂದಿ, ಸವಿತಾ ಅಂಗಡಿ, ಅನ್ನವ್ವ ಸೊಂಪೂರ, ಶಾರವ್ವ ಹಿರೇಮನಿ, ಕವಿತಾ ಗುರಿಕಾರ, ಸುಮಂಗಲಾ ಬ್ಯಾಡಗೌಡರ್, ರೇಣುಕಾ ಕೊತ್ಲಣ್ಣವರ್, ರಮಜಾನಬೀ ನದಾಫ್ ಹಾಗೂ ವಿರುಪಾಕ್ಷ ದೊಡ್ಮನಿ, ಶರಣಪ್ಪ ಗೊಂದಿ, ಶಿವರಾಜ ದೊಡ್ಮನಿ, ಶರಣಪ್ಪ ಅಂಗಡಿ, ಶರಣಪ್ಪ ಕಂದಗಲ್ ಇನ್ನಿತರರು ಇದ್ದರು.