Illegal middle sale |take appropriate action| CPML party petition
ಕೊಟ್ಟೂರು ತಾಲೂಕಿನ ಹರಾಳು ಮತ್ತು ರಾಮನಾಯಕನಹಳ್ಳಿ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವವರ ಸಂಖ್ಯೆ ಗಣನೀಯವಾಗಿದ್ದು ಇಂತವರನ್ನು ತಡೆ ಹಿಡಿದು ಕಡಿವಾಣ ಹಾಕಿ ಕಾನೂನು ಕ್ರಮ ಕೈಕೊಳ್ಳುವಂತೆ ಸ್ಥಳೀಯ ಗ್ರಾಮಸ್ಥರು ಹಾಗೂ ಭಾರತ ಕಮಿನಿಸ್ಟ್ ಪಕ್ಷದ ( ಮಾರ್ಕ್ಸ್ ವಾದಿ ಹಾಗೂ ಲೆನಿನ್ ವಾದಿ ) ಯವರು ಬುಧವಾರ ಪೊಲೀಸ್ ಠಾಣೆಯ ಪಿಎಸ್ಐ ಗೀತಾಂಜಲಿ ಶಿಂಧೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸ್ವೀಕರಿಸಿದ ನಂತರ ಗೀತಾಂಜಲಿ ಶಿಂಧೆ ಅವರು ಮಾತನಾಡಿ ಅಕ್ರಮ ಮಧ್ಯ ಮಾರಾಟ ಕಂಡು ಬಂದಲ್ಲಿ ಕಾನೂನು ರೀತಿಯಲ್ಲಿ ಸೂಕ್ತ ಕ್ರಮ ಜರಗಿಸಲಾಗುವುದು ಅಕ್ರಮ ಮಧ್ಯ ಸಾಗಾಣಿಕೆ ಮರುಕಳಿಸದಂತೆ ಎಲ್ಲ ಮಧ್ಯ ಮಾರಾಟಗಾರರಿಗೆ ಖಡಕ್ ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ಸಿ.ಪಿ.ಐ.ಎಂ.ಎಲ್. ಪಕ್ಷದ
ತಾಲೂಕು ಕಾರ್ಯದರ್ಶಿ ಬಿ.ಬಾಲ ಗಂಗಾಧರ್, ಹಾಗೂ ಜಿಲ್ಲಾ ಮುಖಂಡ. ಗುಳೇದಟ್ಟಿ ಸಂತೋಷ್, ಗೋಣಿ ಬಸಮ್ಮ, ವನಜಮ್ಮ, ಪಕೀರಮ್ಮ, ದುರುಗಮ್ಮ ಅಜ್ಜಪ್ಪ, ಊ ಪರಸಪ್ಪ, ದೊಡ್ಡಬಸಪ್ಪ, ಸಿದ್ದಪ್ಪ, ರೈತ ಸಂಘ ಮುಖಂಡ ಬರಮಪ್ಪ, ನಾಗರಾಜ ಇನ್ನು ಮುಂತಾದ ಕಾರ್ಯಕರ್ತರು ಭಾಗವಹಿಸಿದ್ದರು.