Sri Kanaka Gurupeeth Committee Gagan Natogara elected as Taluka President
ಕುಕನೂರು, ಡಿ. 18 : ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠ, ತಿಂಥಣಿ ಬ್ರಿಜ್ ಶ್ರೀ ಪೀಠವು ಕೊಪ್ಪಳ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಾಲುಮತ ಸಮುದಾಯವನ್ನು ಸಂಘಟಿಸಲು ಮತ್ತು ಸಂಸ್ಕೃತಿಯನ್ನು ಉಳಿಸಲು, ಶ್ರೀ ಕನಕ ಗುರುಪೀಠ ಸಮಿತಿಯನ್ನು ಪೂರ್ಣಪ್ರಮಾಣದಲ್ಲಿ ರಚಿಸಿಕೊಂಡು, ಮಠದ ನಿರ್ದೇಶನದಂತೆ ಸೇವಾ ತತ್ಪರರಾಗಲು ಕುಕನೂರು ತಾಲೂಕು ಅಧ್ಯಕ್ಷರನ್ನಾಗಿ ಗಗನ ನೋಟಗಾರ ಇವರನ್ನು ಆಯ್ಕೆ ಮಾಡಿ ಆದೇಶ ನೀಡಲಾಗಿದೆ ಎಂದು ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಸಿದ್ದರಾಮಾನಂದ ಸ್ವಾಮಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇವರು ಶ್ರೀ ಕನಕ ಗುರುಪೀಠ ಸಮಿತಿ
ತಾಲೂಕಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಕ್ಕಾಗಿ ಸಮಾಜದ ಯುವಕರು ಹಾಗೂ ಗುರುಹಿರಿಯರು, ಸೇರಿದಂತೆ ಸ್ನೇಹಿತರು ಅಭಿನಂದಿಸಿದ್ದಾರೆ.