Financial Awareness Literacy Program at Channabasavaswamy Women’s College
ಗಂಗಾವತಿ: *ಭಾರತೀಯ ರಿಸರ್ವ್ ಬ್ಯಾಂಕ್ ತನ್ನ 90ನೇ ವರ್ಷದಲ್ಲಿ ದೇಶಾದ್ಯಂತ ಬ್ಯಾಂಕಿಂಗ್ ವ್ಯವಸ್ಥೆ ,ಅದರಲ್ಲೂ ಆರ್ಥಿಕ ಸಾಕ್ಷರತಾ/ಜಾಗೃತಿಯನ್ನು ಪ್ರತಿ ಶಾಲಾ ಕಾಲೇಜುಗಳಲ್ಲಿ ಮತ್ತು ಸಾರ್ವಜನಿಕರಿಗೆ ಕೈಗೊಳ್ಳುತ್ತಿದೆ ಎಂದು ಬೆಂಗಳೂರು ಭಾರತೀಯ ರಿಸರ್ವ್ ಬ್ಯಾಂಕಿನ ಆರ್ಥಿಕ ಸೇರ್ಪಡೆ ಮತ್ತು ಅಭಿವೃದ್ಧಿ ವಿಭಾಗದ ವ್ಯವಸ್ಥಾಪಕರಾದ ಮೋನಿ ರಾಜ ಬ್ರಹ್ಮ ರವರು ಇಂದು ಶ್ರೀ ಚನ್ನಬಸವ ಸ್ವಾಮಿ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು ಎಪ್ರಿಲ್ 1, 1935 ರಂದು ಸ್ಥಾಪಿತವಾದ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ 90 ವರ್ಷದ ಅವಧಿಯಲ್ಲಿ ಅನೇಕ ಆರ್ಥಿಕ ಸಾಧನೆಗಳ ಜೊತೆಗೆ ಸಾಮಾಜಿಕ ಕಾರ್ಯ ಗಳಲ್ಲು ತನ್ನ ಕಾರ್ಯ ವ್ಯಾಪ್ತಿಯನ್ನು ವಿಸ್ತರಿಸಿ ಅದರಲ್ಲೂ ವಿಶೇಷವಾಗಿ ಆರ್ಥಿಕ ಸಾಕ್ಷರತೆ, ಆರ್ಥಿಕ ಜಾಗೃತಿ, ಡಿಜಿಟಲ್ ಬ್ಯಾಂಕಿಂಗ್, ಹೀಗೆ ಹಲವಾರು ಕಾರ್ಯಕ್ರಮಗಳನ್ನು ಜನಸಾಮಾನ್ಯರಿಗೆ ಮತ್ತು ಅವರ ಮನೆ ಬಾಗಿಲಿಗೆ ಬ್ಯಾಂಕಿಂಗ್ ವ್ಯವಸ್ಥೆಯ ಉದ್ದೇಶ ಕಾರ್ಯ ಕಲಾಪಗಳ ಉದ್ದೇಶಗಳನ್ನು ತಿಳಿಸುವ ಮಹಾ ಕಾರ್ಯಗಳನ್ನು ಮಾಡುತ್ತಿದೆ ಎಂದು ತಿಳಿಸಿದರು* *ಇಂದಿನ ಯುವ ಪೀಳಿಗೆ /ವಿಧ್ಯಾರ್ಥಿಗಳು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಥವಾ ಡಿಜಿಟಲ್ ವ್ಯವಹಾರದಲ್ಲಿ ಮೋಸ ವಂಚನೆಗೆ ಒಳಗಾಗುವ ಅವಕಾಶಗಳಿದ್ದು ಅವುಗಳಿಂದ ದೂರವಿರಲು ನಾವು ಜಾಗೃತರಾಗಿ ಆರ್ಥಿಕ ಸಾಕ್ಷರರಾಗಿ ನಮ್ಮ ಠೇವಣಿ ಅಥವಾ ಬ್ಯಾಂಕಿಂಗ್ ವ್ಯವಹಾರ ಸುರಕ್ಷಿತವಾಗಿರಬೇಕೆಂದು ತಿಳಿಸಿದರು* *ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಕ್ವಿಜ್ ಸ್ಪರ್ಧೆ, ಮತ್ತು ಹಲವಾರು ಬ್ಯಾಂಕಿಂಗ್ ವಂಚನೆಗಳ ಕುರಿತು ಮತ್ತು ಅನೇಕ ಉಪಯುಕ್ತ ಮಾಹಿತಿಗಳನ್ನು ಒದಗಿಸುವ ಉದ್ದೇಶ ಹೊಂದಿದೆ ಎಂದು ತಿಳಿಸಿದರು* *ಈ ಆರ್ಥಿಕ ಜಾಗೃತಿ ಶಿಬಿರದಲ್ಲಿ ಕೊಪ್ಪಳ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಕೆ.ಎಂ. ವೀರೇಂದ್ರ ಕುಮಾರ್ ರವರು ಬ್ಯಾಂಕಿಂಗ್ ವ್ಯವಸ್ಥೆ ಯಲ್ಲಿ ಅನೇಕ ವ್ಯವಹಾರಿಕ ಉದ್ದೇಶಗಳನ್ನು ಹೊಂದಿದ್ದಾರೆ. ಹಾಗಾಗಿ ಬ್ಯಾಂಕಿನ ಉಪಯೋಗದ ಜೊತೆಗೆ ನಮ್ಮ ಠೇವಣಿ ಅಥವಾ ವ್ಯವಹಾರದ ಜಾಗೃತಿಯನ್ನು ನಾವು ಹೊಂದಿಕೊಳ್ಳುವುದು ಅತ್ಯವಶ್ಯಕ ವಾಗಿದೆ ಎಂದು ತಿಳಿಸಿದರು. ಬ್ಯಾಂಕಿಂಗ್ ವ್ಯವಹಾರದ ಜೊತೆ ನಮ್ಮ ಠೇವಣಿ ಭದ್ರತೆಯನ್ನು ತಿಳಿದುಕೊಳ್ಳುವುದು ಮುಖ್ಯ ಉದ್ದೇಶ ಎಂದು ತಿಳಿಸಿದರು* *ಈ ಕಾರ್ಯಕ್ರಮದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬೆಂಗಳೂರಿನ ಅಧಿಕಾರಿಗಳಾದ ಕುಮಾರಿ. ಮಧುಶ್ರೀ ರವರು ಭಾರತೀಯ ರಿಸರ್ವ್ ಬ್ಯಾಂಕಿನ ಇತ್ತೀಚಿನ ಹಲವಾರು ಯೋಜನೆಗಳು, ವಿಶೇಷವಾಗಿ ಸೈಬರ್ ಕ್ರೈಂ, ಡಿಜಿಟಲ್ ಬ್ಯಾಂಕಿಂಗ್, ಆರ್ಥಿಕ ಸಾಕ್ಷರತಾ, ಜಾಗೃತಿ ಮತ್ತು ಆರ್.ಬಿ.ಐ.ರಚನೆ ಉದ್ದೇಶ ಬ್ಯಾಂಕಿಂಗ್ ವಿಷಯಗಳ ಕುರಿತು ಹಲವಾರು ಮಾಹಿತಿಗಳನ್ನು ವಿಡಿಯೋ ಮುಖಾಂತರ ವಿವರಿಸಿದರು* *ಗಂಗಾವತಿ ಭಾರತೀಯ ಸ್ಟೇಟ್ ಬ್ಯಾಂಕ್ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಟಿ. ಆಂಜನೇಯ ರವರು ಭಾರತೀಯ ರಿಸರ್ವ್ ಬ್ಯಾಂಕ್ ದೇಶದ ಹಣಕಾಸು ನೀತಿ, ಮತ್ತು ಅದರ ಜವಾಬ್ದಾರಿಗಳನ್ನು ಅಲ್ಲದೆ ರಿಜರ್ವ್ ಬ್ಯಾಂಕಿನ ಸಾಮಾಜಿಕ ಕಾರ್ಯಗಳು ಕುರಿತು ಆರ್ಥಿಕ ಸಾಕ್ಷರತೆ/ ಜಾಗೃತಿ ಮತ್ತು ಹಲವಾರು ಸಾಮಾಜಿಕ ಯೋಜನೆಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿದರು* *ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜು ಪ್ರಾಚಾರ್ಯರಾದ ಡಾ. ಶರಣಬಸಪ್ಪ ಕೋಲ್ಕಾರ ರವರು ನಮ್ಮ ಕಾಲೇಜ ವಿಧ್ಯಾರ್ಥಿನಿಯರಿಗೆ ಆರ್ಥಿಕ ಮತ್ತು ಸಾಕ್ಷರತೆಯ ಮಾಹಿತಿ ನೀಡಲು ಇಂದು ಬೆಂಗಳೂರಿನ* *ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಆಗಮಿಸಿ ವಿಶೇಷವಾಗಿ ದೇಶದ ಹಣಕಾಸು* *ನೀತಿ ,ಆರ್ಥಿಕ ಅಭಿವೃದ್ಧಿ, ಮತ್ತು ಆರ್ಥಿಕ ಜಾಗೃತಿ, ಡಿಜಿಟಲ್ ಬ್ಯಾಂಕಿಂಗ್ ಸೈಬರ್ ಕ್ರೈಂ*
ಹೀಗೆ ಹಲವಾರು ವಿಷಯಗಳ ಕುರಿತು ಮಾಹಿತಿ ನೀಡಿ ನಮ್ಮ ವಿದ್ಯಾರ್ಥಿಗಳಿಗೆ ನಮ್ಮ ವಿಷಯಗಳ ಬೋಧನೆ ಜೊತೆಗೆ ಆರ್ಥಿಕ ವ್ಯವಹಾರ ಜ್ಞಾನ ನೀಡುವ ಉಪಯುಕ್ತ ಮಾಹಿತಿಗಳನ್ನು ನೀಡಿದ ಆರ್.ಬಿ.ಐ. ಮ್ಯಾನೇಜರ್ ಮೋನಿ ರಾಜ ಬ್ರಹ್ಮ ರವರು, ಮತ್ತು ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ವಿರೇಂದ್ರ ಕುಮಾರ್ ಅವರಿಗೆ ಕಾಲೇಜು ಪರವಾಗಿ ಕೃತಜ್ಞತೆ ತಿಳಿಸಿದರು
ಕಾರ್ಯಕ್ರಮದ ಪ್ರಾರಂಭದಲ್ಲಿ ಪ್ರೊ.ಸಿಂಧು ಬಳ್ಳಾರಿ ಸ್ವಾಗತಿಸಿದರು
ಡಾ.ಶಾರದಾ ಪಾಟೀಲ್ ವಂದಿಸಿದರು ಈ ಕಾರ್ಯಕ್ರಮದಲ್ಲಿ ಎನ್ ಎಸ್ ಎಸ್ ಅಧಿಕಾರಿಗಳಾದ ಡಾ.ಸುರೇಶ ಗೌಡ, ಡಾ.ವಾಣಿಶ್ರೀ ಪಾಟೀಲ್,ಪ್ರೊ ಮಾಣಿಕ್ಯ ವರ್ಣೆಕರ್ ,ಕೆ.ಎಂ.ಬಸವರಾಜ, ಶಿವಮ್ಮ,ರಶ್ಮಿ, ಇನ್ನಿತರ ಉಪನ್ಯಾಸಕರುಗಳು ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು
ಸುಮಾರು 120 ವಿದ್ಯಾರ್ಥಿಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಚಿಹ್ನೆ ವುಳ್ಳ ನೋಟ್ ಬುಕ್, ಪೆನ್, ಮತ್ತು ಸಾಕ್ಷರತೆಯ ಮಾಹಿತಿಯುಳ್ಳ ಕೈಪಿಡಿಯನ್ನು ನೀಡಲಾಯಿತು