Purification of Life by Samskara — Mahadeva Sri.
ಯಲಬುರ್ಗಾ,14:ದ್ವೇಷ ˌ ಅಸೂಯೆಯನ್ನು ತೊರೆದು ಪ್ರೀತಿಯಿಂದ ಮನಸ್ಸನ್ನು ಗೆಲ್ಲಬೇಕು. ಪ್ರತಿಯೊಬ್ಬರ ಜೀವನ ಪಾವನಗೊಳ್ಳಬೇಕಾದರೆ ಸಂಸ್ಕಾರ ಮುಖ್ಯ ಎಂದು ಕುಕನೂರಿನ ಮಹಾದೇವ
ಸ್ವಾಮಿಗಳು ಹೇಳಿದರು.
ತಾಲೂಕಿನ ಕರಮುಡಿ ಗ್ರಾಮದ ಶ್ರೀ ಕರವೀರಬಧ್ರೇಶ್ವರ ಪುರಾಣದ ಮೂರನೆ ದಿನದ ಸಾನಿಧ್ಯವನ್ನು ವಹಿಸಿ ಮಾತನಾಡಿದ ಅವರು ಸಮಾಜ ಮುಖಿ ಜೀವನ ನಡೆಸುವದರ ಜೊತೆಗೆ ಮಧುರ ಬಾಂಧವ್ಯವನ್ನು ಗಟ್ಟಿಗೊಳಿಸಬೇಕು . ಧರ್ಮದಿಂದಲೆ ವಿಶ್ವಕ್ಕೆ ಶಾಂತಿ ಎಂಬ ಕಟುಸತ್ಯದ ಮರ್ಮವನ್ನು ಅರಿಯಬೇಕಾದ ಅಗತ್ಯತೆ ಇದೆ . ಹಣ ˌ ಅಧಿಕಾರ ˌ ಅಂತಸ್ತಿನಿಂದ ಜೀವನದಲ್ಲಿ ತ್ರಪ್ತಿ ಸಿಗುವದಿಲ್ಲ. ಭಕ್ತಿಯಿಂದ ಸನ್ಮಾರ್ಗದ ದಾರಿಯನ್ನು ಕಂಡುಕೊಳ್ಳಬೇಕಾಗಿದೆ. ಸಂಸ್ಕಾರಯುತ ಬಾಳನ್ನು ಅನುಸರಿಸಿದಾಗ ಜೀವನ ಬಂಧುರವಾಗುತ್ತದೆ ಎಂದರು.
ಪ್ರವಚನಕಾರರಾದ ವೀರೇಶ ಶಾಸ್ತ್ರಿಗಳು ಗಜಗಿನಹಾಳ ಕರವೀರ ಬಧ್ರೇಶ್ವರನ ಲೀಲೆಗಳನ್ನು ಸುವಿವರವಾಗಿ ತಿಳಿಸಿಕೊಟ್ಟರು.
ಪಟ್ಟಣದ ಬಸವಲಿಂಗೇಶ್ವರ ಸ್ವಾಮೀಜಿ ˌ ಹಾಗೂ ವೀರೆಶ್ವರ ಶಾಸ್ತ್ರಿಗಳು ಮಾತನಾಡಿ ಗ್ರಾಮದ ಸಕಲ ಸದ್ಭಕ್ತರು ಒಗ್ಗಟ್ಟಿನಿಂದ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು ಹಾಗಾಗಿ ಸಹಿಷ್ಣುತೆಗೆ ತವರೂರಿನಲ್ಲಿ ಯಾವುದೆ ಕಾರ್ಯಕ್ರಮಗಳು ಮಾಡಿದರು ಯಶಸ್ವಿಗೊಳ್ಳುತ್ತವೆ ಎಂದರು.
ಮಲ್ಲಯ್ಯಸ್ವಾಮಿ ˌಶಿವಕುಮಾರ ಸ್ವಾಮಿ ಸಮ್ಮುಖ ವಹಿಸಿದ್ದರು.
ಕಲ್ಯಾಣಕುಮಾರ ಬಟನಹಳ್ಳಿ ˌಪ್ರವಚನಕಾರರಾದ ವೀರೇಶ್ವರ ಶಾಸ್ತ್ರೀಗಳು ಗಜಗಿನಹಾಳ ಮಾತನಾಡಿದರು. ಹಾಗು ಲಿಲಾವು ಗೈದರು ಭಕ್ತರು ಆಸಕ್ತಿಯಿಂದ ಭಾಗವಹಿಸಿದರು.
ವೀರಭದ್ರಯ್ಯ ಕೆಂಬಾವಿಮಠ ˌರವರ ಸಂಗೀತ ಸೇವೆ ಗೈದರು. ಗ್ರಾಮದ ಹಿರಿಯರಾದ ರಾಮಣ್ಣ ಪ್ರಭಣ್ಣನವರ ˌ ಕಳಕಪ್ಪ ಕುರಿ ˌ ಶಿವಪುತ್ರಪ್ಪ ಮಲಿಗೋಡದ ˌ ಭೀಮಪ್ಪ ಹವಳಿ ˌ ಡಾ.ಮಂಜುನಾಥ ಕುಕನೂರ ˌೈಶರಣಪ್ಫ ಕೆಂಚರಡ್ಡಿ ˌಬಿ.ಎಂ.ಪಾಟೀಲ ˌಹನುಮಂತ ಕಾಳಿ ಟ್ರಸ್ಟ ಕಮೀಟಿ ಅಧ್ಯಕ್ಷ ಶರಣಪ್ಪಗೌಡ ಪೋ.ಪಾಟೀಲ ˌಗ್ರಾ.ಪಂ. ಅಧ್ಯಕ್ಷರಾದ ಲಿಂಗರಾಜ ಉಳ್ಳಾಗಡ್ಡಿ .ಸದಸ್ಯರಾದ ರಾಮಣ್ಣ ಹೊಕ್ಕಳದ ˌ ಮರ್ಧಾನಸಾಬ ಮುಲ್ಲಾ ˌಪರಸಪ್ಫ ಲಮಾಣಿ ! ಯುವಕ ಮಂಡಳದ ಅಧ್ಯಕ್ಷ ಶರಣಪ್ಪ ಮುಗಳಿˌ ಬಸವರಾಜ ಬಲಕುಂದಿ ˌ ˌಹುಚ್ಚುಸಾಬ ಬಡಿಗೇರ ˌ ಮುತ್ತಣ್ಣ ಗೊಂಗಡಶೆಟ್ಟಿ ˌ ಗಂಗಪ್ಪ ಹವಳಿ ˌಡಾ.ಗೌಡಪ್ಪ ಬಲಕುಂದಿ ˌ ಉಮೇಶ ಕುಕನೂರ ˌ ಡಾ.ಕಾಶಯ್ಯ ನಂದಿಕೋಲ ˌ ಬಸವರಾಜ ಉಳ್ಳಾಗಡ್ಡಿ ˌ ಮಲ್ಲೇಶಗೌಡ ಪೋ.ಪಾಟೀಲ ˌ ಮಂಜುನಾಥ ನಿಂಗೋಜಿ ˌ ವೀರಣ್ಣ ಮಾನಶೆಟ್ಟಿ ˌ ವೀರಣ್ಣ ಹೆಂಡಿಗೇರಿ
ಗುರಯ್ಯ ಹಿರೇಮಠ ˌ ಶ್ಯಾಮೀದಸಾಬ ಮುಲ್ಲಾ ˌ ಬಾಬು ನಾಯ್ಕರ ಹಾಗೂ ಇನ್ನೀತರರು ಉಪಸ್ಥಿತರಿದ್ದರು.
ಸ್ಥಳೀಯ ಪ್ರಾಥಮಿಕ ಶಾಲಾ ಮಕ್ಕಳ ಕೋಲಾಟ ಹಾಗು ಲೇಜಿಮು ಗಳು ಅತ್ಯಾಕರ್ಷಕವಾಗಿದ್ದವು .
ಪುರಾಣ ಪ್ರಾರಂಭವಾಗುವ ಮುನ್ನ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರಸ್ವಾಮಿಗಳ ತುಲಾಭಾರವನ್ನು ಶರಣಪ್ಪಗೌಡ ಪೋ.ಪಾಟೀಲ ಹಾಗೂ ಲಕ್ಷ್ಮೀದೇವಿ ಪೋ.ಪಾಟೀಲರವರು ತಮ್ಮ ಸ್ವಗ್ರಹದಲ್ಲಿ ನೇರವೇರಿಸಿದರು.ಈ ಸಂದರ್ಭದಲ್ಲಿ ಗ್ರಾಮದ ಹಲವಾರು ತಾಯಂದಿರು ಪಾಲ್ಗೊಂಡು ಶ್ರೀಗಳಿಂದ ಆಶೀರ್ವಚನ ಪಡೆದುಕೊಂಡರು.
ವಿರುಪಾಕ್ಷಪ್ಪ ಉಳ್ಳಾಗಡ್ಡಿ ನಿರೂಪಿಸಿ ಸ್ವಾಗತಿಸಿದರು. ಸಕಲ ಗ್ರಾಮಸ್ಥರು ಹಾಗೂ ಪ್ರವಚನ ಆಲಿಸಲು ಬಂದಂತಹ ಸಮಸ್ತ ನಾಗರಿಕರು ಪ್ರಸಾದ ಸ್ವೀಕರಿಸಿದರು