Arrest of supari killers who tried to kill a youth of Chandur village.
ಮಹಿಳೆ ಮೇಲಿನ ವ್ಯಾಮೋಹದಿಂದ ಹತ್ಯೆಗೆ ಸುಪಾರಿ,,,!
ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ಕುಕನೂರು ಪೋಲಿಸ್ ಇಲಾಖೆ,,
ವರದಿ : ಪಂಚಯ್ಯ ಹಿರೇಮಠ.
ಕುಕನೂರ : ತಾಲೂಕಿನ ಚಂಡೂರ ಗ್ರಾಮದ ಮರ್ತುಜಾ ಸಾಬ ನದಾಫ್ (42) ಈ ವ್ಯಕ್ತಿಯು ರವಿವಾರದಂದು ಚಂಡೂರ ಗ್ರಾಮದ ತಮ್ಮ ಮನೆಯಿಂದ ಕುಕನೂರ ಕಡೆಗೆ ಹೊರಟ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಕಂದಿಯಿಂದ ಏಕಾ, ಏಕಿ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದಾಗ ಕುತ್ತಿಗೆಯ ಭಾಗಕ್ಕೆ ಬಲವಾದ ಗಾಯವಾಗಿದೆ.
ಆ ವ್ಯಕ್ತಿಯು ಗಾಯಗೊಂಡ ಬೆನ್ನಲ್ಲಿ ಅರಚುತ್ತಾ ಊರೋಳಕ್ಕೆ ಓಡಿದ ಸಂದರ್ಭದಲ್ಲಿ ಸುಪಾರಿ ಕಿಲ್ಲರ್ ಗಳು ಪರಾರಿಯಾಗಿದ್ದರು.
ಘಟನೆ ವಿವರ : ಮರ್ತುಜಾ ಸಾಬ ಎನ್ನುವ ವ್ಯಕ್ತಿಯ ಮನೆಯ ಮಹಿಳೆಯ ಮೇಲೆನ ವ್ಯಾಮೋಹದಿಂದ ಶರಣಯ್ಯ (40) ಎನ್ನುವ ವ್ಯಕ್ತಿ ಅದೇ ಗ್ರಾಮದ ಚಂದ್ರಕಾಂತ (35) ಎನ್ನುವ ವ್ಯಕ್ತಿ ಅಂಗವಿಕನಾಗಿದ್ದು ಪಾನ್ ಶಾಪ್ ನಡೆಸುತ್ತಿದ್ದ ಸಹಾಯದಿಂದ ಮರ್ತುಜಾಸಾಬನ ಚಲನ ವಲನದ ಮಾಹಿತಿ ನೀಡುತ್ತಿದ್ದ ಎನ್ನಲಾಗಿದೆ.
ಸುಪಾರಿ ಕಿಲ್ಲರ್ ಆದ ಸುಬಾನ್ ನದಾಫ್ (20) ಪಂಪಾಪತಿ(40) ಕಡ್ಲೆಹುಂಡೆ ಎನ್ನುವ ವ್ಯಕ್ತಿಗಳು ಕೊಪ್ಪಳ ಜಾತ್ರೆಯಲ್ಲಿ ಪರಿಚಯ ಹೊಂದಿದ್ದು, ಇವರ ಮೂಲಕ ಮರ್ತುಜಾಸಾಬನನ್ನು ಮುಗಿಸಲು 30 ಸಾವಿರ ರೂಪಾಯಿಗೆ ಸುಪಾರಿ ನೀಡಲಾಗಿತ್ತು ಎಂದು ಪೋಲಿಸ್ ಮಾಹಿತಿಯಿಂದ ಲಭ್ಯವಾಗಿದೆ.
ಇತನನ್ನು ಮುಗಿಸಲು ಸಂಚು ರೂಪಿಸಿದ ಶರಣಯ್ಯ ಹಾಗೂ ಚಂದ್ರಕಾಂತ ಎನ್ನುವವರು ಶನಿವಾರದಂದು ಸುಪಾರಿ ಕಿಲ್ಲರ್ ಗಳನ್ನು ಕರೆಯಿಸಿ ಚಂದ್ರಕಾಂತನ ಮನೆಯಲ್ಲಿ ವಾಸ್ತವ್ಯ ವ್ಯವಸ್ಥೆ ಮಾಡಿದ್ದರು ಎನ್ನುವದು ತನಿಖೆಯಿಂದ ತಿಳಿದು ಬಂದಿದ್ದು, ರವಿವಾರ ಇತನನ್ನು ಮುಗಿಸಲು ಸಂಚು ರೂಪಿಸಿದ್ದರು, ರವಿವಾರ ಮರ್ತುಜಾಸಾಬ ಕುಕನೂರು ಕಡೆಗೆ ತೆರಳುವಾಗ ಘಟನೆ ಜರುಗಿದ್ದು,
ಕಂದಿಯಿಂದ ಹೊಡೆದ ಹೊಡೆತಕ್ಕೆ ಇತನು ಸಾಯುತ್ತಾನೆ ಎಂದು ತಿಳಿದು ಸುಪಾರಿಗಳು ಪರಾರಿಯಾಗಿದ್ದಾರೆ.
ಆದರೆ ಅದೃಷ್ಟವಶಾತ್ ಮರ್ತುಜಾಸಾಬನಿಗೆ ಕುತ್ತಿಗೆಗೆ ಬಲವಾದ ಹೊಡೆತ ಬಿದ್ದರು ಪ್ರಾಣಾಪಾಯದಿಂದ ಪಾರಾಗಿದ್ದು ಹುಬ್ಬಳ್ಳಿ ಕೆಎಮ್ ಸಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಆದರೆ ಘಟನೆಗೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಎಸ್ ಪಿ ರಾಮ್ ಎಲ್ ಅರಸಿದ್ದಿ, ಡಿವೈಎಸ್ಪಿ ಹಾಗೂ ಹೆಚ್ಚುವರಿ ಎಸ್ಪಿ ಹೇಮಂತ್ ಯಲಬುರ್ಗಾ ಸಿಪಿಐ ಮೌನೇಶ ಪಾಟೀಲ್ ಇವರ ಮಾರ್ಗದರ್ಶನದಲ್ಲಿ ತಾಂತ್ರಿಕ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಕುಕನೂರು ಪೋಲಿಸ್ ಠಾಣೆ ಪಿಎಸ್ಐ ಟಿ. ಗುರುರಾಜ ನೇತೃತ್ವದ ತಂಡದ ಎಎಸ್ಐ ಶರಣಪ್ಪ, ಪೇದೆಗಳಾದ ಸರ್ವೆಶ್, ವೆಂಕಟೇಶ ಕಾಳಗಿ, ದೇವೇಂದ್ರ, ಮಾರುತಿ, ವಿಶ್ವನಾಥ ಆರೋಪಿಗಳನ್ನು ಶೋಧಿಸುವಲ್ಲಿ ಯಶಸ್ವಿಯಾಗಿದ್ದು, ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಕ್ಕಾಗಿ, ಎಸ್ ಪಿ ರಾಮ್ ಎಲ್. ಅರಸಿದ್ದಿ ಶ್ಲಾಘನೆ ವ್ಯಕ್ತ ಪಡಿಸಿದ್ದಾರೆ.