Breaking News

ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿಅಸಂಘಟಿತ ವಿಕಲಚೇತನರ ಸಮಸ್ಯೆಗಳ ಕಡೆ ಗಮನರಿಸಲು ಒತ್ತಾಯ: ಅಶೋಕ ಗುಡಿಕೋಟಿ

Urged to focus on problems of unorganized differently abled in Belgaum winter session: Ashoka Gudikoti

ಜಾಹೀರಾತು

ಗಂಗಾವತಿ: ವಿಕಲಚೇತನರಲ್ಲಿ ೨೧ ಬಗೆಯ ಅಂಗವಿಕಲತೆಯ ವಿಧಗಳನ್ನು ಗುರುತಿಸಲಾಗಿದ್ದು, ವಿವಿಧ ವಿಧಗಳ ವಿಕಲಚೇತನರು ಪ್ರತ್ಯೇಕ ಸಂಘಗಳನ್ನು ಕಟ್ಟಿಕೊಂಡು ತಮಗೆ ಅನುಕೂಲಕರವಾದ ಬೇಡಿಕೆಗಳಿಗೆ ಆಗ್ರಹಿಸಿ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದು, ಇತರೆ ವಿಧದ ವಿಕಲಚೇತನ ಸಮುದಾಯದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿಲ್ಲ. ಇದರಿಂದ ಕೆಲವು ಬಡ ವಿಕಲಚೇತನರು ಅಸಂಘಟಿತರಾಗಿ ಯಾವುದೇ ಬೇಡಿಕೆಗೆ ಒತ್ತಾಯಿಸಲಾಗದೇ ವಿವಿಧ ಸೌಲಭ್ಯಗಳಿಂದ ವಂಚಿತರಾಗುವAತಾಗಿದೆ ಎಂದು ಕರವೇ ಪ್ರವೀಣಕುಮಾರ ಶೆಟ್ಟಿ ಬಣದ ಅಂಗವಿಕಲ ಘಟಕದ ಗಂಗಾವತಿ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಪ್ರಕಟಣೆಯಲ್ಲಿ ಕಳವಳ ವ್ಯಕ್ತಪಡಿಸಿದರು.
ವಿಕಲಚೇತನರಲ್ಲಿ ಶ್ರವಣದೋಷ ವಿಕಲಚೇತನರ ಸಂಘ, ವಿಕಲಚೇತನ ಸರ್ಕಾರಿ ನೌಕರರ ಸಂಘ, ವಿಕಲಚೇತನರ ಅತಿಥಿ ಶಿಕ್ಷಕರ ಸಂಘ ಹೀಗೆ ವಿವಿಧ ರೀತಿಯ ಸಂಘಗಳನ್ನು ರಚಿಸಿಕೊಂಡಿದ್ದು, ಇವರ ಜೊತೆಗೆ ಎಂ.ಆರ್.ಡಬ್ಲೂö್ಯ, ವಿ.ಆರ್.ಡಬ್ಲೂö್ಯ ಇವರು ತಮಗೆ ಅನುಕೂಲವಾಗುವ ಲಾಭ ಹಾಗೂ ಯೋಜನೆಗಳಿಗೆ ಮಾತ್ರ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದು, ಇವರು ಆರ್ಥಿಕವಾಗಿ ಸಬಲರಾಗಿ ಎಲ್ಲಿಗೆ ಬೇಕಾದರೂ ಹೋಗಿ ಧರಣಿ, ಸತ್ಯಾಗ್ರಹ, ಹೋರಾಟ ಮಾಡಿ, ಅಂಕಿಸAಖ್ಯೆಗಳನ್ನು ನೀಡಿ ಸರ್ಕಾರದ ಮಟ್ಟದಲ್ಲಿ ಗಮನ ಸೆಳಯುತ್ತಿದ್ದಾರೆ. ಆದರೆ ಕೇವಲ ಮಾಶಾಸನದ ಮೇಲೆಯೇ ಅವಲಂಬಿತರಾಗಿ ಬದುಕುತ್ತಿರುವ ಅಸಂಘಟಿತ ವಿಕಲಚೇತನರು ಯಾವುದೇ ಹೋರಾಟಕ್ಕಿಳಿಯಾಗದೇ, ಅನೇಕ ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.
ಸರ್ಕಾರ ಕಳೆದ ೨೦೧೩ ರಲ್ಲಿ ಅಂಗವಿಕಲರ ಸರ್ವೇ ಮಾಡಿಸಿದ್ದು, ಅದೇ ಅಂಕಿ ಸಂಖ್ಯೆಗಳನ್ನು ಮುಂದುವರೆಸುತ್ತಿದೆ. ಸರ್ವೇ ಆಗಿ ಸುಮಾರು ೧೧ ವರ್ಷ ಗತಿಸಿದರೂ ಮತ್ತೊಮ್ಮೆ ಸರ್ವೆ ಕಾರ್ಯ ಮಾಡಿಸುತ್ತಿಲ್ಲ. ಹಾಗೂ ವಿಕಲಚೇತನರ ಅಭಿವೃದ್ಧಿಗಾಗಿ ಮೀಸಲಿರಿಸಿದ ಅನುದಾನದಲ್ಲಿ ಸರ್ಕಾರ ಈಗಾಗಲೇ ಶೇ ೬೦ ರಷ್ಟನ್ನು ಬೇರೆ ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಂಡು ವಿಕಲಚೇತನರಿಗೆ ಪ್ರಸ್ತುತ ಸೌಲಭ್ಯಗಳನ್ನು ನೀಡುವಲ್ಲಿಯೂ ಕಡಿತಗೊಳಿಸಿ ಅನ್ಯಾಯ ಮಾಡುತ್ತಿದೆ.
ಅಲ್ಲದೇ ಬೇರೆ ರಾಜ್ಯಗಳಲ್ಲಿ ವಿಕಲಚೇತನರ ಮಾಶಾಸನ ರೂ. ೫೦೦೦/- ಇದ್ದು, ಆದರೆ ಕರ್ನಾಟಕದಲ್ಲಿ ಕೆಲವರಿಗೆ ಕೇವಲ ರೂ. ೮೦೦/- ಹಾಗೂ ಶೇ ೭೫ ರಷ್ಟು ವಿಕಲತೆ ಹೊಂದಿದವರಿಗೆ ರೂ. ೧೪೦೦/- ಗಳನ್ನು ಮಾತ್ರ ನೀಡಲಾಗುತ್ತಿದ್ದು, ಇದರಿಂದ ಈಗಿನ ದುಬಾರಿ ಕಾಲದಲ್ಲಿ ಅವರ ಜೀವನ ನಿರ್ವಹಣೆಗೆ ಮಾಶಾಸನ ಸಾಕಾಗುತ್ತಿಲ್ಲ.
ಯಾವುದೇ ಬೇಡಿಕೆ ಇಡದ ಮಹಿಳೆಯರಿಗೆ ಶಕ್ತಿಯೋಜನೆ ಜಾರಿ ಮಾಡಿ, ರಾಜ್ಯಾಧ್ಯಂತ ಉಚಿತ ಪ್ರಯಾಣಕ್ಕೆ ಅವಕಾಶ ಮಾಡಿಕೊಟ್ಟು, ವಿಕಲಚೇತನರನ್ನು ಮಾತ್ರ ಕಡೆಗಣಿಸಿದೆ. ಬಡ ವಿಕಲಚೇತನರು ತೀವ್ರ ಆರ್ಥಿಕ ತೊಂದರೆಯಿAದ, ನಿರುದ್ಯೋಗದಿಂದ ಪರದಾಡುತ್ತಾ, ಸಮಾಜದಲ್ಲಿ ನಿರ್ಲಕ್ಷö್ಯಕ್ಕೆ ಒಳಗಾಗಿದ್ದರೂ ಸರ್ಕಾರ ವಿಕಲಚೇತನರ ಕಡೆಗೆ ಕಿಂಚಿತ್ತೂ ಗಮನ ಹರಿಸದಿಲ್ಲದಿರುವುದು ವಿಪರ್ಯಾಸದ ಸಂಗತಿಯಾಗಿದೆ.
ತಾಲೂಕ ಆಡಳಿತ ವಿಕಲಚೇತನರ ತಾಲೂಕು ಮಟ್ಟದ ಕುಂದುಕೊರತೆಗಳ ಸಭೆಯನ್ನು ಹಮ್ಮಿಕೊಳ್ಳುವ ಮೂಲಕ ವಿಕಲಚೇತನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಲ್ಪಿಸಬೇಕು. ವಿಕಲಚೇತನರ ಹಕ್ಕುಗಳ ಕಾಯ್ದೆ ೨೦೧೬ ರನ್ವಯ ವಿಕಲಚೇತನರನ್ನು ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯವಾಗಿ ಮುಖ್ಯವಾಹಿನಿಗೆ ತರುವುದು ಸರ್ಕಾರದ ಮುಖ್ಯ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿಕಲಚೇತನರಿಗೆ ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಪುನರ್ವಸತಿಗೆ ಸಂಬAದಿಸಿದ ಮೂಲ ಸೌಕರ್ಯಗಳನ್ನು ಒದಗಿಸಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳಿಸದೆ ಇರುವುದರಿಂದ ವಿಕಲಚೇತನರು ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಮತ್ತು ಸುಮಾರು ವರ್ಷಗಳಿಂದ ತಾಲೂಕಿನಲ್ಲಿ ವಿಕಲಚೇತನರ ಕುಂದು ಕೊರತೆಗಳ ಸಭೆ ನಡೆಯದೆ ಇರುವ ಕಾರಣದಿಂದ ವಿಕಲಚೇತನರ ಹಲವಾರು ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದುಕೊಂಡಿವೆ. ಕೂಡಲೇ ಪ್ರಸ್ತುತ ನಡೆಯುತ್ತಿರುವ ಬೆಳಗಾವಿ ಅಧಿವೇಶನದಲ್ಲಿ ವಿಕಲಚೇತನರ ಸಮಸ್ಯೆಗಳ ಕುರಿತು ಚರ್ಚಿಸಿ, ಎಲ್ಲಾ ವಿಕಲಚೇತನರಿಗೆ ಸಮಾನವಾಗಿ ಸೌಲಭ್ಯಗಳನ್ನು ಒದಗಿಸಿ ನ್ಯಾಯ ಒದಗಿಸಿಕೊಡಬೇಕೆಂದು ಒತ್ತಾಯಿಸಿದರು.

About Mallikarjun

Check Also

ಗಂಗಾವತಿ-ದರೋಜಿ ರೇಲ್ವೆ ಲೈನ್ ಅನುದಾನಕ್ಕೆ ಮನವಿ.

Appeal for Gangavathi-Daroji railway line grant. ಗಂಗಾವತಿ: ನಗರದಿಂದ ದರೋಜಿ ಗ್ರಾಮಕ್ಕೆ ನೂತನವಾಗಿ ರೇಲ್ವೆ ಲೈನ್ ನಿರ್ಮಾಣಕ್ಕೆ ರಾಜ್ಯದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.