Friendly creature Muttanna Gadaga Astangata
ಕುಕನೂರು : ಮುತ್ತಪ್ಪ ಬಸಪ್ಪ ಗದಗ(70) ಸಾ. ಚಿಕ್ಕೇನಕೊಪ್ಪ ಇವರು ದಿ.09.12.2024 ರಂದು ಹೃದಯಾಘಾತದಿಂದ ನಿಧನರಾಗಿರುತ್ತಾರೆ.
ಇವರ ಅಂತ್ಯಕ್ರಿಯೆ ನಾಳೆ ದಿ. 10.12.2024ರಂದು ಚಿಕ್ಕೇನಕೊಪ್ಪದಲ್ಲಿ ಮಧ್ಯಾಹ್ನ 1.00 ಗಂಟೆಗೆ ನೆರವೇರಲಿದೆ. ಮೃತರಿಗೆ ಓರ್ವ ಪುತ್ರಿ ಇದ್ದು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರು ಕುಕನೂರು ಬಸ್ ನಿಲ್ದಾಣದಲ್ಲಿ ಸುಮಾರು ಹತ್ತು ವರ್ಷಗಳ ಕಾಲ ನಿರಂತರವಾಗಿ ಪಾನ್ ಶಾಪ್ ಮಾಡುತ್ತಾ ಬಸ್ ನಿಲ್ದಾಣದ ಸಿಬ್ಬಂದಿಯೊಂದಿಗೆ ಅಧಿಕಾರಿಗಳೊಂದಿಗೆ ಉತ್ತಮ ಸ್ನೇಹ, ಬಾಂಧವ್ಯ ಹೊಂದಿದ್ದ ಮುತ್ತಣ್ಣ ಅವರು ಬಸ್ ನಿಲ್ದಾಣದಲ್ಲಿ ಪ್ರತಿ ಧ್ವಜಾ ರೋಹಣದಲ್ಲಯು ಅವರು ಬೆಳಗ್ಗೆ 4 ಗಂಟೆಯಿಂದ ದ್ವಜಾ ರೋಹಣದ ಸಕಲ ಸಿದ್ದತೆಗೆ ಕೈ ಜೋಡಿಸಿ ಬೆಳಗ್ಗೆ ಅವರೇ ಕಂಬಕ್ಕೆ ಧ್ವಜ ಕಟ್ಪುವ ಉಸ್ತುವಾರಿ ನಡೆಸುತ್ತಿದ್ದರು. ಜೊತೆಗೆ ಚಾಲಕ, ನಿರ್ವಾಹಕರಿಗೆ ದೊಡ್ಡಪ್ಪ, ಚಿಕ್ಕಪ್ಪ ಮಾವನಾಗಿ ಎಲ್ಲರೊಂದಿಗೂ ಅನ್ಯೂನ್ಯತೆಯಿಂದ ಒಡನಾಟ ಹೊಂದಿದ್ದರು.
ಮೊನ್ನೆ ತಾನೇ ನವೆಂಬರ್ 1ರಂದು ಕನ್ನಡ ದ್ವಜಾರೋಹಣದಲ್ಲಿ ಭಾಗಿಯಾಗಿದ್ದು ಕಣ್ಮುಂದೆ ಇದೆ ಎಂದು ಬಸ್ ನಿಲ್ದಾಣದ ಸಿಬ್ಬಂದಿ ನೆನೆದು ಸಂತಾಪ ಸೂಚಿಸಿದರು. ಇವರು ಇಂದು ಅಕಾಲಿಕ ಮರಣ ಕುಕನೂರಿನ ಆತ್ಮೀಯರಿಗೆ ನೋವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಆ ಭಗವಂತ ಶಾಂತಿ ನೀಡಿ ಕುಟುಂಬಕ್ಕೆ ದುಖಃ ಭರಿಸುವ ಶಕ್ತಿಯನ್ನು ನೀಡಲಿ ಎಂದು ಆತ್ಮೀಯರ ಭಗವಂತನಲ್ಲಿ ಪ್ರಾರ್ಥಿಸಿದರು.