Attempt to murder a youth of Chandur village: the accused escaped.
ಕುಕನೂರ : ತಾಲೂಕಿನ ಚಂಡೂರ ಗ್ರಾಮದ ಮರ್ತುಜಾ ಸಾಬ ನದಾಫ್ (42) ಈ ವ್ಯಕ್ತಿಯು ಚಂಡೂರ ಗ್ರಾಮದ ತಮ್ಮ ಮನೆಯಿಂದ ಕುಕನೂರಿಗೆ ದೇವಸ್ಥಾನಕ್ಕೆಂದು ಹೊರಟ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಏಕಾ, ಏಕಿ ಹಲ್ಲೆ ನಡೆಸಿ ಕೊಲೆ ಮಾಡಲು ಯತ್ನಿಸಿದಾಗ ಕುತ್ತಿಗೆಯ ಭಾಗಕ್ಕೆ ಬಲವಾದ ಗಾಯವಾಗಿದೆ.
ಈ ವ್ಯಕ್ತಿ ಹಲ್ಲೆಗೊಳಗಾಗುತ್ತಿದ್ದಂತೆ ಕಿರುಚಾಡುತ್ತ ಊರಿನೊಳಗೆ ಬಂದಿದ್ದು, ಸ್ಥಳೀಯರು ಕುಕನೂರು ಠಾಣೆಗೆ ಸುದ್ದಿ ತಿಳಿಸುತ್ತಿದ್ದಂತೆ ಹಲ್ಲೆಗೊಳಗಾದ ವ್ಯಕ್ತಿಯನ್ನು ಅಂಬುಲೆನ್ಸ್ ಮೂಲಕ ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.
ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದು ಬಂದಿದೆ.
ವ್ಯಕ್ತಿಯು ಗಂಭೀರವಾಗಿ ಗಾಯಗೊಂಡಿದ್ದರಿಂದ ಗುಣಮುಖವಾದ ನಂತರ ಹೇಳಿಕೆಯನ್ನು ಪಡೆಯಲಾಗುವುದು ಎಂದು ತಿಳಿಸಿದ್ದು, ಈ ಕುರಿತು ಕುಕನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ಕುಕನೂರು ಠಾಣೆಯಿಂದ ತಿಳಿದು ಬಂದಿದೆ.