M2025-26 Narega Action Plan Gram Sabha in Sahari
ಗ್ರಾಮೀಣಾಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿ ಮರಳಿ ಗ್ರಾಪಂ ಪಿಡಿಓ ಬಸವರಾಜ ಗೌಡ್ರ ಹೇಳಿಕೆ
ಗಂಗಾವತಿ : ಹಳ್ಳಿಗಳ ಅಭಿವೃದ್ಧಿಗೆ ನರೇಗಾ ಯೋಜನೆ ಸಹಕಾರಿಯಾಗಿದೆ ಎಂದು ಮರಳಿ ಗ್ರಾಪಂ ಪಿಡಿಓ ಬಸವರಾಜ ಗೌಡ್ರ ಹೇಳಿದರು.
ತಾಲೂಕಿನ ಮರಳಿ ಗ್ರಾಮ ಪಂಚಾಯತ್ ಕಾರ್ಯಾಲಯದಲ್ಲಿ 2025-26 ನೇ ಸಾಲಿನ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ಕ್ರಿಯಾಯೋಜನೆ ತಯಾರಿಕೆ ಕುರಿತು ಶುಕ್ರವಾರ ಆಯೋಜಿಸಿದ್ದ ಗ್ರಾಮಸಭೆ ಹಾಗೂ ವಿಕಲಚೇತನರ ವಿಶೇಷ ಗ್ರಾಮಸಭೆಯಲ್ಲಿ ಮಾತನಾಡಿದರು.
ಫಲಾನುಭವಿಗಳು ನರೇಗಾದಡಿ ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು.
ಈ ಬಾರಿ ಆನ್ ಲೈನ್ ನಲ್ಲಿ ಕ್ರಿಯಾಯೋಜನೆ ಅಪ್ಲೋಡ್ ಮಾಡಬೇಕಿದೆ. ಜೊತೆಗೆ ಕ್ಯೂಆರ್ ಕೋಡ್ ಬಳಸಿ ಸಲ್ಲಿಸಿದ ಬೇಡಿಕೆಗಳ ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು. ವಾರ್ಡ್ ಸಭೆಗಳಲ್ಲಿ ಬಂದ ಕಾಮಗಾರಿಗಳ ಬೇಡಿಕೆಗಳನ್ನು ಕ್ರಿಯಾಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಜೊತೆಗೆ ನರೇಗಾದಡಿ ಒಂದು ಕುಟುಂಬಕ್ಕೆ ವರ್ಷಕ್ಕೆ 100 ದಿನಗಳ ದುಡಿಯಲು ಅವಕಾಶ ಇದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ವಿಕಲಚೇತನರು ಸರಕಾರಿ ಸೌಲಭ್ಯ ಪಡೆಯಬೇಕು. ನರೇಗಾದಡಿ ವಿಕಲಚೇತನರಿಗೆ ಪ್ರತ್ಯೇಕ ಎನ್ ಎಂ ಆರ್ ತೆಗೆದು ಕೆಲಸ ನೀಡಲಾಗುವುದು ಎಂದರು.
ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ ಅವರು, ‘ನರೇಗಾ ಯೋಜನೆ ಸೌಲಭ್ಯಗಳ’ ಕುರಿತು ಮಾಹಿತಿ ನೀಡಿದರು.
ಈ ವೇಳೆ ಗ್ರಾಪಂ ಅಧ್ಯಕ್ಷರಾದ ಹುಸೇನಮ್ಮ ಸುರೇಶ ಅಧ್ಯಕ್ಷತೆ ವಹಿಸಿದ್ದರು.
ಗ್ರಾಮಸಭೆ ನೋಡಲ್ ಅಧಿಕಾರಿಗಳು ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ರೋಷಣ್ಣ, ಗ್ರಾಪಂ ಸದಸ್ಯರಾದ ಶಿವಲಿಂಗಪ್ಪ, ವಿರುಪಾಕ್ಷಪ್ಪ ಹೇಮಗುಡ್ಡ, ಎಸ್ ಡಿಎ ರಮೇಶ, ಗ್ರಾಪಂ ಸಿಬ್ಬಂದಿಗಳು ಹಾಗೂ ನರೇಗಾ, ಎನ್ ಆರ್ ಎಲ್ ಎಂ ಸಂಜೀವಿನಿ ಯೋಜನೆ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.