Pro-Kannada organization and farmers’ representatives went to Amulkacheri in Koramangala and protested
ಕೋರಮಂಗಲ : ನಂದಿನಿಗೆ ತಡೆ- ಅಮುಲ್ ವಿರುದ್ಧ ಪ್ರತಿಭಟನೆಕರ್ನಾಟಕದ ನಂದಿನಿ ಹಾಲಿನ ಉತ್ಪನ್ನಗಳನ್ನು ದೆಹಲಿಯಲ್ಲಿ ಮಾರಾಟ ಮಾಡಲು
ಅಡೆತಡೆ ಸೃಷ್ಟಿಸುತ್ತಿದ್ದಾರೆ ಎಂಬ ಸುದ್ದಿಯ ಹಿನ್ನೆಲೆಯಲ್ಲಿ ಇಂದು ಡಿಸೆಂಬರ್-೫ ರಂದು
ಕನ್ನಡಪರ ಸಂಘಟನೆಗಳು ಹಾಗೂ ರೈತ ಪ್ರತಿನಿಧಿಗಳು ಕೋರಮಂಗಲದಲ್ಲಿರುವ ಅಮುಲ್
ಕಚೇರಿಗೆ ತೆರಳಿ ಪ್ರತಿಭಟಿಸಿದರು. ಕನ್ನಡ ಚಳವಳಿಯ ಹಿರಿಯ ಮುಖಂಡರಾದ ಶೆ.ಬೊ.
ರಾಧಾಕೃಷ್ಣ, ನಾವೇ ಕರ್ನಾಟಕ ಸಂಘಟನೆಯ ಮುಖಂಡ ಪಾರ್ವತೀಶ ಬಿಳಿದಾಳೆ
ಮತ್ತಿತರರು ಪಾಲ್ಗೊಂಡಿದ್ದರು.
ನಂದಿನಿ ಉತ್ಪನ್ನಗಳಿಗೆ ಇಂಡಿಯಾ ಒಕ್ಕೂಟದ ರಾಜಧಾನಿ ದೆಹಲಿಯಲ್ಲಾಗಲಿ
ಅಥವಾ ಉತ್ತರ ಭಾರತದ ಯಾವುದೇ ರಾಜ್ಯಗಳಲ್ಲಾಗಲಿ ವ್ಯಾಪಾರ ವಹಿವಾಟು ನಡೆಸಲು
ಅಡೆತಡೆ ಉಂಟು ಮಾಡಿದಲ್ಲಿ ಕರ್ನಾಟಕದಲ್ಲಿ ಅಮುಲ್ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ
ಕರೆ ನೀಡಿ ಪ್ರಚಾರಾಂದೋಲನವನ್ನು ನಡೆಸಲಾಗುವುದು ಎಂದು ಎಚ್ಚರಿಸಲಾಯಿತು.
ಕನ್ನಡ ಪರ ಸಂಘಟನೆಗಳ ನೀಡಿದ ಆಗ್ರಹ ಪತ್ರವನ್ನು ಸ್ವೀಕರಿಸಿದ ಅಮುಲ್ ಕಂಪನಿಯ
ಬೆAಗಳೂರು ಮಾರುಕಟ್ಟೆ ವಿಭಾಗ ಮುಖ್ಯಸ್ಥರಾದ ನಾಗೇಶ್ ರವರು ಈ ವಿಚಾರ ಕುರಿತಂತೆ
ಗುಜರಾತ್‌ನ ಕೇಂದ್ರಕಚೇರಿಗೆ ಮಾಹಿತಿ ನೀಡುವುದಾಗಿ ಅಧೀಕಾರಿಗಳು ತಿಳಿಸಿದ್ದಾರೆ