Opportunity for inclusion of young voters Information from Ravikumar Nayakavadi, Head of Election Department
ಗಂಗಾವತಿ : ನಗರದ ಸಂಕಲ್ಪ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದಲ್ಲಿ ತಾಲೂಕು ಆಡಳಿತ & ತಾಲೂಕು ಸ್ವೀಪ್ ಸಮಿತಿ ವತಿಯಿಂದ ಮತದಾರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯಕ್ರಮ ಗುರುವಾರ ಮಾಡಲಾಯಿತು.
ಚುನಾವಣೆ ವಿಭಾಗದ ಶಿರಸ್ತೇದಾರರಾದ ರವಿಕುಮಾರ್ ನಾಯಕವಾಡಿ ಅವರು ಮಾತನಾಡಿ, ಗಂಗಾವತಿ ವಿಧಾನಸಭಾ ಕ್ಷೇತ್ರದ 18 ವರ್ಷ ಮೇಲ್ಪಟ್ಟ ಎಲ್ಲ ಯುವ ಮತದಾರರು ಪಟ್ಟಿಯಲ್ಲಿ ಹೆಸರು ನೋಂದಾಯಿಸಬೇಕು.
ಹೊಸ ಮತದಾರರ ನೋಂದಣಿ, ತಿದ್ದುಪಡಿಗೆ ಅವಕಾಶ ಇದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ನಂತರ ವೋಟರ್ ಹೆಲ್ಪ್ ಲೈನ್ ನಲಿ ನೋಂದಣಿ ಮಾಡುವ ವಿಧಾನಗಳ ಕುರಿತು ಮಾಹಿತಿ ನೀಡಿದರು.
ಕಾಲೇಜು ಪ್ರಾಚಾರ್ಯರಾದ
ಬಸವರಾಜ ಸಿರಿಗೇರಿ, ಉಪನ್ಯಾಸಕರಾದ ರಮೇಶ, ತಾಲೂಕು ಪಂಚಾಯತ್ ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ ಇದ್ದರು.