Breaking News

ಡಾ.ಜಿ.ಚಂದ್ರಪ್ಪ ಅವರಿಗೆ ಔಷಧ ವ್ಯಾಪಾರಿಗಳಿಂದ ಸನ್ಮಾನ.

Dr.G.Chandrappa is honored by drug traders.

ಜಾಹೀರಾತು

ಗಂಗಾವತಿ:ಕನ್ನಡ ರಾಜ್ಯೊತ್ಸವ ಸುವರ್ಣ ಸಂಭ್ರಮ ಪ್ರಶಸ್ತಿ ಭಾಜನರಾದ ನಗರದ ಹೃದಯ ರೋಗ ತಜ್ಞ ಡಾ.ಜಿ.ಚಂದ್ರಪ್ಪ ಅವರನ್ನು ನಗರದ ಔಷಧೀಯ ಭವನದಲ್ಲಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಮಾತನಾಡಿದ ಡಾ.ಚಂದ್ರಪ್ಪ ಅವರು ತಾವು ವೈದ್ಯಕೀಯ ವೃತ್ತಿ ಜೀವನದ ಹಲವು ಮಜಲುಗಳನ್ನು ಸಭೆಗೆ ತಿಳಿಸಿದ್ದಲ್ಲದೆ,ಪ್ರಸ್ತುತ ದಿನಮಾನಗಳಲ್ಲಿ 35 ವರ್ಷ ವಯಸ್ಕರು ಸಹ ಆರೋಗ್ಯ ತಪಾಸಣೆಗೆ ಒಳಗಾಗಬೇಕಾದ ಸ್ಥಿತಿ ಇದೆ.

ಜನರು ಯಾವುದೇ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸದೆ,ಆರೋಗ್ಯ ತಪಾಸಣೆಗೆ ಒಳಗಾಗಬೇಕಾದ ಅನಿವಾರ್ಯತೆ ಇದೆ.ಔಷಧ ವ್ಯಾಪಾರಿಗಳ ಪಾಲು ಸಹ ಇದರಲ್ಲಿದ್ದು ,ತಮ್ಮ ಅನಾರೋಗ್ಯದ ಬಗ್ಗೆ ಮಾಹಿತಿ ನೀಡುವ ಯಾರನ್ನೇ ಆಗಲಿ ಹತ್ತಿರದ ವೈದ್ಯರ ಬಳಿ ಚಿಕಿತ್ಸೆ ಪಡೆಯಲು ಸೂಚಿಸಿ,ಅವರ ಆರೋಗ್ಯ ಕಾಪಾಡಬೇಕು ಎಂದವರು ಕರೆ ನೀಡಿದರು.

ಸಮಾರಂಭದ ಆರಂಭದಲ್ಲಿ ಮಾತನಾಡಿದ ಲ್ಯಾಪ್ರೊಸ್ಕೋಪಿಕ್ ಸರ್ಜನ್ ಡಾ.ವಿ.ಎಸ್.ಎನ್.ಡಿ.ರಾಯಲು,ಜನರು ತಮ್ಮ ಪಾದ ಮತ್ತು ಕಾಲುಗಳ ಬಗ್ಗೆ ಜಾಗ್ರತೆವಹಿಸಬೇಕು.ವೆರಿಕೋಸ್ ವೇನ್ಸ್ ಮತ್ತು ಡಯಾಬೆಟಿಕ್ ಫ಼ುಟ್ ಗಳನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದರು.ಔಷಧ ವ್ಯಾಪಾರಿಗಳು ಕಾಲುಗಳ ಪರೀಕ್ಷೆಯ ತಪಾಸಣಾ ಕಾರ್ಯಕ್ರಮಗಳನ್ನು ಆಯೋಜಿಸಲಿ ಎಂದು ಆಶಿಸಿದರು.

ಕರ್ನಾಟಕ ರಾಜ್ಯ ವೈಧ್ಯಕೀಯ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ನಗರದ ಶಸ್ತ್ರ ಚಿಕಿತ್ಸಕರಾದ ಡಾ‌.ವಿ.ವಿ.ಚಿನಿವಾಲರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಹೊಸಳ್ಳಿ ರಸ್ತೆಯಲ್ಲಿ ಚರ್ಮ ರೋಗ ಚಿಕಿತ್ಸೆಯ ಕ್ಲಿನಿಕ್ ಹೊಂದಿರುವ ಡಾ‌.ಭರತ್ ಮೇಕಾ ಬಸಾಪಟ್ಟಣ ಮತ್ತು ಕಾರಟಗಿಯಲ್ಲಿ ಪಂಚಕರ್ಮ ಚಿಕಿತ್ಸಾ ಆಸ್ಪತ್ರೆಯ ಡಾ.ಯರೇಶ್ವರಿ ದೇವಿ ಮಾತನಾಡಿದರು.

ವೇದಿಕೆಯ ಮೇಲೆ ರಾಯಚೂರು ರಸ್ತೆಯಲ್ಲಿ ಇರುವ ಶರಣ ಬಸವ ಮಲ್ಟಿ ಸ್ಪೇಷಲ್ ಹಾಸ್ಪಿಟಲ್ ವೈಧ್ಯ ಡಾ.ಶರಣ ಬಸವ ಹೊಸ್ಕೇರಾ,ಜುಲೈ ನಗರದಲ್ಲಿ ಆಸ್ಪತ್ರೆ ಹೊಂದಿರುವ ಚರ್ಮ ರೋಗ ತಜ್ಞ ಡಾ.ಸಂದೇಶ ಶೆಟ್ಟಿ ಹಾಗೂ ಶ್ರೀಮತಿ ಸಂಧ್ಯಾ ಹೇರೂರ ಆಸೀನರಾಗಿದ್ದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ,ತಮ್ಮಲ್ಲಿ ಸಮಸ್ಯೆ ಹೇಳಿಕೊಂಡು ಬರುವ ರೋಗಿಗಳನ್ನು ವೈಧ್ಯರ ಬಳಿ ಕಳುಹಿಸಿ,ಅವರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಶ್ರಮ ವಹಿಸಬೇಕೆಂದು ಔಷಧ ವ್ಯಾಪಾರಿಗಳಿಗೆ ಸೂಚಿಸಿದರು.

ನ್ಯಾಯವಾದಿಗಳ ದಿನದ ಅಂಗವಾಗಿ ಅಶೋಕಸ್ವಾಮಿ ಹೇರೂರ ಮತ್ತು ಶ್ರೀಮತಿ ಸಂಧ್ಯಾ ಹೇರೂರ ಮತ್ತು ಗಂಗಾವತಿ ತಾಲೂಕು ಆರಾಧನಾ ಸಮಿತಿ ಸದಸ್ಯರಾಗಿ ಆಯ್ಕೆಯಾಗಿರುವ ವಿಶ್ವನಾಥ ಮಾಲಿ ಪಾಟೀಲ್ ಕೇಸರಹಟ್ಟಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಸೇ೦ಟ್ ಫ಼ಾಲ್ಸ್ ಫ಼ಾರ್ಮಸಿ ಕಾಲೇಜು ಪ್ರಾಚಾರ್ಯರಾದ ಮಂಜುನಾಥ ಹಿರೇಮಠ ಬೂದಗುಂಪಾ ಕಾರ್ಯಕ್ರಮವನ್ನು ನಿರೂಪಿಸಿದರು. ವೀರಣ್ಣ ಕಾರಂಜಿ, ಅಮರೇಶ್ ಅರಳಿ,ಹನುಮರೆಡ್ಡಿ ಮಾಲಿ ಪಾಟೀಲ್, ಪಶುಪತಿ ಪಾಟೀಲ್, ರಾಜಶೇಖರಯ್ಯ, ಚಿದಾನಂದ,ಕಲ್ಯಾಣ ರಾವ್ ಸೇರಿದಂತೆ ಹಲವು ಔಷಧ ವ್ಯಾಪಾರಿಗಳು ಭಾಗವಹಿಸಿದ್ದರು.

About Mallikarjun

Check Also

ಹನುಮಮಾಲಾ ವಿಸರ್ಜನೆ ಸಿದ್ಧತಾ ಕಾರ್ಯಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಭೇಟಿ, ಪರಿಶೀಲನೆ ಪರಿಶೀಲನೆ

Hanumamala Dissolution Work District Officers, GPM CEO visit, verification inspection ಭಕ್ತರಿಗೆ ಯಾವ ತೊಂದರೆಯಾಗದಂತೆ ಕ್ರಮವಹಿಸಲು ಸೂಚನೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.