Install PM Suryagarh! Go for eco-friendly power generation: Bagalkot

ಕೊಪ್ಪಳ : ಪಿಎಂ ಸೂರ್ಯಘರ್ ಯೋಜನೆ ಅದ್ಬುತ ಯೋಜನೆಯಾಗಿದ್ದು ಈ ಯೋಜನೆ ಸದುಪಯೋಗ ಪಡೆದು ಪರಿಸರ ಸ್ನೇಹಿ ವಿದ್ಯುತ್ ಉತ್ಪಾದಿಸಲು ಪ್ರತಿಯೋಬ್ಬರು ಮುಂದಾಗಬೇಕು ಎಂದು ಕುಕನೂರು ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ರವೀಂದ್ರ ಬಾಗಲಕೋಟ ಹೇಳಿದರು.
ಅವರು ಕುಕನೂರು ಪಟ್ಟಣದಲ್ಲಿ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಕುಕನೂರು ಇಲಾಖೆ ಪಿಎಂ ಸೂರ್ಯಘರ, ಮುಪ್ತ ಬಿಜಲಿ ಯೋಜನೆಯ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿ ಈಗ ಸರಕಾರ ಎಲ್ಲರಿಗೂ ಉಚಿತ ವಿದ್ಯುತ್ ಪೂರೈಕೆ ಮಾಡುತ್ತಿದೆ ಆದರೂ ಮುಂದಿನ ದಿನಗಳಲ್ಲಿ ಯಾವುದೇ ಸರಕಾರ ಬಂದರೂ ಕೂಡಾ ಇದೆ ಯೋಜನೆ ಮುಂದೊರೆಸುತ್ತಾರೆ ಎನ್ನುವ ಭರವಸೆ ಇಲ್ಲಾ ಹಾಗಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಮಹತ್ವದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ನಾನು ಕೂಡಾ ಈ ಯೋಜನೆಯ ಲಾಭ ಪಡೆದಿದ್ದು ಸೂರ್ಯಘರ ಯೋಜನೆಯಲ್ಲಿ ಶೇ. 60ರಷ್ಟು ಸಬ್ಸಿಡಿ ನೀಡುತ್ತಿದ್ದು ಒಟ್ಟು 2ಲಕ್ಷ 40 ಸಾವಿರದವರೆಗೂ ಸಬ್ಸಿಡಿ ದೊರೆಯುತ್ತಿರುವದರಿಂದ ಹೆಚ್ಚಿನ ಮಾಹಿತಿಗೆ ನಿಮ್ಮ ಸಮೀಪದ ಕೆಇಬಿಗಳನ್ನು ಸಂಪರ್ಕಿಸಿ ಮೂಲ ದಾಖಲಾತಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಿ ಎಂದರು.
ನಂತರದಲ್ಲಿ ಕುಕನೂರು ವಿದ್ಯುತ್ ಶಾಖೆಯ ಪ್ರಭಾರಿ ಅಧಿಕಾರಿ ನಾಗರಾಜ ಮಾತನಾಡಿ ಪಿಎಂ ಸೂರ್ಯಘರ ಯೋಜನೆಯಲ್ಲಿ ನಮ್ಮ ಮನೆಗಳ ಮೇಲೆ ಸೋಲಾರ ಅಳವಡಿಸಿ ವಿದ್ಯುತ್ ನ್ನು ಪಡೆಯಬಹುದಾಗಿದ್ದು, ಈ ಯೋಜನೆಯಡಿಯಲ್ಲಿ ಶೇ. 60ರಷ್ಟು ಸರಕಾರ ಸಹಾಧನ ಒದಗಿಸಲಿದ್ದು ಈ ಯೋಜನೆ ಲಾಭ ಪಡೆದುಕೊಳ್ಳಿ ಎಂದರು.
ಇದಕ್ಕೆ ರಾಷ್ಟ್ರಿಕೃತ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯವು ಕೂಡಾ ಇದೆ. 1 ಕಿಲೋ ವ್ಯಾಟ್ ಗೆ 30 ಸಾವಿರ, 2 ಕಿಲೋ ವ್ಯಾಟ್ ಗೆ 60 ಸಾವಿರ, 3ಕಿಲೋ ವ್ಯಾಟ್ ಗೆ 78 ಸಾವಿರ ಸಬ್ಸಿಡಿ ದೊರೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈ ಯೋಜನೆ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕುಕನೂರು ಪಟ್ಟಣದ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಅಧಿಕಾರಿಗಳು, ಸಿಬ್ಬಂದಿಗಳು, ಪಟ್ಟಣ ಪಂಚಾಯತ ಸಿಬ್ಬಂದಿವರು, ಸಾರ್ವಜನಿಕರು ಇದ್ದರು.
ವರದಿ : ಪಂಚಯ್ಯ ಹಿರೇಮಠ,,