Works going on without name plates in Allegation

ಕೇಲವೊಂದು ಕಡೆಗಳಲ್ಲಿ ಕಳಪೆ ಕಾಮಗಾರಿ ಎಂದು ಗುತ್ತಿಗೆದಾರರಿಗೆ ಕಿರುಕುಳ,,,
ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಯಲಬುರ್ಗಾ, ಕುಕನೂರು ಅವಳಿ ತಾಲೂಕಿನಲ್ಲಿ ಹಲವಾರು ಸರಕಾರಿ ಕಟ್ಟಡ ಸೇರಿದಂತೆ ವಿವಿಧ ಕಾಮಗಾರಿಗಳು ನಡೆಯುತ್ತಿದ್ದು ಅವುಗಳ ಮಾಹಿತಿ ಕುರಿತು ಯಾವುದೇ ನಾಮ ಫಲಕ ಅಳವಡಿಸದೇ ಕಾಮಗಾರಿಗಳನ್ನು ನಡೆಸುತ್ತಿದ್ದಾರೆ ಎಂದು ಪ್ರಜ್ಞಾವಂತ ನಾಗರಿಕರು ಆರೋಪಿಸಿದ್ದಾರೆ.
ಕಾಮಗಾರಿಯನ್ನು ಗುತ್ತಿಗೆ ಪಡೆದ ಇಲಾಖೆಯಾಗಲಿ ಅಥವಾ ಹೊರ ಗುತ್ತಿಗೆದಾರರಾಗಲಿ ಇದು ಯಾವ ಕಾಮಗಾರಿ, ಈ ಕಾಮಗಾರಿಯು ಯಾವ ಅನುದಾನದಲ್ಲಿ ಹಾಗೂ ಎಷ್ಟು ಮೊತ್ತದಲ್ಲಿ, ಎಷ್ಟು ವರ್ಷ ಇದರ ನಿರ್ವಹಣೆ ಹೊಣೆ ಇರುತ್ತದೆ ಎನ್ನುವ ಕುರಿತು ನಾಮ ಫಲಕ ಅಳವಡಿಸದೇ ತಮಗೆ ಬೇಕಾದ ರೀತಿಯಲ್ಲಿ ಕಾಮಗಾರಿ ಮಾಡಿ ಮುಗಿಸಲು ಮುಂದಾಗಿದ್ದಾರೆ ಎಂದು ಸಾರ್ವಜನಿಕ ವಲಯದ ಮಾತಾಗಿದೆ.
ಈ ಕುರಿತು ಹೆಸರು ಹೇಳಲು ಇಚ್ಚಿಸದ ವ್ಯಕ್ತಿಯೊಬ್ಬರೂ ಪತ್ರಿಕೆಯೊಂದಿಗೆ ಮಾತನಾಡಿ ಕಾಮಗಾರಿ ನಡೆಯುವಲ್ಲಿಗೆ ಕೇಲವೊಂದಿಷ್ಟು ಜನ ತೆರಳಿ ಮುಖಂಡರು ಎಂದು ಹೇಳಿಕೊಂಡು ಗುತ್ತಿಗೆದಾರರಿಗೆ ಹೆದರಿಸಿ, ಬೆದರಿಸಿ ವಸೂಲಿಗೆ ನಿಂತಿದ್ದಾರೆ. ಅವರು ಬೆದರಿಸಿ ತೆಗೆದುಕೊಂಡು ಹೋಗುತ್ತಿರುವ ಸಾಮಗ್ರಿಗಳ ಕುರಿತು ಮಾಹಿತಿ ಇದೆ. ಅದನ್ನು ಸದ್ಯದಲ್ಲಿಯೇ ಬಹಿರಂಗ ಪಡಿಸುತ್ತೇವೆ. ಅದು ಸ್ಪಷ್ಟ ಮಾಹಿತಿಯೊಂದಿಗೆ ಮಾಧ್ಯಮದ ಮುಂದೆ ಹಿಡಿಯುತ್ತೇವೆ ಎಂದು ತಿಳಿಸಿದ್ದಾರೆ.
ಈ ಕುರಿತಂತೆ ತಾಲೂಕಿನ ವಿವಿಧೆಡೆ ನಡೆಯುತ್ತಿರುವ ಸರಕಾರಿ ಕಾಮಗಾರಿಗಳ ಕುರಿತು ನಾಮ ಫಲಕ ಅಳವಡಿಸಿ ಗುಣ ಮಟ್ಟದ ಕಾಮಗಾರಿ ಮಾಡುವ ಮೂಲಕ ಯಾರ ಯಾವ ಒತ್ತಡಕ್ಕೂ ಮಣಿಯದೇ ಉತ್ತಮ ಗುಣ ಮಟ್ಟದ ಕಾಮಗಾರಿ ಮಾಡಲು ಗುತ್ತಿಗೆದಾರರು ಮುಂದಾಗಬೇಕು, ಒಂದು ವೇಳೆ ಯಾರಾದರೂ ಬೆದರಿಕೆ ನೀಡಿದಲ್ಲಿ ಅವರ ಮೇಲೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಗುತ್ತಿಗೆದಾರರು ಮುಂದಾಗಬೇಕು ಎನ್ನುವುದು ಪ್ರಜ್ಞಾವಂತರ ಅಭಿಪ್ರಾಯವಾಗಿದೆ.