Breaking News

ಗುಳೆ : ಕೂಡಲ ಸಂಗಮದಲ್ಲಿ 2025 ನೇ ಜನೆವರಿ 12,13,& 14, ರಂದು ನಡೆಯುವ 38 ನೇ ಶರಣ ಮೇಳದ ಪ್ರಚಾರಾರ್ಥವಾಗಿ ಕಾರ್ಯಕ್ರಮ

Gule : A program to promote the 38th Sharan Mela to be held on January 12, 13, & 14, 2025 at Kudala Sangam.

ಜಾಹೀರಾತು

ದೀನ ದಲಿತರ ಜೀವನದುಸಿರಾಗಿ ಭಂಡಾಯದ ಭಾವುಟವನೆತ್ತಿದ ಪ್ರಥಮ ಬಂಡಾಯಗಾರ ವಿಶ್ವಗುರು ಬಸವಣ್ಣ ಸದ್ಗುರು ಅನಿಮೀಶಾನಂದ ಸ್ವಾಮೀಜಿ ಬಸವ ಮಂಟಪ ಜೀಯಾಗೂಡು ಸ್ಪಷ್ಟನೆ .

ಯಲಬುರ್ಗಾ ತಾಲೂಕಿನ *ಗುಳೆ ಗ್ರಾಮದಲ್ಲಿ, ವಿಶ್ವಗುರು ಬಸವಣ್ಣನವರು ನಡೆದಾಡಿದ ಪವಿತ್ರ ಭೂಮಿ ಕೂಡಲ ಸಂಗಮದಲ್ಲಿ 2025 ನೇ ಜನೆವರಿ 12,13,& 14, ರಂದು ನಡೆಯುವ *38 ನೇ ಶರಣ ಮೇಳದ* ಪ್ರಚಾರಾರ್ಥವಾಗಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕ ಮಾತನಾಡದ ಶರಣ ಬಸವರಾಜ ಹೂಗಾರ ಇವರು, 12 ನೇ ಶತಮಾನದಲ್ಲಿ ಬಸವಾದಿ ಶಿವ ಶರಣರಿಗೆ ನಡೆ ನುಡಿ ಆಚಾರ ವಿಚಾರ ಕಲಿಯಲು ಬಸವಣ್ಣನವರು ನಿರ್ಮಾಣ ಮಾಡಿದ ಅನುಭವ ಮಂಟಪದಲ್ಲಿ ನಡೆಯುತಿತ್ತು. ಇಂದು ನಮಗೆ ಧಾರ್ಮಿಕ ಸಾಂಸ್ಕೃತಿಕ ಸಾಂಸ್ಕೃತಿಕ ಸಂಸ್ಕಾರ ಕಲಿಯಬೇಕಾದರೆ ಕೂಡಲ ಸಂಗಮದಲ್ಲಿ ನಡೆಯುವ ಶರಣ ಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲ್ಲಿ ನಡೆಯುವ ಶರಣ ಚಿಂತನೆಗಳನ್ನು ಮೈಗೂಡಿಸಿಕೊಂಡು ಬದುಕಿದರೆ ನಮ್ಮ ಜೀವನ ಪಾವನ ಆಗುತ್ತದೆ ಎಂದರು. ಕಾರ್ಯಕ್ರಮದಲ್ಲಿ ಪರಮ ಪೂಜ್ಯ ಡಾ ಗಂಗಾ ಮಾತಾಜಿಯವರ ಅನುಪ ಸ್ಥಿತಿಯಲ್ಲಿ, ಸದ್ಗುರು ಅನಿಮೀಶಾನಂದ ಸ್ವಾಮೀಜಿ ಬಸವ ಮಂಟಪ ಜೀಯಾಗೂಡು ಇವರು ಸಾನಿದ್ಯ ವಹಿಸಿ ಮಾತನಾಡಿದ ಇವರು ಗುರು ಬಸವಣ್ಣನವರ ವಚನ ಸಾಹಿತ್ಯದಂತೆ ಯಾವ ರೀತಿ ಕಲ್ಲೊಳಗೆ ಹೊನ್ನು, ಮರದೊಳಗೆ ಅಗ್ನಿ ಮತ್ತು ಹಾಲೊಳಗೆ ತುಪ್ಪವುಂಟೊ ಹಾಗೆಯೇ ನಮ್ಮೆಲ್ಲರ ಅಂತರ್ಯಾಮಿಯಲ್ಲಿ ಶಿವನಿರುತ್ತಾನೆ. ಗುರು ಬಸವಣ್ಣನವರು ಈ ಲೋಕ ಕಂಡ ವಿಸ್ಮಯ, ಕಾಯಕ ಸೂತ್ರದ ತಾಯಿ ಬೇರು, ದೀನ ದಲಿತರ ಜೀವನದುಸಿರಾಗಿ ಭಂಡಾಯದ ಭಾವುಟವನೆತ್ತಿದ ಪ್ರಥಮ ಬಂಡಾಯಗಾರ ವಿಶ್ವಗುರು ಬಸವಣ್ಣನವರು. ಸಾಮಾನ್ಯವಾಗಿ, ಮರವೆಯಿಂದ, ಅಥವಾ ಅಜ್ಞಾನದ ಕತ್ತಲೆಯಿಂದ ನಮ್ಮಲ್ಲಿರುವ ಶಿವತತ್ವ ಅರಿವಿಗೆ ಬರುವುದಿಲ್ಲ. ಆದರೆ ಸಮರ್ಥ ಗುರು ಸಿಕ್ಕರೆ, ನಮ್ಮ ನಿಜ ಸ್ವರೂಪ ಶಿವಸ್ವರೂಪವೆಂಬುದನ್ನು ತೋರಿಸಿಕೊಡಬಲ್ಲನು. ಶಿವಜ್ಞಾನವಿರುವ ಶರಣರಿಗೆ ಒಳಗೂ ಹೊರಗೂ ಎತ್ತೆತ್ತ ನೋಡಿದಡೆಯೂ ಶಿವನೇ ಕಾಣುತ್ತಾನೆ. ಶರಣರು ನಿರಂತರವಾಗಿ ಶಿವಭಾವದಲ್ಲಿಯೇ ಇರುತ್ತಾರೆ. ಆದರೆ ನೆಲದ ಮರೆಯ ನಿಧಾನದಂತೆ ತನ್ನಲ್ಲಿ ತದ್ಗತವಾಗಿರುವ ಶಿವತತ್ವವನ್ನು ಅರಿಯುವ ಪ್ರಯತ್ನ ಮಾಡದೆ ಮರೆವಿನಲ್ಲಿ, ಭವಚಿಂತೆಯಲ್ಲಿ ಮುಳುಗಿರುವ ಮಾನವರಿಗೆ ಗುರು ಬಸವಣ್ಣನವರು ಎಚ್ಚರಿಸುತ್ತಾರೆಂದು ತಿಳಿಸಿ, 2025ನೇ ಜನೇವರಿ 12,13,&14 ರಂದು ಕೂಡಲ ಸಂಗಮದಲ್ಲಿ ನಡೆಯುವ ಅತ್ಯಂತ ಮಹತ್ವಪೂರ್ಣವಾದ ಐತಿಹಾಸಿಕ ಚಾರಿತ್ರಿಕವಾದಂತಹ,12 ನೇ ಶತಮಾನದ ಶರಣರ ಸತ್ಸಂಕಲ್ಪದಂತೆ 38 ನೇ ಶರಣ ಮೇಳ ಕಾರ್ಯಕ್ರಮ ಜರುಗುತ್ತದೆ. ತಾವೆಲ್ಲರು ಈ ಕಾರ್ಯಕ್ರಮಕ್ಕೆ ಬರಬೇಕೆಂದು ಕರೆ ಕೊಟ್ಟರು. ಶರಣ ದೇವಪ್ಪ ಕೋಳೂರು ರಾಷ್ಟ್ರೀಯ ಬಸವ ದಳದ ಗೌರವಾಧ್ಯಕ್ಷ ವನಜಭಾವಿ ಇವರು ಅಧ್ಯಕ್ಷತೆ ವಹಿಸಿ ಮಾತನಾಡಿದ ಇವರು, ಲಿಂಗಾನುಸಂದಾನದಿಂದ ಸಮತೋಲನದ ಸಂಸ್ಕೃತಿ ಹೊಂದಲು ಸಾದ್ಯವಿದೆ ಎಂದು ನುಡಿದರು. ಪೂಜ್ಯ ಸದ್ಗುರು ಬಸವರತ್ನಮಾತಾಜಿ ಇವರು ಜೋತಿ ಪ್ರಜ್ವಲನಗೊಳಿಸಿದರು, ಶರಣ ವಿರುಪಾಕ್ಷಪ್ಪ ಮೇಟಿ, ಶಿವಣ್ಣ ಕರವಿನ್ ವನಜಭಾವಿ ಇವರು ಧ್ವಜಾರೋಹಣ ನೆರವೇರಿಸಿದರು, ಕಾರ್ಯಕ್ರಮದಲ್ಲಿ ನಾಗನಗೌಡ ಜಾಲಿಹಾಳ, ರೆಣುಕಪ್ಪ ಮಂತ್ರಿ ಶರಣಗ್ರಾಮ ಗುಳೆ, ಶರಣಪ್ಪ ಹೊಸಳ್ಳಿ ಗುಳೆ, ಲಿಂಗನಗೌಡ ದಳಪತಿ ಬಸಣ್ಣ ಹೊಸಳ್ಳಿ ಬಸವರಾಜ ಕೋಳೂರು, ಬಸವರಾಜ ಹೊಸಳ್ಳಿ, ನಿಜಲಿಂಗಪ್ಪ ಮಂತ್ರಿ ದೇವೇಂಪ್ಪ ಆವಾರಿ, ಹನಮೇಶ್ ಹೊಸಳ್ಳಿ ಮತ್ತು ವನಜಭಾವಿ ಗ್ರಾಮದ ರಾಷ್ಟ್ರೀಯ ಬಸವ ದಳದ ಪದಾಧಿಕಾರಿಗಳಾದ ಗಿರಿಮಲ್ಲಪ್ಪ ಪರಂಗಿ, ಪರಮೇಶ್ವರ ಉಚ್ಚಲಕುಂಟಿ,ನಿಂಗಪ್ಪ ಪರಂಗಿ,ಚಿದಾನಂದಪ್ಪ ಗೊಂದಿ, , ಶೇಖಪ ನಿಡಶೇಸಿ, ಜಗದೀಶಗೌಡ ಗೌಡ್ರ, , ಯಲ್ಲಪ್ಪ ಅತ್ತಿಗುಡ್ಡದ, ಯಮನಮ್ಮ ಗೌಡ್ರ, ಸೇರಿದಂತೆ ಗ್ರಾಮದ ಎಲ್ಲಾ ಸದ್ಭಕ್ತರು ಹಾಗು ಚಿಕ್ಕಮನ್ನಾಪುರ, ಮರಕಟ್ಟ, ಚವಡಾಪುರ, ಯಡ್ಡೋಣಿ, ಮಾಟಲದಿನ್ನಿ, ತಾಳಕೇರಿ, ಗುಳೆ ಲಿಂಗದಳ್ಳಿ, ಮದ್ಲೂರು, ಗ್ರಾಮದ ಬಸವಾಭಿಮಾನಿಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು
✍🏾 ಬಸವರಾಜ ಎಸ್ ಹೂಗಾರ ರಾಷ್ಟ್ರೀಯ ಬಸವ ದಳ ಶರಣ ಗ್ರಾಮ ಗುಳೆ

About Mallikarjun

Check Also

screenshot 2025 07 29 19 44 02 00 6012fa4d4ddec268fc5c7112cbb265e7.jpg

ಒಳಮೀಸಲಾತಿ ಜಾರಿಗಾಗಿಆಗಸ್ಟ್ 1 ಬೃಹತ್ ಪ್ರತಿಭಟನೆ : ಬಸವರಾಜ್ ದಡೇಸೂಗುರು,,

Massive protest on August 1 for implementation of internal reservation: Basavaraj Dadesuguru,, ವರದಿ : ಪಂಚಯ್ಯ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.