Obtain form-3 through online software in ward camps : Nagesh,,
ಯಲಬುರ್ಗಾ : ಇ-ಆಸ್ತಿ ತಂತ್ರಾಶವನ್ನು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಸಾರ್ವಜನಿಕರಿಂದ ಆಸ್ತಿ ಕಣಜ ತಂತ್ರಾಂಶದಲ್ಲಿ ಅವಶ್ಯವಿರುವ ದಾಖಲೆಗಳ ಪ್ರತಿಗಳನ್ನು ಪಡೆದು ಅದೇ ದಿನದಂದು ಅರ್ಹ ಆಸ್ತಿಗಳಿಗೆ ನಮೂನೆ-3ನ್ನು ವಿತರಿಸಲು ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಾದ ನಾಗೇಶ್ ಅವರು ಹೇಳಿದರು.
ಪತ್ರಿಕೆಯೊಂದಿಗೆ ಮಾತನಾಡಿ
ಆಸ್ತಿ ತೆರಿಗೆ ಪಾವತಿದಾರರಿಗೆ ಈ ಸಂಬಂಧ ಸಾರ್ವಜನಿಕ ಮಾಹಿತಿ ನೀಡಿರುವ ಅವರು, ನ. 25 ರಿಂದ ಡಿ.4 ರವರೆಗೆ ಪಟ್ಟಣದ 14 ವಾರ್ಡ್ ಗಳ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿರುವ ಶಿಬಿರದಲ್ಲಿ ಸಾರ್ವಜನಿಕರು ಭೇಟಿ ನೀಡಿ ತಮ್ಮ ತಮ್ಮ ಆಸ್ತಿಗಳ ದಾಖಲಾತಿಗಳನ್ನು ಅಲ್ಲಿ ನಿಯೋಜಿಸಿರುವ ಸಿಬ್ಬಂಧಿ/ಅಧಿಕಾರಿಗಳಿಗೆ ನೀಡಿ ಆನ್‌ಲೈನ್ ತಂತ್ರಾಂಶದ ಮೂಲಕ ನಮೂನೆ-3ನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿರುವರು.
ಸಲ್ಲಿಸಬೇಕಾದ ದಾಖಲಾತಿಗಳು : 1)ತಮ್ಮ ಆಸ್ತಿಯ ನೊಂದಾಯಿಸಿದ ಕ್ರಯ/ದಾನ/ವಿಭಾಗ/ವಿಲ್‌ಪತ್ರ., 2)ಹಳೆಯ ಅಸಸ್‌ಮೆಂಟ್ ಪ್ರತಿ ಮತ್ತು ಕಟ್ಟಡ ಪರವಾನಿಗೆ., 3)ಆಸ್ತಿಗೆ ತೆರಿಗೆ ಪಾವತಿಸಿರುವ ದಾಖಲಾತಿಗಳು., 4)ಆಸ್ತಿಯ ಚಕ್ಕಬಂದಿ, 4)ಸ್ವತ್ತಿನ ಭಾವಚಿತ್ರ ಮತ್ತು ಮಾಲೀಕರ ಭಾವಚಿತ್ರ., 5)ವಿದ್ಯುತ್ ಬಿಲ್ ಮತ್ತು ನೀರಿನ ಬಿಲ್., 6)ಮತದಾರರ ಚುನಾವಣಾ ಗುರುತಿನ ಚೀಟಿ, ಮೊಬೈಲ್ ಸಂಖ್ಯೆ ಮತ್ತು ಇತರೆ ದಾಖಲಾತಿಗಳನ್ನು ಸಲ್ಲಿಸಿ ಇ-ಅಸ್ತಿ ತಂತ್ರಾಂಶದಲ್ಲಿ ಅರ್ಹ ಆಸ್ತಿಗಳಿಗೆ ನಮೂನೆ-3ರನ್ನು ಅದೇ ದಿವಸ ಪಡೆಯಲು ಅವಕಾಶವನ್ನು ಮಾಡಿಕೊಡಲಾಗಿದೆ ಎಂದಿದ್ದಾರೆ.
ಶಿಬಿರಗಳನ್ನು ಆಯೋಜಿಸಿರುವ ಸ್ಥಳ ಮತ್ತು ದಿನಾಂಕ : ನ. 25 ರಂದು ವಾರ್ಡ ನಂ:1 ಶ್ರೀ ಯಲ್ಲಮ್ಮನ ದೇವಸ್ಥಾನ ಹತ್ತಿರ ಹಳೆ ಬಜಾರ, ವಾರ್ಡ ನಂ:2 ಕಂಡೇರ ಕಾಮನ ಕಟ್ಟಿ ಹತ್ತಿರ. ನ 26 ರಂದು ವಾರ್ಡ ನಂ:3 ಪ್ರಶಾಂತ ನಗರ ಬಂಡಿ ರಸ್ತೆ ಬನ್ನಿಕಟ್ಟಿ ಹತ್ತಿರ, ವಾರ್ಡ ನಂ:4 ಭಜಂತ್ರಿಯವರ ಓಣಿ ಗೂಡಾನ ಹತ್ತಿರ. ನ.27 ರಂದು ವಾರ್ಡ ನಂ:5 ಜೋಗೀನವರ ಓಣಿ ಅಂಗನವಾಡಿ ಕೇಂದ್ರದ ಹತ್ತಿರ. ವಾರ್ಡ ನಂ:6 ಜಾಲಗಾರ ಮಸೀದಿ ಹತ್ತಿರ ಹಳೇ ಬಜಾರ, ನ 28 ರಂದು ವಾರ್ಡ ನಂ:7 ಶ್ರೀ ದ್ಯಾಮವ್ವನ ಗುಡಿ ಹತ್ತಿರ . ವಾರ್ಡ ನಂ:8 ಕೊಪ್ಪಳದವರ ಓಣಿ ಮೇಟಿಯವರ ಕಟ್ಟಿ ಹತ್ತಿರ, ನ 29 ರಂದು ವಾರ್ಡ ನಂ:9 ಜೋಶಿಗಲ್ಲಿ ಮ್ಯಾಳದ ಮನೆ. ನ. 30 ರಂದು ವಾರ್ಡ ನಂ:10 ಶ್ರೀಸಿದ್ದರಾಮೇಶ್ವರ ಆಶ್ರಯ ಕಾಲೋನಿ ಮುಧೋಳ ರಸ್ತೆ ಶ್ರೀ ಹನುಮಂತದೇವರ ಗುಡಿ ಹತ್ತಿರ, ವಾರ್ಡ ನಂ:11 ಡಾ:ಬಾಬುಜಗಜೀವರಾಮ ಸಮುದಾಯ ಭವನದಲ್ಲಿ. ಡಿಸಂಬರ್. 02 ರಂದು ವಾರ್ಡ ನಂ:12 & 13 ಬಯಲು ರಂಗ ಮಂದಿರ ಕೊಪ್ಪಳ ರಸ್ತೆ. ಡಿ. 03 ರಂದು ವಾರ್ಡ ನಂ:14 ಸ್ತ್ರಿಶಕ್ತಿ ಭವನ ಕೆ.ಹೆಚ್.ಬಿ ಕಾಲೋನಿ, ಡಿ. 04 ರಂದು ವಾರ್ಡ ನಂ:15 ಶ್ರೀ ಅಂಬಾಭವಾನಿ ದೇವಸ್ಥಾನದ ಹತ್ತಿರ ನಡೆಯಲಿವೆ. ನಿಗದಿಪಡಿಸಲಾದ ಸ್ಥಳ ಹಾಗೂ ದಿನಾಂಕದಂದು ತಮಗೆ ಹತ್ತಿರವಾಗು ಸ್ಥಳಗಳಲ್ಲಿ ಅಗತ್ಯ ದಾಖಲಾತಿಗಳನ್ನು ಸಲ್ಲಿಸಿ ನಮೂನೆ-3ನ್ನು ಪಡೆದುಕೊಳ್ಳಲು ಪಟ್ಟಣ ಪಂಚಾಯತ ಅಧ್ಯಕ್ಷರಾದ ಅಂದಯ್ಯ ಕಳ್ಳಿಮಠ, ಮುಖ್ಯಾಧಿಕಾರಿ ನಾಗೇಶ್ ಅವರು ಈ ಪ್ರಕಟಣೆ ಮೂಲಕ ಕೋರಿದ್ದಾರೆ.