Breaking News

ಬ್ಯಾಂಕಿಂಗ್ ವಲಯ, ಅಂಚೆವಿಮಾಕಚೇರಿಗಳಲ್ಲಿ ಕನ್ನಡ ಭಾಷೆಯಲ್ಲಿ ಸೇವೆ ನೀಡುವುದನ್ನು ನಿರ್ಲಕ್ಷ್ಯ ಸಲ್ಲದು ನಗರಜಿಲ್ಲಾಡಳಿತ ಆದೇಶ

The city district administration has ordered to neglect providing services in Kannada language in the banking sector and post offices.

ಜಾಹೀರಾತು


ಬೆಂಗಳೂರು ನಗರ ಜಿಲ್ಲಾಡಳಿತವು ಸಂಬAಧಿಸಿದ ಹಣಕಾಸು ಸಂಸ್ಥೆಗಳ ಪ್ರತಿನಿಧಿಗಳಿಗೆ ತಾಕೀತು ಮಾಡಿತು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಗರದ ಪ್ರಮುಖ ಬ್ಯಾಂಕ್‌ಗಳ ಅಧಿಕಾರಿಗಳು ಹಾಗೂ ಕನ್ನಡಪರ ಸಂಘಟನೆಗಳ
ಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯಲ್ಲಿ ಬ್ಯಾಂಕ್ ಆಡಳಿತದಲ್ಲಿ ಕನ್ನಡ ಬಳಸುವ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.


ಬ್ಯಾಂಕ್, ಅಂಚೆ, ವಿಮಾ ಕಚೇರಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷಾ ಬಳಕೆಯನ್ನು ನಿರ್ಲಕ್ಷಿಸಿ ಮೂಲೆ ಗುಂಪು
ಮಾಡಿರುವುದಲ್ಲದೆ, ಹಿಂದಿ ಭಾಷೆಯನ್ನು ವ್ಯವಸ್ಥಿತವಾಗಿ ಹೇರಲಾಗುತ್ತಿದೆ ಎಂಬ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ
ಅಸಮಾಧಾನ ವ್ಯಕ್ತವಾಗುತ್ತಿತ್ತು. ಈ ಬಗ್ಗೆ ಕನ್ನಡಪರ ಸಂಘಟನೆಗಳು ಸಹ ಪ್ರತಿರೋಧ ವ್ಯಕ್ತಪಡಿಸಿದ್ದವು.
ಈ ಹಿನ್ನೆಲೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಷುರುಷೋತ್ತಮ ಬಿಳಿಮಲೆಯವರು ಅಕ್ಟೋಬರ್
೨ನೇ ವಾರದಲ್ಲಿ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೂ ಒಂದು ಪತ್ರವನ್ನು ಕಳಿಸಿ ಆಯಾ ಜಿಲ್ಲಾ ವ್ಯಾಪ್ತಿಯ ಬ್ಯಾಂಕ್,
ಅಂಚೆ, ವಿಮಾ ಕಚೇರಿ ಮುಖ್ಯಸ್ಥರುಗಳ ಸಭೆ ಕರೆದು ನಿತ್ಯದ ವ್ಯವಹಾರದಲ್ಲಿ ಗ್ರಾಹಕರಿಗೆ ಕನ್ನಡ ಭಾಷೆಯಲ್ಲಿ ಸೇವೆ
ನೀಡುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ನಿರ್ದೇಶನ ನೀಡಿತ್ತು.
ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲಾಡಳಿತವು ಇಂದು ಪ್ರಮುಖ ಬ್ಯಾಂಕ್ ಮುಖ್ಯಸ್ಥರುಗಳು, ಕನ್ನಡಪರ
ಸಂಘಟನೆಗಳ ಪ್ರತಿನಿಧಿಗಳ ಸಭೆಯನ್ನು ನಡೆಸಿತು.
ಈ ಸಭೆಯಲ್ಲಿ ಕನ್ನಡ ಚಳವಳಿಯ ಹಿರಿಯ ಮುಖಂಡರಾದ ಜಾಣಗೆರೆ ವೆಂಕಟರಾಮಯ್ಯನವರು ಮಾತನಾಡಿ
‘ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆಯಾಗಿದ್ದು, ಬ್ಯಾಂಕು ಮತ್ತು ಇತರ ಹಣಕಾಸು ಸಂಸ್ಥೆಗಳು ಯಾವುದೇ
ಕಾರಣಕ್ಕೂ ಕನ್ನಡ ಬಳಕೆಯನ್ನು ನಿರ್ಲಕ್ಷಿಸದೆ, ಹಿಂದಿ ಹೇಳಿಕೆಯನ್ನು ಮಾಡದೆ ಕನ್ನಡದಲ್ಲಿ ಸೇವೆ ನೀಡಬೇಕೆಂದು’
ಆಗ್ರಹಿಸಿದರು.
ಹಿಂದಿ ಹೇರಿಕೆ ವಿರೋಧಿ ಕರ್ನಾಟಕ ಒಕ್ಕೂಟದ ಸಂಚಾಲಕರಾದ ಪಾರ್ವತೀಶ ಬಿಳಿದಾಳೆ ಮಾತನಾಡಿ ‘ಬ್ಯಾಂಕ್
ಮತ್ತಿತರ ಹಣಕಾಸು ಸಂಸ್ಥೆಗಳಲ್ಲಿ ಕನ್ನಡ ಭಾಷೆಯನ್ನು ಮೂಲೆಗುಂಪು ಮಾಡುತ್ತಿರುವುದಲ್ಲದೆ ವ್ಯವಸ್ಥಿತವಾಗಿ ಹಿಂದಿ
ಭಾಷೆ ಹೇರುತ್ತಿರುವುದನ್ನು ತೀವ್ರವಾಗಿ ಆಕ್ಷೇಪಿಸಿ, ಬ್ಯಾಂಕ್‌ಗಳ ಈ ನಡೆಯು ಸಂವಿಧಾನ ಬಾಹಿರವಾಗಿದ್ದು ಮೂಲಭೂತ
ಹಕ್ಕುಗಳು, ಗ್ರಾಹಕರ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂಬುದನ್ನು ಸಭೆಯ ಗಮನಕ್ಕೆ ತಂದರು. ಕನ್ನಡ ಚಳವಳಿಯ
ಹಿರಿಯ ಮುಖಂಡ ಶೆ.ಬೊ. ರಾಧಾಕೃಷ್ಣ ಮಾತನಾಡಿ ಕನ್ನಡ ವಿರೋಧಿ ಧೋರಣೆ ತೋರುವ ಬ್ಯಾಂಕ್‌ಗಳು ತಮ್ಮ
ನಡವಳಿಕೆ ಬದಲಾಯಿಸಿಕೊಳ್ಳದಿದ್ದಲ್ಲಿ ಕನ್ನಡಿಗರ ಪ್ರತಿಭಟನೆ ಎದುರಿಸಲು ಸಿದ್ಧರಿರಬೇಕೆಂದು ಎಚ್ಚರಿಸಿದರು. ಬೆಂಗಳೂರು
ನಗರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಕಾಶ್ ಮೂರ್ತಿ ಹಾಗೂ ನಾವು ದ್ರಾವಿಡ ಕನ್ನಡಿಗರು ಚಳುವಳಿಯ
ಮುಖಂಡರಾದ ಅಭಿ ಗೌಡ ಪಾಲ್ಗೊಂಡಿದ್ದರು.
ಜಿಲ್ಲಾಧಿಕಾರಿಗಳ ಪರವಾಗಿ ಸಭೆಯನ್ನು ನಿರ್ವಹಿಸಿದ ಜಿಲ್ಲಾಧಿಕಾರಿ ಕಚೇರಿಯ ಆಡಳಿತ ಮುಖ್ಯಸ್ಥರಾದ ಶ್ರೀ
ಪ್ರಶಾಂತ್ ಪಾಟೀಲ್ ರವರು ‘ಬ್ಯಾಂಕ್ ಮತ್ತಿತರ ಹಣಕಾಸು ಸಂಸ್ಥೆಗಳು ಕನ್ನಡದಲ್ಲಿ ವ್ಯವಹಾರ ನಿರ್ವಹಿಸುವುದಕ್ಕೆ
ಬೇಕಾದ ತುರ್ತು ಕ್ರಮಗಳನ್ನು ವಹಿಸುವಂತೆಯೂ, ಇದು ಸೇವಾ ವಲಯವಾಗಿರುವುದರಿಂದ ಕನ್ನಡ ಭಾಷೆಯಲ್ಲಿ
ಸೇವೆ ನೀಡುವುದು ಅಗತ್ಯ’ವೆಂಬುದನ್ನು ತಿಳಿಸಿ ಸೂಕ್ತ ಕ್ರಮ ವಹಿಸುವಂತೆ ಸಂಬAಧಿಸಿದ ಅಧಿಕಾರಿಗಳಿಗೆ
ನಿರ್ದೇಶನ ನೀಡಿದರು.
ನವೆಂಬರ್ ಮೂರನೇ ವಾರದಲ್ಲಿ ಎಲ್ಲಾ ಹಣಕಾಸು ಸಂಸ್ಥೆಗಳು ಹಾಗೂ ಕನ್ನಡ ಚಳುವಳಿಯ ಎಲ್ಲಾ
ಮುಖಂಡರ ಇನ್ನೊಂದು ಸಭೆಯನ್ನು ನಡೆಸಿ ಬ್ಯಾಂಕ್ ಆಡಳಿತದಲ್ಲಿ ಕನ್ನಡ ಬಳಕೆಯನ್ನು ಪರಿಣಾಮಕಾರಿಯಾಗಿ
ಜಾರಿಯಾಗುವಂತೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯಲ್ಲಿ ಹಾಜರಿದ್ದ ಲೀಡ್ ಬ್ಯಾಂಕಿನ ಮುಖ್ಯಸ್ಥರಾದ ಕೆನರಾ ಬ್ಯಾಂಕಿನ ಶ್ರೀ ಪ್ರದೀಪ್ ರವರು ಬ್ಯಾಂಕಿAಗ್
ವ್ಯವಹಾರಗಳಲ್ಲಿ ಕನ್ನಡ ಬಳಸುವುದಕ್ಕೆ ತಾವೆಲ್ಲರೂ ಬದ್ಧರಾಗಿದ್ದು ಈ ಬಗ್ಗೆ ಯಾವುದಾದರೂ ಲೋಪದೋಷಗಳು
ಕಂಡು ಬಂದಿದ್ದಲ್ಲಿ ಅವನ್ನು ಸರಿಪಡಿಸುವುದಾಗಿ ಭರವಸೆ ನೀಡಿದರು. ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್
ಇಂಡಿಯಾ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚಿನ ಬ್ಯಾಂಕ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

About Mallikarjun

Check Also

ದೆಹಲಿಯಲ್ಲಿ ಇಂದು ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವರಾದ ಕಿಂಜರಾಪು ರಾಮಮೋಹನ ನಾಯ್ಡು ಅವರನ್ನು ಭೇಟಿಮಾಡಿ, ಸಮಾಲೋಚನೆ ನಡೆಸಿ ಬಳಿಕ ಮನವಿಪತ್ರ ಸಲ್ಲಿಕೆ

Today in Delhi, I met Union Civil Aviation Minister Kinjarapu Ramamohan Naidu, held discussions and …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.