Wrestling: Athletes selected for national level are Sushil Kumar and Amrita
*ಕುಸ್ತಿಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ
ಸಚೀನ ಆರ್ ಜಾಧವ
ಸಾವಳಗಿ: ಕುಸ್ತಿ ಇಡೀ ಭಾರತದಲ್ಲೇ ಬಹಳ ಮಹತ್ವ ಪಡೆದುಕೊಂಡಿರುವ ಗ್ರಾಮೀಣ ಕ್ರೀಡೆಗಳಲ್ಲೊಂದು. ಕ್ರಿಕೆಟ್‌ನ ಜನಪ್ರಿಯತೆಯಿಂದ ಈ ಕ್ರೀಡೆ ಕಣ್ಮರೆಯಾಗುವ ಹಂತಕ್ಕೆ ಬಂದಿದ್ದರೂ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತೀಯ ಕುಸ್ತಿಪಟುಗಳು ಮಿಂಚುತ್ತಿರುವ ಕಾರಣ, ಕುಸ್ತಿ ಮತ್ತೆ ಜನಪ್ರಿಯವಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ದಕ್ಷಿಣ ಭಾಗದಲ್ಲಿರುವ ಮೈಸೂರಿನಲ್ಲಿ ಕುಸ್ತಿ ಬಹಳ ಜನಪ್ರಿಯ. ಆದರೆ ಉತ್ತರ ಕರ್ನಾಟಕದ ಸ್ಥಿತಿ ಬಹಳ ಭಿನ್ನ. ಇಡೀ ಉತ್ತರಭಾಗದಲ್ಲಿ ಕುಸ್ತಿಗೆ ಬಹಳ ಆದ್ಯತೆ ಇದೆ ಎಂದು ಸಮರ್ಥ ಕುಸ್ತಿ ವ್ಯಾಯಾಮ ಶಾಲೆ ಸಾವಳಗಿಯ ತರಬೇತಿದಾರಾದ ರಾಮಣ್ಣ ತೊರವಿ ಹೇಳಿದರು.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ಸಮರ್ಥ್ ಕುಸ್ತಿ ವ್ಯಾಯಾಮ ಶಾಲೆಯ ಕ್ರೀಡಾಪಟು ಕುಸ್ತಿಯಲ್ಲಿ 17 ವರ್ಷದ ಕ್ರೀಡಾಪಟು ಸುಶೀಲಕುಮಾರ್ .ವಿಠ್ಠಲ. ತೊರವಿ ಹಾಗೂ ತೊದಲಬಾಗಿ ಕ್ರೀಡಾಪಟು ಕುಮಾರಿ ಅಮೃತಾ ಸಿದ್ದಪ್ಪ ಚೌರಿ ಇಬ್ಬರು ಕ್ರೀಡಾಪಟುಗಳು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದಲ್ಲಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದು, 45 KG ಸ್ಪರ್ಧೆ ಉತ್ತರಾಖಂಡದಲ್ಲಿ ನಡೆಯುವ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತರಬೇತಿದಾರ ಗಜಾನನ ತೊರವಿ ಮಾತನಾಡಿ ನಮ್ಮೂರಿನ ಕೀರ್ತಿ ಪತಾಕಿಯನ್ನು ರಾಜ್ಯದಲ್ಲಿ ಹಾರಿಸಿ, ಇಂದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಇದು ನಮ್ಮಗೆ ಸಂತೋಷದ ಸಂಗತಿ ಇಂದಿನ ದಿನಗಳಲ್ಲಿ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಸಾಧನೆ ಮಾಡಿದರೆ, ನಮ್ಮ ಜೀವನ ಸಾರ್ಥಕವಾಗುವುದು ಹಾಗೂ ಕಠಿಣ ಶ್ರಮ, ಸಾಧನೆ ಮಾಡಬೇಕು ಎಂಬ ಛಲ ಇದ್ದರೆ ಮಾತ್ರ ನಾವು ಕಂಡ ಕನಸು ನನಸು ಆಗುವುದು ಎಂದು ಹೇಳಿದರು.
ಸಾವಳಗಿ ಹಾಗೂ ತೊದಲಬಾಗಿಯ ಇಬ್ಬರು ಕ್ರೀಡಾಪಟುಗಳು ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದಕ್ಕೆ ಅವರಿಗೆ ಗ್ರಾಮದ ಸಮಸ್ತ ಹಿರಿಯರು ಸೇರಿದಂತೆ ಅನೇಕ ಅಭಿನಂದನೆಗಳು ಸಲ್ಲಿಸಿದರು. ಕುಸ್ತಿ ತರಬೇತಿದಾರರಾದ ರಾಮಣ್ಣ ತೊರವಿ, ಗಜಾನನ ತೊರವಿ, ಸದಾಶಿವ ಪಕಾಲಿ, ಬನಹಟ್ಟಿಯ ರವಿ ಬಸಗೊಂಡ ತರಬೇತಿ ನೀಡುತ್ತಿರುವವರು