Villagers are worried about Kasapura lake rising
ಗುಡೇಕೋಟೆ: ಕಳೆದ ವಾರದಲ್ಲಿ ಭಾರಿ ಮಳೆ ಸುರಿದ ಕಾರಣ ಕೆರೆಯಲ್ಲಿ ನೀರು ತುಂಬಿ ಗ್ರಾಮಸ್ಥರು ಸಂತಸಕ್ಕೆ ಕಾರಣವಾಗಿತ್ತು. ಆದರೆ, ಕೆರೆಯ ಏರಿ ಮಧ್ಯಭಾಗದಲ್ಲಿ ಮಣ್ಣು ಕುಸಿತವಾಗಿ ನೀರು ಸೊರಿಕೆಯಾಗಿರುವುದರಿಂದ ಕೆರೆ ಹೊಡೆಯುವ ಭೀತಿ ಗ್ರಾಮಸ್ಥರ ಆತಂಕ ಕಾರಣವಾಗಿರುವ ಘಟನೆ ಗುಡೇಕೋಟೆ ಸಮೀಪದ ಕಸಾಪುರ ಗ್ರಾಮದಲ್ಲಿ ಭಾನುವಾರ ಜರುಗಿದೆ.
ಹಲವು ದಶಕಗಳ ನಂತರ ಕೆರೆಗೆ ಆಪಾರ ಪ್ರಮಾಣ ನೀರು ಸಂಗ್ರಹವಾಗಿತು. ಇದರಿಂದ ಭಾಗದಲ್ಲಿನ ರೈತರು ತಮ್ಮ ಜಮೀನಿನಲ್ಲಿರುವ ಕೊಳೆಬಾಯಿಗೆ ಅಂತರ್ಜಲ ಹೆಚ್ಚಳವಾಗುತ್ತದೆ ಎಂದು ರೈತರು ನಂಬಿರುವಾಗ ಸದ್ಯ ಕೆರೆ ಏರಿಯಲ್ಲಿನ ಮಧ್ಯ ಭಾಗದಲ್ಲಿ ಮಣ್ಣು ಜಾರಿ ಬಿದ್ದು ನೀರು ಸೋರಿಕೆಯಾಗುತ್ತೀರುವ ಕಾರಣ ಕೆರೆ ಹೊಡೆಯುವ ಭೀತಿ ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ವಿಷಯವನ್ನು ಶಾಸಕರು, ತಹಸೀಲ್ದಾರ್ ಎಂ.ರೇಣುಕಮ್ಮ, ತಿಳಿಸಿದ್ದು, ಈ ಕೆರೆಯು ಜಿಪಂ ವ್ಯಾಪ್ತಿಗೆ ಬರುವ ಕಾರಣ ಜಿಪಂ ಎಇಇ ಮಲ್ಲಿಕಾರ್ಜುನ ಮಾತನಾಡಿ ಕೊಡಲೆ ಬೆಳಿಗ್ಗೆ ಇಎಎ ಸ್ಥಳಕ್ಕೆ ಅಗಮಿಸಿ , ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ, ತಡೆಗೆ ಮರಳು ಚೀಲ ಅಡ್ಡಲಾಗಿ ಹಾಕಿದರು ನೀರು ಬರುವುದು ನಿಂತಿಲ್ಲ ಈಗಾಗಿ ನೀರಾವರಿ ತಜ್ಞರ ಸಲಹೆಯಂತೆ ತಡೆ ನಿಯಂತ್ರಣ ಕೆಲಸ ಭರದಿಂದ ಮುಂದುವರಿದ್ದು. ಕಸಾಪುರ ಗ್ರಾಮಸ್ಥರು ಜಾತಕ ಪಕ್ಷಿಯಂತೆ ಕೆರೆ ಬಳಿ ಕಾಯುತ್ತಾ ಮತ್ತು ಯಾವುದೆ ವಾಹನ ಏರಿ ಮೇಲೆ ಬರುವುದನ್ನು ತಡೆಯುವ ಪ್ರಯತ್ನ ಗ್ರಾಮಸ್ಥರು ಮಾಡುತ್ತಾರೆ. ಈ ಘಟನೆಗೆ ವಿಂಡ್ ಪ್ಯಾನ್ ಗೆ ಬೃಹತ್ ಯಂತ್ರಗಳನ್ನು ಕೆರೆ ಏರಿ ಮೇಲೆ ಸಾಗಿಸಿದೆ ಭಾರಿ ಗಾತ್ರದ ವಾಹನಗಳೆ ಕೆರೆ ಏರಿಗೆ ದಕ್ಕೆಯಾಗಲು ಕಾರಣವೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್ ಕೃಷ್ಣ, ಹಾಗೂ ಕಸಾಪುರ ಗ್ರಾಮಸ್ಥರ ಆರೋಪವಾಗಿದೆ.
ನೀರಾವರಿ ಇಲಾಖೆ ನಿರ್ಲಕ್ಷ್ಯೆ:
ಕಳೆದ ನಾಲ್ಕು ದಿನಗಳ ಹಿಂದೆ ಸಮೀಪದ ಮಹಾದೇಪುರದ ಹೊರವಲಯದ ಗೋಕಟ್ಟೆ ಹೊಡೆದು ಹೋಗಿ ಇಡೀ ಗ್ರಾಮಕ್ಕೆ ನೀರು ನುಗ್ಗಿ ಆಪಾರ ಪ್ರಮಾಣದ ನೀರು ಪೋಲ್ ಅಗಿದ್ದು ಮತ್ತು ಕಾನಹೊಸಹಳ್ಳಿ ಸಮೀಪದ ಹುಲಿಕೆರೆ ಕೆರೆಯು ಸಹ ಏರಿಯ ಮಣ್ಣು ಜರುಗಿದೆ ಹಾಗು ಹೊಸಹಟ್ಟಿ ಸಮೀಪದ ಬೃಹತ್ ಚೆಕ್ ಡ್ಯಾಂ ನೀರು ಗುಂಡುಮುಗುಣು ಕೆರೆ ಹೋಗಲು ಕಾಲುವೆ ಇದ್ದು ಕಾಲುವೆ ದುರಸ್ತಿ ಮಾಡಿಸದ ಕಾರಣ ಕಳೆದೊಂದು ತಿಂಗಳಿಂದ ರಂಗಯ್ಯನದುರ್ಗ ಜಲಾಶಯಕ್ಕೆ ನಿರಂತರವಾಗಿ ಹರಿದರು ಇತ್ತು ಯಾವ ಅಧಿಕಾರಿ ಮುಖಮಾಡಿ ನೋಡಿಲ್ಲ, ಗಂಡಬೊಮ್ಮನಹಳ್ಳಿ ಕೆರೆಯ ಎಡದಂಡೆ ಕಾಲುವೆ ಕೊಚ್ಚಿ ಹೋಗಿ ಎರಡು ವಾರ ಕಳೆದರು ಸಹ ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಕ್ಯಾರೇ ಅನುತ್ತಿಲ್ಲ. ಈಗಾಗಿ ಇಲಾಖೆ ಅಧಿಕಾರಿಗಳ ವಿರುದ್ದ ಸ್ಥಳೀಯ ಜನರು ಇಡಿ ಶಾಪ ಹಾಕುತ್ತಾರೆ.
ಜಿಪಂ ಎಇಇಯೊಂದಿಗೆ ಮಾತನಾಡಿ, ಬೆಳಗಿನಿಂದಲೆ ದುರಸ್ಥಿ ಕಾರ್ಯ ಮಾಡುತ್ತಾರೆ. 6 ಕೋಟಿ ವೆಚ್ಚದಲ್ಲಿ ಗಂಡಬೊಮ್ಮನಹಳ್ಳಿ ಎಡ,ಬಲದಂಡೆ ಕಾಲುವೆ ಮತ್ತು ಹೊಸಹಟ್ಟಿ ಬಳಿಯ ಕಾಲುವೆಗಳ ದುರಸ್ಥಿಗೆ ಕ್ರಮಕೈಗೊಳಲಾಗಿದೆ. ಹಲವು ದಶಕಗಳ ನಂತರ ಉತ್ತಮ ಮಳೆಯಾಗಿ ಕೆರೆ,ಕಟ್ಟೆ ಭರ್ತಿಯಾಗಿರುವುದು ಸಂತಸದ ಸಂಗತಿ. ಇದರ ನಡುವೆ ಇಂತಹ ಘಟನೆಗಳು ಜರುಗುತ್ತಿರುವುದು ಬೇಸರ ಮೂಡಿಸಿದೆ.
– ಡಾ.ಎನ್.ಟಿ.ಶ್ರೀನಿವಾಸ್, ಶಾಸಕರು.
ಮಾಹಿತಿ ತಿಳಿದ ಕೂಡಲೆ ಸ್ಥಳಕ್ಕೆ ಅಗಮಿಸಿ ನೀರಾವರಿ ಇಲಾಖೆ ಸಿಬಂದಿ ಹಾಗು 20 ಜನ ನುರಿತ ಕೆಲಸಗಾರರ ಸಹಕಾರದಿಂದ ತಡೆ ನಿಯಂತ್ರಣ ಕೆಲಸ ಮಾಡಲಾಗುತ್ತದೆ. ತಡೆಗೆ ಎಲ್ಲ ಪ್ರಯತ್ನ ಸಂಜೆ ವೇಳೆಗೆ ಶೇ10೦ ಮುಗುಸುತ್ತೆವೆ. ಅಗತ್ಯವಿದ್ದರೆ ನೀರಾವರಿ ತಜ್ಞರ ಕೆರೆತರುವ ಪ್ರಯತ್ನ ಮಾಡುತ್ತೇವೆ.
– ಮಲ್ಲಿಕಾರ್ಜುನ, ಜಿಪಂ ಎಇಇ, ಕೂಡ್ಲಿಗಿ.