The election of the government employees’ union, which was a nest of confusion, the polling was held amid the ban on the election.
ತಡೆಯಾಜ್ಞೆ ಕುರಿತು ಅಧಿಕೃತ ಮಾಹಿತಿ ಇಲ್ಲಾ : ಚುನಾವಣಾಧಿಕಾರಿ ಬಸಪ್ಪ ತಿಮ್ಮಾಪೂರ ಹೇಳಿಕೆ,,,
ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಸೋಮವಾರದಂದು ಜರುಗಿದ ಕರ್ನಾಟಕ ಸರಕಾರಿ ನೌಕರ ಸಂಘದ ಚುನಾವಣೆಗೆ ಬ್ರೇಕ್.
ಹೌದು ಕುಕನೂರು ಯಲಬುರ್ಗಾ ಅವಳಿ ತಾಲೂಕಿನ ಕರ್ನಾಟಕ ಸರಕಾರಿ ನೌಕರ ಸಂಘದ ಚುನಾವಣೆಯು ದಿ. 28ರ ಸೋಮವಾರದಂದು ಬೆಳಗ್ಗೆ ಸ್ಥಳೀಯ ಸರಕಾರಿ ಮಾಧ್ಯಮಿಕ ಶಾಲೆಯಲ್ಲಿ ಪ್ರಾರಂಭಗೊಂಡಿದ್ದು, ತಡೆಯಾಜ್ಞೆಯ ಮಧ್ಯೆಯು ಮತದಾನ ಜರುಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಕುಕನೂರು ಪಟ್ಟಣದ ಕೃಷಿ ಇಲಾಖೆ ಅಧಿಕಾರಿ ಸಿದ್ರಾಮರೆಡ್ಡಿ ಮಾತನಾಡಿ ಚುನಾವಣಾ ಮತದಾನ ಪಟ್ಟಿಯಲ್ಲಿ ಕಾರಣಾಂತರದಿಂದ ನಾಲ್ಕು ಜನ ನೌಕರರನ್ನು ಬಿಟ್ಟಿದ್ದು, ಈ ಮೊದಲು ನಾವು ರಾಜ್ಯಾಧ್ಯಕ್ಷರಿಗೆ ಮನವಿ ಸಲ್ಲಿಸಿದಾಗ ಆವರ ಸ್ಪಂದಿಸಿದ್ದರು, ಆದರೆ ತಾಲೂಕಾಧ್ಯಕ್ಷರು ನಮಗೆ ಸ್ಪಂದನೆ ನೀಡಲಿಲ್ಲಾ ಆದ್ದರಿಂದ ಅನಿವಾರ್ಯವಾಗಿ ನಾವು ಕಾನೂನು ಮೊರೆ ಹೋಗಿ ಚುನಾವಣೆಗೆ ತಡೆಯಾಜ್ಞೆ ತಂದಿದ್ದೇವೆ ಎಂದರು.
ನ್ಯಾಯಾಧೀಶರು ಅ.25 ರಂದು ಮಧ್ಯಂತರ ತಡೆ ಆದೇಶ ನೀಡಿದ್ದು, ಅದನ್ನು ನಾವು ಚುನಾವಣಾ ಅಧಿಕಾರಿಗಳ ಗಮನಕ್ಕೆ ತಂದರು ಅವರು ತಮ್ಮ ಏಕಪಕ್ಷೀಯ ನಿರ್ಧಾರದಿಂದ ಚುನಾವಣೆ ನಡೆಸಿದ್ದು ಯಾರದೋ ಒತ್ತಡಕ್ಕೆ ಮಣಿದು ಕಾನೂನು ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿದರು.
ಇದರಿಂದ ಸರಕಾರಕ್ಕೂ ಹೊರೆ ಬಿಳುವುದಲ್ಲದೇ ನೌಕರರ ಸಮಯವನ್ನು ವ್ಯರ್ಥ ಮಾಡಿ ಅರ್ಧಂ ಭರ್ಧ ಚುನಾವಣೆ ಮಾಡಿದ್ದು, ಚುನಾವಣೆ ಭೂತ್ ನಲ್ಲಿ ನಿವೃತ್ತ ಸರಕಾರಿ ನೌಕರರಲ್ಲದ ವ್ಯಕ್ತಿಗಳನ್ನು ಬಳಸಿಕೊಂಡು ಚುನಾವಣೆ ನಡೆಸಿದ್ದಾರೆ ಎಂದು ಆರೋಪಿದ ಅವರು ಇದು ಏಕಪಕ್ಷೀಯ ಚುನಾವಣೆಯಾಗಿದ್ದು ಕಾನೂನು ಪರೀಶಿಲನೆ ಮಾಡಿ ನ್ಯಾಯಯುತ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದರು.
ನಂತರದಲ್ಲಿ ಈ ಕುರಿತು ಚುನಾವಣಾಧಿಕಾರಿ ಬಸಪ್ಪ ತಿಮ್ಮಾಪೂರ ಪ್ರತಿಕ್ರೀಯೇ ನೀಡಿ ಮಾತನಾಡಿ ಚುನಾವಣೆ ತಡೆಯಾಜ್ಞೆ ಇರುವುದು ನನಗೆಗೊತ್ತಿಲ್ಲಾ ಮತ್ತು ಕೋರ್ಟ್ ನಿಂದ ಅಧಿಕೃತ ಮಾಹಿತಿ ಯಾವುದು ಬಂದಿಲ್ಲಾ ಆದ್ದರಿಂದ ನಾನು ಚುನಾವಣೆ ಪ್ರಕ್ರೀಯೇ ಪ್ರಾರಂಭಿಸಿದೆ.
ತಡೆಯಾಜ್ಞೆ ತಂದಿರುವ ಇಬ್ಬರೂ ನೌಕರರು ನನಗೆ ಇಂದು ಬೆಳಗ್ಗೆ ತಡೆಯಾಜ್ಞೆ ಆದೇಶ ಪ್ರತಿ ತೋರಿಸಿದರು. ಆದರೆ ನನಗೆ ಅಧಿಕೃತ ಮಾಹಿತಿ ಬಂದಿಲ್ಲವಾದ್ದರಿಂದ ನಾನು ಚುನಾವಣೆ ಪ್ರಾರಂಬಿಸಿದೆ ಎಂದರು.
ಯಾರೋ ಹೇಳಿದ ಮಾತಿಗೆ ಚುನಾವಣೆ ನಿಲ್ಲಿಸಲು ಬರುವುದಿಲ್ಲಾ, ನನಗೆ ಕೋರ್ಟ್ ಆದೇಶ ಕಳಿಸಿದ್ದರೇ, ಅಥವಾ ನಮ್ಮ ವಕೀಲರಿಂದ ಮಾಹಿತಿ ಬಂದಿದ್ದರೇ ನಾನು ಸ್ಥಗಿತಗೊಳಿಸುತ್ತಿದ್ದೆ, ಆದರೂ ನಮ್ಮ ವಕೀಲರಿಗೆ ಈ ಕುರಿತು ಬೆಳಗ್ಗೆ ಕೇಳಿದಾಗ ಅವರು ಕೋರ್ಟ್ ಗೆ ಹೋಗಿ ವಿಷಯ ತಿಳಿಸುವುದಾಗಿ ಹೇಳಿದ್ದರು. ಅದರಂತೆ ಅವರು ನನಗೆ ಮಧ್ಯಾಹ್ನ 2.30ಕ್ಕೆ ಕರೆ ಮಾಡಿ ತಿಳಿಸಿ ಚುನಾವಣಾ ಪ್ರಕ್ರೀಯೇ ನಿಲ್ಲಿಸಲು ತಿಳಿಸಿದರು ಅದ್ರಂತೆ ನಿಲ್ಲಿಸಿದ್ದು, ಮತ ಪೆಟ್ಟಿಗೆಗೆ ಸಿಲ್ ಮಾಡುವಂತೆ ಸೂಚಿಸಿದ್ದಾರೆ ಅದರಂತೆ ಸಿಲ್ ಮಾಡಿದ್ದೇವೆ ಎಂದರು.
ಮತದಾನ ಪೆಟ್ಟೆಗೆಯನ್ನು ಹೈಕೋರ್ಟ್ ಆದೇಶ ಬರುವವರೆಗೆ ಪೋಲಿಸ್ ಇಲಾಖೆಯ ನೇತೃತ್ವದಲ್ಲಿ ಭದ್ರವಾಗಿ ಇಡಲಾಗುವದು ಎಂದರು.
ಒಟ್ಟಾರೇಯಾಗಿ ಈ ಚುನಾವಣೆಯ ಒಂದು ಹಗ್ಗ ಜಗ್ಗಾಟ ಯಾವ ತಿರುವು ಪಡೆದು ಮುಕ್ತಾಯಗೊಳ್ಳುವದು, ಹಾಗೂ ಯಾವ ಇಲಾಖೆಗೆ ಅಧ್ಯಕ್ಷ ಪಟ್ಟ ಒಲಿದು ರಂಗಿನಲ್ಲಿ ಸಂಭ್ರಮಿಸುವರೋ ಕಾದು ನೋಡಬೇಕಿದೆ.