District Assistant Commissioner visits the examination centers which are being conducted as part of direct recruitment for the post of Village Administrative Officer

ಮಾನ್ವಿ: ಪಟ್ಟಣದಲ್ಲಿನ ವಿವಿಧ ಕಾಲೇಜುಗಳಲ್ಲಿ ಭಾನುವಾರ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವತಿಯಿಂದ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇರನೇಮಕಾತಿಗಾಗಿ ಸ್ಪರ್ಧಾತ್ಮಕಪರೀಕ್ಷೆ -2024 ಬರೆಯುವುದಕ್ಕಾಗಿ ಒಟ್ಟು 9 ಪರೀಕ್ಷಾ ಕೇಂದ್ರಗಳ ವ್ಯವಸ್ಥೆಯನ್ನು ಮಾಡಲಾಗಿದ್ದು ಜಿಲ್ಲಾ ಸಹಾಯಕ ಅಯುಕ್ತಾರಾದ ಗಜಾನನ ಬಾಲೆ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದರು.
ಪಟ್ಟಣದ ಸಿದ್ದಾರ್ಥ ಕಾಲೇಜ್,ಲೋಯಾಲ ಕಾಲೇಜ್, ಸರಕಾರಿ ಪದವಿ ಕಾಲೇಜ್, ಕಾಳಿಂಗ ಕಾಲೇಜ್,ಶಾರದ ಕಾಲೇಜ್, ಸರಕಾರಿ ಬಾಲಕರ,ಬಾಲಕಿಯರ ಕಾಲೇಜ್,ಕಲ್ಮಠ ಕಾಲೇಜ್ ಸೇರಿದಂತೆ 9 ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಮಾನ್ವಿ ತಹಸೀಲ್ದಾರ್ ರಾಜು ಪಿರಂಗಿ, ಸಿರವಾರ ತಹಸೀಲ್ದಾರ್ ರವಿ ಅಂಗಡಿ, ಕಂದಾಯ ನಿರೀಕ್ಷಕರಾದ ಚರಣ್ ಸಿಂಗ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಇದ್ದರು.