Breaking News

ದಸರಾಹಬ್ಬದಅಂಗವಾಗಿ ಸುಮಂಗಲಿಯರಿಂದ ನೂತನ ರಥೋತ್ಸವ


A new chariot festival from Sumangali as part of Dussehra festival

ಜಾಹೀರಾತು

ಮಾನ್ವಿ: ಪಟ್ಟಣದ ಜಯನಗರದಲ್ಲಿನ ಸಂಗಾಪುರ ಖಿದ್ಮತ್ ಹಿರೇಮಠ ಶಾಖಮಠದಲ್ಲಿ ದಸರಾ ಹಬ್ಬದ ಅಂಗವಾಗಿ ನಡೆದ ೩೩ನೇ ವರ್ಷದ ಶ್ರೀದೇವಿ ಪುರಾಣ ಮಹಾಮಂಗಲೋತ್ಸವ ಹಾಗೂ ೩೨೪ ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮ ಹಾಗೂ ನೂತನ ರಥೋತ್ಸವ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿ ರಾಯಚೂರು ೧೦೮ ಸಾವಿರ ದೇವರ ಸಂಸ್ಥಾನ ಕಿಲ್ಲೇ ಬೃಹನ್ಮಠ ಶ್ರೀ .ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಆರ್ಶಿವಾಚನ ನೀಡಿ ದಸರಾ ಹಬ್ಬವು ನಾಡ ಹಬ್ಬವಾಗಿದ್ದು ನವರಾತ್ರಿಯ ೯ ದಿನಗಳ ಕಾಲ ದೇವಿಯನ್ನು ಪೂಜಿಸಿದಲ್ಲಿ ಇಷ್ಟಾರ್ಥಗಳು ಸಿದ್ದಿಯಾಗುತ್ತವೆ ಹಾಗೂ ಜೀವನದಲ್ಲಿ ಯಶಸ್ಸು ದೊರೆಯುವುದರಿಂದ ಭಕ್ತಿ ಭಾವದಿಂದ ದೇವಿಯನ್ನು ಆರಾದಿಸುವಂತೆ ತಿಳಿಸಿದರು.
೩೨೪ ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯಿತು. ಶ್ರೀದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ರಥದಲ್ಲಿ ಕೂಡಿಸಿದ ನಂತರ ನೂತನ ರಥಕ್ಕೆ ಶ್ರೀ .ಶಾಂತಮಲ್ಲ ಶಿವಾಚಾರ್ಯ ಮಹಾಸ್ವಾಮಿಗಳು ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ನೂರಾರು ಮಹಿಳೆಯರು ನೂತನ ರಥವನ್ನು ಎಳೆಯುವ ಮೂಲಕ ರಥೋತ್ಸವ ನೆರವೇರಿಸಿದರು. ಸುತ್ತಮುತ್ತಲಿನ ಸಾವಿರಾರು ಭಕ್ತರು ರಥೋತ್ಸವದಲ್ಲಿ ಭಾಗವಹಿಸಿದರು. ವೀರಗಾಸೆ ಕಲಾವಿದರಾದ ಯದ್ದಲದಿನ್ನಿಯ ಹೆಚ್.ಎಂ.ಸಿದ್ದರಾಮಯ್ಯಸ್ವಾಮಿ ಯವರಿಂದ ಪುರವಂತಿಕೆ ಪ್ರದರ್ಶನ ನಡೆಯಿತು.
ಸಂಗಾಪುರ ಹಿರೇಮಠದ ಶ್ರೀ ವೀರಭದ್ರಯ್ಯಸ್ವಾಮಿಗಳು, ಶ್ರೀ ಶರಭಯ್ಯ ಶಾಸ್ತ್ರಿಗಳು, ದೇವಿ ಉಪಾಸಕರಾದ ಮರಿಸ್ವಾಮಿ,ಮುದ್ದಯ್ಯಸ್ವಾಮಿ,ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಿ,ಶಿರಸ್ತೇದಾರ ರವಿಕುಮಾರ್ ನಾಯಕವಾಡಿ ಸಲಹೆ

Include the name in the voter list, Chief Ravikumar suggested ಜಿಎಚ್ ಎನ್ ಕಾಲೇಜಿನಲ್ಲಿ ಮತದಾರ ಪಟ್ಟಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.