Kalasa installation of Gangatle Kere Mayamma temple
ಕಾನ ಹೊಸಹಳ್ಳಿ ‘- ಸಮೀಪದ ಹೂಡೇಂ ಗ್ರಾಮದ ಗಾಣಗಟ್ಲೆ ಕೆರೆ ಮಾಯಮ್ಮ ದೇವಾಲಯದ ಗೋಪುರದ ನೂತನ ಕಳಸ ಪ್ರತಿಷ್ಠಾಪನೆ ಯು ಶುಕ್ರವಾರ ವಿವಿಧ ಹೋಮಗಳೊಂದಿಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜೋರಾಗಿತ್ತು. ಬೆಳಿಗ್ಗೆಯಿಂದಲೇ ಗ್ರಾಮಸ್ಥರಿಂದ ಗಂಗೆ ಪೂಜೆ ಕಳಸ ಸ್ಥಾಪನೆ ಹೋಮ ಹವನಾದಿಗಳು ನಡೆದವು. ಬೆಳಿಗ್ಗೆ ಗಾಣಗಟ್ಲೆ ಕೆರೆ ಮಾಯಮ್ಮ ದೇವಿಗೆ ಗಣಪತಿ ಹೋಮ, ವಾಸ್ತು ಹೋಮ, ನವಗ್ರಹ ಹೋಮ, ದುರ್ಗಾ ಹೋಮ, ಅಭಿಷೇಕ ಹಾಗೂ ವಿಶೇಷ ಹೂವಿನ ಅಲಂಕಾರ ನಡೆಯಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ.ಬ್ರ. ಪ್ರಶಾಂತ ಸಾಗರ ಶಿವಚಾರ್ಯ ಮಹಾಸ್ವಾಮಿಗಳು ಹಿರೇಮಠ ಸಂಸ್ಥಾನ ಕೂಡ್ಲಿಗಿ ಇವರು ಅಮೃತಹಸ್ತದಿಂದ ಕುಂಬಾಭಿಷೇಕ ಹಾಗೂ ದೇವಸ್ಥಾನದ ಕಳಸರೋಹಣ ನಡೆಯಿತು. ದರ್ಶನಕ್ಕೆ ಬಂದಿದ್ದ ನೂರಾರು ಭಕ್ತಾದಿಗಳು ಗಾಣಗಟ್ಲೆ ಕೆರೆ ಮಾಯಮ್ಮ ದೇವಿ ಕುಂಭಾಭಿಷೇಕದಲ್ಲಿ ಭಾಗವಹಿಸಿ ಮಹಾಮಂಗಳಾರತಿ ತೀರ್ಥ ಪ್ರಸಾದಗಳನ್ನು ಪಡೆದು ದೇವರ ಪೂಜೆಯಲ್ಲಿ ಭಾಗಿಯಾದರು. ಈ ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರಪ್ಪ, ಮಾಜಿ ತಾ.ಪಂ ಸದಸ್ಯ ಪಾಪ ನಾಯಕ ಹಾಗೂ ದೇವಸ್ಥಾನ ಕಮಿಟಿಯ ಅಧ್ಯಕ್ಷ ಶರಣಪ್ಪ, ಉಪಾಧ್ಯಕ್ಷ ಹೋಳಿಗೆ ಪಾಲಯ್ಯ, ಕಾರ್ಯದರ್ಶಿ ತಿಪ್ಪೇಸ್ವಾಮಿ ಖಜಾಂಚಿ ಶ್ರೀನಿವಾಸ್, ಕೊಂಡ್ಲಹಳ್ಳಿ ತಿಪ್ಪೇಸ್ವಾಮಿ, ಸದಸ್ಯರಾದ ಜರುಗು ಬೋರಯ್ಯ, ರೇವಣ್ಣ, ಎನ್.ಟಿ ಅಯ್ಯಣ್ಣ, ತಿಪ್ಪೇರುದ್ರ, ಬಳಗೇರ್ ಮಂಜಣ್ಣ, ಎ.ಕೆ ರುದ್ರಪ್ಪ, ಮಡಿವಾಳ್ ಮಾರಣ್ಣ, ಮಂಜುನಾಥ್ ಸ್ವಾಮಿ, ನಾಗೇಂದ್ರಪ್ಪ, ಸೂರಣ್ಣ, ತಿಮ್ಮಕ್ಕ ನಾಗರಾಜ್, ಸುಜಾತಾ, ಮಾಯಮ್ಮ ದೇವಿಯ ಅರ್ಚಕರು ಗಿರೀಶ್ ಮತ್ತು ಜಗದೀಶ್ ಸ್ವಾಮಿ, ವೀರೇಶ್ ಸ್ವಾಮಿ, ಗುರುಮೂರ್ತಿ ಸ್ವಾಮಿ ಸೇರಿದಂತೆ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು, ಹೂಡೇಂ ಗ್ರಾಮಸ್ಥರು ಸುತ್ತಮುತ್ತಲ ಗ್ರಾಮಸ್ಥರು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.