APMC officials say that a snake does not kill a stick.
ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಕುಕನೂರು ಪಟ್ಟಣದಲ್ಲಿ ಮೊನ್ನೆ ತಾನೇ ಸೆ.25ರಂದು ಎಪಿಎಂಸಿ ಮುಖ್ಯ ದ್ವಾರ ಬಂದ್ ಮಾಡಿ ರೈತರು ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ಒತ್ತಾಯಿಸಿ ಅನಿರ್ಧಿಷ್ಟಾವದಿ ಪ್ರತಿಭಟನೆ ನಡೆಸಲಾಗಿತ್ತು. ರೈತರು ಬೇಡಿಕೆಗಳನ್ನು ಈಡೇಸುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ರೈತರು ಪಟ್ಟು ಹಿಡಿದಿದ್ದರು.
ಪ್ರತಿಭಟನಾ ನಿರತರಲ್ಲಿ ಕುಕನೂರು ತಹಶೀಲ್ದಾರ ಪ್ರಾಣೇಶ, ಎಪಿಎಂಸಿ ಅಧಿಕಾರಿ ಗುರುಸ್ವಾಮಿ ಗುಡಿ, ಕುಕನೂರು ಠಾಣಾ ಪಿಐ ಟಿ. ಗುರುರಾಜ ಇವರು ಪ್ರತಿಭಟನಾಕಾರರಿಗೆ ಮನ ಒಲಿಸಿ, ಸ್ಥಳೀಯವಾಗಿ ಈಡೇರುವ ಬೇಡಿಕೆಗಳನ್ನು ವಾರದೊಳಗೆ ಈಡೇರಿಸಲಾಗುವುದು ಎಂದು ತಿಳಿಸಿ ಪ್ರತಿಭಟನೆಯನ್ನು ನಿಲ್ಲಿಸುವಂತೆ ಮನವಿ ಮಾಡಿದ್ದರು.
ಆದರೆ ಇಲ್ಲಿಯವರೆಗೆ ರೈತರ ಬೇಡಿಕೆಗೆ ಎಪಿಎಂಸಿ ಅಧಿಕಾರಿಗಳು ಸ್ಪಂದನೆ ನೀಡುತ್ತಿಲ್ಲಾ ಎಂದು ಬುಧವಾರದಂದು ರೈತರು ಪುನಃ ಎಪಿಎಂಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಪ್ರತಿಭಟನೆಯಂದು ನೀಡಿದ ಭರವಸೆಗೆ ಸಮ್ಮತಿಸಿದ ರೈತರು ಪ್ರತಿಭಟನೆ ನಿಲ್ಲಿಸಿದರು, ವಾರದೊಳಗೆ ಟೆಂಡರ್ ಪ್ರಕ್ರೀಯೇ ಪ್ರಾರಂಭಿಸಬೇಕಾದ ಇವರು ಕೇವಲ ನಾಲ್ಕೈದು ವರ್ತಕರಿಗೆ ತಿಳಿಸಿದ್ದಾರೆ ಎಂದು ರೈತ ಮುಖಂಡರು ಆರೋಪಿಸಿದರು.
ಇದಕ್ಕೆ ಪ್ರಕ್ರಿಯೇ ನೀಡಿ ಓರ್ವ ವರ್ತಕರು ಮಾತನಾಡಿ ನಾವು ಟೆಂಡರ್ ಕರೆದಿದ್ದು ಕೇವಲ ಮೂರು ನಾಲ್ಕು ಜನ ಭಾಗವಹಿಸಿದ್ದರು, ಮೊದಲು ಹಳ್ಳಿಗಳಲ್ಲಿ ರೈತರ ಬೆಳೆಗಳನ್ನು ಖರೀದಿಸುವುದು ನಿಲ್ಲಿಸಬೇಕು. ರೈತರು ಹಳ್ಳಿಗಳಲ್ಲಿ ತಮ್ಮ ಬೆಳೆಗಳನ್ನು ಕೊಡುವದು ಬಂದ್ ಮಾಡಬೇಕು ಅಂದಾಗ ಟೆಂಡರ್ ಪ್ರಕ್ರಿಯೇ ಪ್ರಾರಂಭವಾಗುತ್ತದೆ ಎಂದರು.
ರೈತ ಸಂಘಟನೆ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ ಮಾತನಾಡಿ ಇಲ್ಲಿರುವ ಪ್ರತಿಯೊಬ್ಬ ವರ್ತಕರು ಎಪಿಎಂಸಿಯಲ್ಲಿ ಟೆಂಡರ್ ಮೂಲಕ ರೈತರು ಬೆಳೆದ ಎಲ್ಲಾ ಧವಸ, ಧಾನ್ಯಗಳನ್ನು ಖರೀದಿಸಬೇಕು. ತಮ್ಮ ಮಿಲ್ ಗಳಲ್ಲಿ ಖರೀದಿಸದೇ ಎಪಿಎಂಸಿಯಲ್ಲಿ ಖರೀದಿಸಬೇಕು, ಪ್ಲಾಸ್ಟಿಕ್ ಚೀಲದಲ್ಲಿ ತೂಕ ಮಾಡುವುದನ್ನು ಬೀಡಬೇಕು ಎಂದರು. ಇದಕ್ಕೆ ವರ್ತಕರು ಮಾತನಾಡಿ ನಮಗೆ ಧಾನ್ಯಗಳ ಶೇಖರಣೆಗೆ ಸ್ಥಳವಕಾಶದ ತೊಂದರೆ ಇರುವದರಿಂದ ನಾವು ಅಲ್ಲಿ ಖರೀದಿಸುತ್ತಿದ್ದೇವೆ ರೈತರು ಎಪಿಎಂಸಿಗೆ ಕರೆದರೇ ಬರುವುದಿಲ್ಲಾ, ವೇಬ್ರಿಜ್ ನಲ್ಲಿ ತೂಕ ಮಾಡಿ ಇಲ್ಲಿಗೆ ಬಂದು ಟೆಂಡರ್ ಗೆ ನಿಲ್ಲುವುದಿಲ್ಲಾ ಎಂದು ವರ್ತಕರು ಹೇಳಿದರು.
ಹಾಗಿದ್ದ ಮೇಲೆ ಇಲ್ಲಿ ವರ್ತಕರಿಗೆ ನೀಡಿರುವ ಗೋದಾಮುಗಳು ಯಾಕೇ ಬೇಕು, ಗೋದಾಮುಗಳು ಇಷ್ಟೋಂದಿದ್ದರು ಶೇಖರಣೆಗೆ ಜಾಗವಿಲ್ಲಾ ಎಂದು ಹೇಳುವುದು ತಮ್ಮ ಅನೂಕೂಲದ ಮಾತಾಗಿದೆ ಎಂದು ರೈತರೊಬ್ಬರು ಪ್ರಶ್ನಿಸಿದ್ದು ಕೇಳಿ ಬಂದಿತು. ಎಪಿಎಂಸಿ ಅಧಿಕಾರಿಗಳಿಗೆ ಸರಕಾರಿ ವಾಹನವಿದ್ದು ಹಳ್ಳಿಗಳಲ್ಲಿ ಖರೀದಿಸುವ ದಲ್ಲಾಳಿಗಳನ್ನು ಪತ್ತೆ ಮಾಡಿ ಅನಧಿಕೃತ ಖರೀದಿದಾರರಿಗೆ ಎಚ್ಚರಿಕೆ ನೀಡಬೇಕು, ಹಳ್ಳಿಗಳಲ್ಲಿ ಖರೀದಿಸುವುದನ್ನು ನಿಲ್ಲಿಸಬೇಕು, ಇಲ್ಲಿ 68 ವರ್ತಕರಿದ್ದು ಪ್ರತಿಯೊಬ್ಬ ವರ್ತಕರು ಟೆಂಡರ್ ನಲ್ಲಿ ಭಾಗವಹಿಸಬೇಕು ಇದಕ್ಕೆ ಎಪಿಎಂಸಿಗೆ ಇರುವ ಕಾಯ್ದೆಗಳನ್ನು ಅಳವಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದರು.
ನಂತರದಲ್ಲಿ ಎಪಿಎಂಸಿ ಅಧಿಕಾರಿ ಗುರುಸ್ವಾಮಿ ಮಾತನಾಡಿ ಕುಕನೂರು ಮುಖ್ಯ ಮಾರುಕಟ್ಟೆಯಲ್ಲದೇ ಸಬ್ ಮಾರ್ಕೆಟ್ ಗಳಲ್ಲಿ ಖರೀದಿಸಲು ಅವಕಾಶವಿದ್ದು ಅಲ್ಲಿಯೇ ಖರೀದಿಸಲು ಪ್ರಾಂಗಣಗಳ ಕೊರತೆ ಇದೆ. ನಮ್ಮ ಭಾಗದ ಹಿರೇವಂಕಲಕುಂಟಾ, ಚಿಕ್ಕೊಪ್ಪ ವಿವಿಧೆಡೆ ರೈತರು ಟೆಂಡರ್ ಗೆ ಇಲ್ಲಿಗೆ ಬರಲು ಆಗುವುದಿಲ್ಲಾ, ವಾಹನದ ಬಾಡಿಗೆ ಹೊರೆಯಾಗುತ್ತಿದ್ದು ಸಬ್ ಮಾರ್ಕೆಟ್ ಗಳನ್ನು ಪ್ರಾರಂಭಿಸಲಾಗುವುದು, ಜೊತೆಗೆ ವಾರದ ಆರು ದಿನಗಳು ಟೆಂಡರ್ ಮೂಲಕ ಖರೀದಿಸಲು ಸೂಚಿಸಲಾಗುವುದು, ಹೊರಗಡೆ ಖರೀದಿಸದಂತೆ ತಿಳಿಸಿ ಎಪಿಎಂಸಿಯಲ್ಲಿ ಖರೀದಿಯನ್ನು ಪ್ರಾರಂಭಿಸಲಾಗುವುದು ಎಂದರು.
ಇದೆಲ್ಲವನ್ನು ಗಮನಿಸಿದರೇ ಕೇವಲ ತಾಳೆ ಹಾಕುವ ಲೆಕ್ಕಾಚಾರದಲ್ಲಿ ಎಪಿಎಂಸಿ ಆಧಿಕಾರಿಗಳು ವರ್ತಕರು ಇದ್ದಾರೆ.ಒಟ್ಟಾರೇಯಾಗಿ ಹೇಳುವದಾದರೇ ಇದು ಹಾವು ಸಾಯಲಿಲ್ಲಾ ಕೋಲು ಮುರಿಯಲಿಲ್ಲಾ ಎನ್ನುವಂತಾಗುತ್ತದೆ ಎನ್ನುವದು ಕೇಲವೊಂದಿಷ್ಟು ರೈತರ ಅಭಿಪ್ರಾಯವಾಗಿದೆ.
ಈ ಸಂದರ್ಭದಲ್ಲಿ ತಾಲೂಕಿನ ಹಲವಾರು ರೈತರು ಇದ್ದರು.