Breaking News

ಕುಡಿತದಿಂದ ಸಂಸಾರವು ಒಡೆದುನುಚ್ಚುನೂರಾಗುತ್ತದೆ ಸುತ್ತುರು ಶ್ರೀ ಗಳು ಅಮಲು ರೋಗಿಗಳಿಗೆ ಕೀವಿಮಾತು

The family is broken by alcoholism.

ಜಾಹೀರಾತು
IMG 20240930 WA0308


ವರದಿ : ಬಂಗಾರಪ್ಪ ,ಸಿ .
ಹನೂರು :ಅಮಲು ರೋಗಿಗಳನ್ನೂದ್ದೇಶಿಸಿ ಮಾತನಾಡಿದ ಶ್ರೀ ಸಾಲೂರು ಶ್ರೀ ಗಳಾದ
ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳು ನಮ್ಮ ಮಠದಂತೆ , ಸುತ್ತುರು ಮಠವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಬಹು ಎತ್ತರಕ್ಕೆ ಬೆಳೆದು ನಿಂತಿದೆ, ನಿಮ್ಮ ಚಟವನ್ನು ಹತ್ತಿಕುವ ರೀತಿಯಲ್ಲಿ ಸಮಾಜದ ಮೇಲೆ ಉತ್ತಮ ಪ್ರಭಾವ ಬೀರುವಂತ ಕಾರ್ಯಗಳನ್ನು ಮಾಡುವ ಮೂಲಕ ಮುಖ್ಯವಾಹಿನಿಗೆ ಅಮಲುರೋಗಿಗಳು ಬರಬೇಕು , ಕಾರ್ಯಗಾರ ಮುಗಿದ ಮೇಲೆ
ದೇಹದ ಚಟುವಟಿಕೆಗಳನ್ನು ಸಹ ಬದಲಾಯಿಸಿಕೊಳ್ಳಬೇಕು . ಹನೂರಿನಲ್ಲಿ ನಡೆದ ಶಿಬಿರದ ವಿದ್ಯಾರ್ಥಿಗಳು ಎಲ್ಲಾರು ವ್ಯಸನ ಮುಕ್ತರಾಗಬೇಕು,ಮನುಷ್ಯನಿಗೆ ಪ್ರತಿ ಕ್ಷಣವು ಅಮೂಲ್ಯವಾಗಿದೆ ಎಂದು ತಿಳಿಸಿದರು .

ತಾಲ್ಲೂಕಿನ ವಾಸವಿ ಕಲ್ಯಾಣ ಮಂಟಪದಲ್ಲಿ ಜಗದ್ಗುರು ಶ್ರೀ ವಿರಾಸಿಂಹಾಸನ ಮಹಾಸಂಸ್ಥಾನ ಮಠ ಹಾಗೂ ಶ್ರೀ ಸುತ್ತೂರು ಜೆಎಸ್ಎಸ್ ಮಹಾವಿಧ್ಯಪೀಠ ಮೈಸೂರ್ ಇವರ ಸಹಯೋಗದೊಂದಿಗೆ ಉಚಿತ ಕುಡಿತ ಬಿಡಿಸುವ ಶಿಬಿರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ
ಸುತ್ತುರು ಶ್ರೀ ಶ್ರೀ ದೇಶಿಕೇಂದ್ರ ಸ್ವಾಮೀಜಿಗಳು ಮಾತನಾಡಿ ಅನೇಕ ಧರ್ಮದವರು ಎರಡಾಗಿರುವುದನ್ನು ನಾವು ಕಾಣಬಹುದು ಕಾರಣ ಕೆಲವು ಕಲ್ಪನೆಗಳನ್ನು ತಪ್ಪು ಎಂದು ಕೆಲವರು ಹೆಳಿದರೆ,ಇನ್ನು ಕೆಲವರು ಸತ್ಯ ಎಂದು ಹೆಳುವುದು . ಸಮಾಜದಲ್ಲಿ ಯಾರು ಕುಡಿತಕ್ಕೊಳಾಗುತ್ತಾರೊ ಅವರ ಮನಸ್ಥಿತಿಯನ್ನು ನೋಡಿದರೆ ಜೀವನ ಸುದಾರಿಸಲು ಅಸಾದ್ಯವಾಗಿರುತ್ತದೆ , ಕುಡಿಯುವುದರಿಂದ ಮತ್ತು ಧೂಮಪಾನ ಸೇವನೆ ಮಾಡುವುದರಿಂದ ಅವರ ಉಸಿರಾಟಕ್ಕೆ ಬಹಳ ತೊಂದರೆಯಾಗುತ್ತದೆ ಅದ್ದರಿಂದ ದೇಹದ ಮೇಲೆ ಅಡ್ಡ ಪರಿಣಾಮಗಳು ಬೀರುತ್ತವೆ ,ಇಂದಿನ ಯುವಕರು ಪಟ್ಟಣಗಳಲ್ಲಿ ಸಿಗುವ ಮದ್ಯಪಾನ ಔಷದಿಗಳನ್ನು ತೆಗೆದುಕೊಂಡು ಕೆಟ್ಟ ಚಟದ ದಾಸರಾಗುತ್ತಿದ್ದಾರೆ .ದಿವಂಗತ ಮಾಜಿ ಸಚೀವರಾದ ಅಜೀಜ್ ಸೇಠ್ ನಮ್ಮ ಮಠದ ಪರಮ ಭಕ್ತರು ಅವರು ಸಹ ಧೂಮಪಾನ ದಾಸರಾಗಿದ್ದರು ಅಂತಹವರು ಕೊನೆಗೆ ಉಸಿರಾಟದ ಸಮಸ್ಯೆಯಿಂದ ಬಳಲಿ ಸಾವನಪ್ಪಿದ್ದರು ,ಕುಡಿತದ ದಾಸರಾಗಲು ನೀವು ಬಹಳ ಸುಲಭವಾಗಿರುತ್ತದೆ, ಆದರೆ ಅದರಿಂದ‌ ಹೊರಗಡೆ ಬರಲು ಸಾಕಷ್ಟು ಸಮಯ ಬೇಕಾಗುತ್ತದೆ , ದುಶ್ಚಟದಿಂದ ದುರವಿದ್ದಷ್ಟು ಬದುಕಿನಲ್ಲಿ ಸಂತೋಷದಿಂದ ನೆಮ್ಮದಿಯಿಂದ ಬದುಕಲು ಸಾದ್ಯವಾಗುತ್ತದೆ, ,ಸರ್ಕಾರಗಳು ಸಹ ಕಠಿಣ ಕ್ರಮ‌ ತೆಗೆದುಕೊಳ್ಳಬೇಕು ,ಇತ್ತಿಚಿನ ದಿನಗಳಲ್ಲಿ ಮಹಿಳೆಯರು ಸಹ ಧೂಮಪಾನ ಮದ್ಯಪಾನ ದಾಸರಾಗುತ್ತಿದ್ದಾರೆ. ಸರ್ಕಾರದಿಂದ ಮಧ್ಯ ದಿಂದಲೆ ಅತಿ ಹೆಚ್ಚು ಆದಾಯ ಬರುತ್ತದೆ,ಇಂದಿನಿಂದ ನೀವು ಸಂಕಲ್ಪ ಮಾಡಬೇಕು ಎಲ್ಲಾವು ಸಾಧ್ಯವಾಗುತ್ತದೆ ,ನಿಮ್ಮ ಆತ್ಮಸಾಕ್ಷಿಯ ಅನುಗುಣವಾಗಿ ನಡೆದುಕೊಳ್ಳಬೇಕು ಎಂದು ಹಿತ ವಚನ ನೀಡಿದರು .

ಶಾಸಕರಾದ ಎಮ್ ಆರ್ ಮಂಜುನಾಥ್ ಮಾತನಾಡಿ ಜನರ ಆರೋಗ್ಯ ಮತ್ತು ದೇಹದಲ್ಲಿನ‌ ಭಾಗಗಳು ಕುಡಿತದಿಂದ ಹಾನಿಕಾರಕವಾಗಿರುತ್ತದೆ ಎಂಬುದನ್ನು ಎಲ್ಲಾ ಗಣ್ಯ ವ್ಯಕ್ತಿಗಳ ತಮ್ಮ ಅನಿಸಿಕೆಗಳನ್ನು ಸವಿ ವಿಸ್ತಾರವಾಗಿ ತಿಳಿಸಿದ್ದಾರೆ .
ದಿನ ನಿತ್ಯ ತಮ್ಮಬಳಿ ಬರುವ ವ್ಯಕ್ತಿಗಳಿಗೆ ತಿಳುವಳಿಕೆಗಳನ್ನು ಹೆಳುತ್ತ ಈ ದುಶ್ಚಟದಿಂದ ದೂರವಿರಬೇಕು ,ಸಂಸಾರ ಸಾಗಿಸಲು ಮಹಿಳೆಯರಿಗೆ ಬಹಳ ಕಷ್ಟವಾಗುತ್ತದೆ , ನೀವುಗಳು
ಮಹಿಳೆಯರ ಮನಸ್ಥಿತಿಯನ್ನು ಬದಾಲಾಯಿಸಿ ಅವರ ಮನ ಪರಿವರ್ತನೆ ಮಾಡಬೇಕು ,ಸರ್ಕಾರದ ಆದಾಯ ನೋಡುವುದಾದರೆ ಸಾಮಾನ್ಯ ಜನರ ಜೀವನದಲ್ಲಿ ಬಹಳಷ್ಟು ಏರುಪೇರಾಗುತ್ತಿದೆ , ಇಂತಹ ವಿಷಯಗಳ ಕಡೆ ಸರ್ಕಾರಗಳು ಬಹಳ ಗಂಭೀರವಾಗಿ ಘಮನ ಹರಿಸಬೇಕು ,ನಮಗೆ ಭಗವಂತ ಕೊಟ್ಟಿರುವ ದೇಹವನ್ನು ಸಂಪೂರ್ಣವಾಗಿ ಅತೋಟಿಗೆ ತಂದು ಮುಂದಿನ ದಿನಗಳಲ್ಲಿ ಜೀವನ ಶೈಲಿಯನ್ನು ಬದಲಾಯಿಸುಕೊಂಡು ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಆಗಮಿಸಿ ಹಿತವಚನ ನೀಡಿದ
ಪರಿಮಳ ನಾಗಪ್ಪನವರು ಅಮಲು ರೋಗಿಗಳಿಗೆ ಇದೊಂದು ಸುವರ್ಣಾವಕಾಶ ನಿಮಗೆ ಸಿಕ್ಕಿದ್ದು ಬರಿ ಕಾರ್ಯಗಾರವಲ್ಲ ಇದೊಂದು ಜೀವನ ಶೈಲಿ ಇಲ್ಲಿ ಮಧ್ಯವನ್ನು ತ್ಯೆಜಿಸಿ ನಂತರ ಹೊರಗಡೆ ಅದರ ದಾಸರಾಗಬಾರದು , ನಿಮ್ಮನ್ನೆ ನಂಬಿ ಕುಟುಂಬವು ಹಲವಾರು ಕುಟುಂಬಗಳು ಆಶ್ರಯ ಪಡೆದಿದೆ ಆದ್ದರಿಂದ ನಿವು ಪ್ರಮುಖ ವ್ಯಕ್ತಿಗಳಾಗಿ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದ್ದಾರೆ . ಮಾನಶ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ
ಡಾಕ್ಟರ್ ದತ್ತೇಶ್ ಕುಮಾರ್ ಮಾತನಾಡಿ ನಮ್ಮ ಭಾಗದಲ್ಲಿ ಮೊದಲಿಗೆ ಶಿಕ್ಷಣದ ಕ್ರಾಂತಿಯನ್ನು ಮಾಡಿದವರು ಜೆಎಸ್ ಎಸ್ ಸಂಸ್ಥೆಯವರು . ಪ್ರತಿನಿತ್ಯ ಲಕ್ಷಾಂತರ ವಿದ್ಯಾರ್ಥಿಗಳು ವಿದ್ಯಾಬ್ಯಾಸ ಮಾಡುತ್ತಿದ್ದಾರೆ , ಶಿಕ್ಷಣ ,ಅನ್ನ ,ಆಶ್ರಯ ,ನೀಡುವುದರ ಜೊತೆಯಲ್ಲಿ ಸಾಮೋಹಿಕ ವಿವಾಹ ಮತ್ತು ಕುಡಿತ ಬಿಡಿಸುವ ಹಲವಾರು ಶಿಬಿರಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ನಮ್ಮ ದೇಶದಲ್ಲಿ ನೂರು ಜನರಿಗೆ ಹದಿನೆಂಟು ಪರ್ಶೆಂಟ್ ಜನ ಪುರುಷರು ಕುಡಿತದ ದಾಶರಾಗುತ್ತಿದ್ದಾರೆ ಇನ್ನೂ ,ಎರಡು ಪರ್ಶೇಂಟ್ ಮಹಿಳೆಯರು ಸಹ ಕುಡಿತಕ್ಕೆ ದಾಸರಾಗಿದ್ದಾರೆ ಎಂದು ಸರ್ವೆಯಲ್ಲಿನ ಮಾಹಿತಿ ಸಿಕ್ಕಿದೆ ,ಇಂತಹ ಸಾಮಾಜಿಕ ಕಾರ್ಯಕ್ಕೆ ಮಠದ ಕೊಡುಗೆ ಅಪಾರವಾದದ್ದು ಎಂದರು .
ಮಹದೇಶ್ವರ ಕ್ಷೇತ್ರದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ
Ae ರಘು ರವರು ಮಾತನಾಡಿ ಜೆ ಎಸ್ ಎಸ್ ಸಂಸ್ಥೆಗಳು ಇಂತಹ ಉಚಿತ ಶಿಬಿರಗಳನ್ನು ಹಮ್ಮಿಕೊಂಡಿರುವುದು ಬಹಳ ಸಂತೋಷದ ವಿಷಯ ಸಾಮಾಜಿಕ ಭದ್ರತೆ ನೀಡುವ ಜವಾಬ್ದಾರಿಗಳನ್ನು ಹೊಂದಿದೆ ಇಂದು ಯುವ ಸಮೂಹವು ಗೆದ್ದರು ಪಾರ್ಟಿ ಸೋತರು ಪಾರ್ಟಿ ಎಂಬಾಂತಾಗಿದೆ , ಮನುಷ್ಯನ ದೇಹವು ಎಂಬತ್ನಾಲ್ಕು ಕೋಟಿ ಜೀವ ರಾಶಿಗಳನ್ನು ದಾಟಿ ಬಂದ ದೇಹವಾಗಿದೆ , ಈಗಾಗಲೇ ಹಲವರು ಕುಡಿತದಿಂದ ಇಡಿ ಕುಟುಂಬವನ್ನೆ ಬಲಿ ಕೊಟ್ಟಿರುತ್ತಾರೆ ,ಮಾನವ ಬೆಳೆದೆಂತಲ್ಲ ಒಂದಿಲ್ಲೊಂದು ಚಟಕ್ಕೆ ದಾಸರಾಗಿದ್ದೆವೆ ,ಹಿರಿಯರ ಜೀವನ ಮೌಲ್ಯಯುತವಾಗಿತ್ತು . ನಾನು ಸತ್ತರೆ ದೇಹವೆ ಮಣ್ಣಾಗುತ್ತದೆ ಏನೆ ಸಂಪಾದನೆ ಮಾಡಿದರು ವ್ಯರ್ಥ , ಸಂಸ್ಕಾರವಂತರಾಗದಿದ್ದರೆ ಅದು ನಶ್ವರ ,ಬಸವಣ್ಣನವರು ದೇಹವನ್ನು ದೇವಾಲಯಕ್ಕೆ ಹೋಲಿಸುತ್ತಿದ್ದಾರೆ .ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಮಮ್ತಾಜ್ ಭಾನು , ಅಯೋಜಕರಾದ ಜೆ ಎಸ್ ಎಸ್ ಸಂಸ್ಥೆಯ ಪದಾಧಿಕಾರಿಗಳು ,ಸಾಮಾಜಿಕ ಹೋರಾಟಗಾರ ವಿನೋದ್ ,ಪಟ್ಟಣ ಪಂಚಾಯತಿ ಸದಸ್ಯರಾದ ಸೋಮ ಶೇಖರ್ , ವೀರ ಶೈವ ಅಧ್ಯಕ್ಷರಾದ ಸೋಮಶೇಖರ್ .ಡಾಕ್ಟರ್ ಮಂಜುನಾಥ್ . ವೆಂಕಟೆಗೌಡ ,ಕ್ರಿಷ್ಣ ,ರೈತ ಮುಖಂಡ ಮೂರ್ತಿ, ಸೇರಿದಂತೆ ಶಿಬಿರಾರ್ತಿಗಳು ಹಾಗೂ ಅವರ ಕುಟುಂಬಸ್ಥರು,ಸ್ವಾಮೀಜಿಗಳು ಹಾಜರಿದ್ದರು .

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.