Invitation to Literature Prof. Hampana to inaugurate Mysore Dussehra Festival

ಬೆಂಗಳೂರು, ಸೆ.26(ಕರ್ನಾಟಕ ವಾರ್ತೆ): ಮೈಸೂರು ಜಿಲ್ಲಾಡಳಿತ ವತಿಯಿಂದ ಹೆಸರಾಂತ ಸಂಶೋಧಕರು, ಸಾಹಿತಿಗಳಾದ ಪ್ರೊ. ಹಂ.ಪ. ನಾಗರಾಜಯ್ಯ (ಹಂಪನಾ) ಅವರನ್ನು ಮೈಸೂರು ದಸರಾ ಮಹೋತ್ಸವ ಉದ್ಘಾಟನೆಗೆ ಗುರುವಾರ ಆಹ್ವಾನಿಸಲಾಯಿತು.
ಹಂಪನಾ ಅವರ ಬೆಂಗಳೂರಿನ ಕ್ರಸೆಂಟ್ ರಸ್ತೆಯ ಅಮೇರಿಕನ್ ಕಾಲೋನಿಯಲ್ಲಿರುವ ಅವರ ನಿವಾಸಕ್ಕೆ ಆಗಮಿಸಿ ಆಹ್ವಾನ ಕೋರಲಾಯಿತು.
ಮೈಸೂರು ಪೇಟ ತೋಡಿಸಿ,ಫಲಫುಷ್ಪದೊಂದಿಗೆ ಆಮಂತ್ರಣ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮೀಕಾಂತರೆಡ್ಡಿ, ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್, ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಎಸ್ಪಿ ವಿಷ್ಣುವರ್ಧನ್, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜ್, ಚಾಮುಂಡಿ ಬೆಟ್ಟದ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ.ರೂಪಾ ಮತ್ತು ಸ್ವಾಗತ ಸಮಿತಿಯ ಎಲ್ಲ ಅಧಿಕಾರಿಗಳು ಇದ್ದರು.
Kalyanasiri Kannada News Live 24×7 | News Karnataka
