Breaking News

ಮಂಗಳೂರನಿಂದ ಸವದತ್ತಿ ಯಲ್ಲಮ್ಮ ನೂತನ ಬಸ್ ಆರಂಭ,,

New bus from Mangalore to Savadatti Yallamma started.

ಜಾಹೀರಾತು
IMG 20240925 WA0372


(ಗ್ರಾಮಸ್ಥರಿಂದ ವಿಶೇಷ ಪೂಜೆ)

ಕೊಪ್ಪಳ (ಕುಕನೂರು) : ಮಂಗಳೂರು ಸೇರಿದಂತೆ ಸುತ್ತ ಮುತ್ತಲಿನ ಗ್ರಾಮಗಳ ಸಾರ್ವಜನಿಕರ ಬೇಡಿಕೆಯಂತೆ ಇಂದು ಮಂಗಳೂರಿನಿಂದ ಸವದತ್ತಿಗೆ ನೂತನ ಬಸ್ ಸೇವೆಯನ್ನು ಕುಕನೂರ ಡಿಪೋದಿಂದ ಪ್ರಾರಂಭಿಸಲಾಯಿತು.

ಸವದತ್ತಿಗೆ ನೂತನ ಮಾರ್ಗವನ್ನು ನೀಡಿದ್ದಕ್ಕೆ ಸಾರ್ವಜನಿಕರು ಬಸ್ ಗೆ ಪೂಜೆಯನ್ನು ನೆರವೇರಿಸಿದರು.

ಈ ನೂತನ ಬಸ್ ಮಂಗಳೂರನಿಂದ ಕುಕನೂರ, ಬನ್ನಿಕೊಪ್ಪ, ಅಣ್ಣಿಗೇರಿ, ನವಲಗುಂದ, ಯಮನೂರ, ಮಾರ್ಗವಾಗಿ ಸವದತ್ತಿಗೆ ಬೆಳಗ್ಗೆ ಹೊರಡುವುದು.

ರಾತ್ರಿ ವೇಳೆ ಸಮಯಕ್ಕೆ ಅನುಸಾರದಂತೆ ಮರಳಿ ಮಂಗಳೂರಿಗೆ ಬರಲಾಗುವುದು ಎಂದು ಸಾರಿಗೆ ಘಟಕ ವ್ಯವಸ್ಥಾಪಕ ಸೋಮಶೇಖರ ತಿಳಿಸಿದರು.

ಈ ಸಂದರ್ಭದಲ್ಲಿ ಸಾರಿಗೆ ಚಾಲಕ ನಿಂಗಪ್ಪ ಗುಡಿˌ ನಿರ್ವಾಹಕ ಲಿಂಗಯ್ಯನವರುˌ ಕಳಕಪ್ಪ ಇಲಕಲ್ ಹಾಗೂ ಗ್ರಾಮದ ಮುಖಂಡರಾದ ಎಂ.ಬಿ.ಅಳವಂಡಿ, ಗ್ರಾಂಪಂ. ಅಧ್ಯಕ್ಷ ಸಕ್ರಪ್ಪ ಚಿನ್ನೂರˌ ಕೊಟ್ರಪ್ಪ ತೋಟದ, ರೇವಣಸಿದ್ದಯ್ಯ ಅರಳಲೆಹಿರೇಮಠˌ ಈರಣ್ಣ ಎಮ್ಮಿˌ, ಸುರೇಶ ಮ್ಯಾಗಳೇಶಿ, ಶರಣಪ್ಪ ಎಮ್ಮಿ,ˌಯಂಕಣ್ಣ ಉಪ್ಪಾರˌ ಮಂಗಳೇಶ ಬಂಡಿˌ ರುದ್ರಗೌಡ್ರ ಪಾಟೀಲ, ಮಂಜುನಾಥ ಬಂಡಿˌ ಸುಭಾಸ ಮದಕಟ್ಟಿˌ ಲಿಂಗರಾಜ ವಿವೇಕಿ, ಶಿವುಕುಮಾರ ಬಂಡಿˌ ಜಗದೀಶ ಉಮಚಗಿˌ ಅನಿಲ ಕಲ್ಭಾವಿ, ಗಂಗಾಧರ ಬಡಿಗೇರˌ ಎ.ಸಿ ಕಾಲಿಮಿರ್ಚಿˌ ದೇವಪ್ಪ ಚನ್ನಿಹಾಳˌ ಗಟ್ಟೆಪ್ಪ ಉಮಚಗಿ, ಪ್ರಶಾಂತ ಲದ್ದಿˌ, ಬಸವರಾಜ ಉಮಚಗಿˌ ಬಾಬುಸಾಬ ಬೆಣಕಲ್ˌ ಶಾಂತಪ್ಪ ಕಡೇಮನಿ, ವಿರೇಶ ಜಂತ್ಲಿ ಮೊದಲಾದವರು ಉಪಸ್ಥಿತರಿದ್ದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.