DCM and Water Resources Minister condemns the burning issue of Tungabhadra and Narayanapur canals – Chamarasa Mali Patil.
ರಾಯಚೂರು,ಸೆ.24- ತುಂಗಭದ್ರಾ ಹಾಗೂ ನಾರಾಯಣಪೂರು ಕಾಲುವೆಗಳ ಜ್ವಲಂತ ಸಮಸ್ಯೆಗಳ ಬಗ್ಗೆ ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅಸಡ್ಡೆ ತೋರಿ ಉಡಾಫೆ ಹೇಳಿಕೆ ನೀಡಿದ್ದು ಖಂಡನೀಯ ವೆಂದು ರಾಜ್ಯ ರೈತ ಸಂಘ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದರು. ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರಿಂದ ಸಿಎಂ ಬಾಗಿನ ಅರ್ಪಿಸುವ ಕಾರ್ಯಕ್ರಮದಲ್ಲಿ ಕೊನೆ ಭಾಗದ ನೀರಿನ ಸಮಸ್ಯೆ ಬಗ್ಗೆ ಸಿದ್ದರಾಮಯ್ಯರವರಿಗೆ ಮನವರಿಕೆ ಮಾಡಿದ ವೇಳೆ ಅವರು ಈ ಭಾಗದ ಸಚಿವರನ್ನು ಕರೆದು ರೈತರು ನೀರು ದೊರಕದಿರುವುದಕ್ಕೆ ರಸ್ತೆಗಿಳಿದು ಪ್ರತಿಭಟನೆ ಮಾಡುತ್ತಿದ್ದರೂ ನಿವೇಕೆ ಕೊನೆ ಭಾಗಕ್ಕೆ ನೀರು ಸಿಗುವಂತೆ ಕ್ರಮವಹಿಸಿಲ್ಲವೆಂದು ಪ್ರಶ್ನಿಸಿದರು ಎಂದರು.
ಡಿಸಿಎಂ ಹಾಗೂ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ರನ್ನು ಭೇಟಿ ಮಾಡಿದಾಗ ರೈತರು ರಸ್ತೆಗಿಳಿದು ಪ್ರತಿಭಟನೆ ಮಾಡಲಿ ಎಂಬ ಉಡಾಫೆ ಉತ್ತರ ನೀಡಿ ನೀರಾವರಿ ಸಮಸ್ಯೆಗಳ ಬಗ್ಗೆ ಅಸಡ್ಡೆ ತೋರಿದರು ಅವರ ಈ ವರ್ತನೆ ಖಂಡನೀಯವಾಗಿದೆ ಎಂದು ಹೇಳಿದ ಅವರು ಕೊನೆ ಭಾಗಕ್ಕೆ ನಿಗದಿತ ಪ್ರಮಾಣದಲ್ಲಿ ನೀರು ದೊರಕುವಂತೆ ಸಂಸದರು, ಶಾಸಕರ, ನೀರಾವರಿ ಅಧಿಕಾರಿಗಳ ಸಭೆ ನಡೆಸಬೇಕೆಂದ ಅವರು ನಿರ್ಲಕ್ಷ್ಯ ವಹಿಸಿದರೆ ಪ್ರತಿಭಟನೆ ಅನಿವಾರ್ಯವೆಂದರು. ಈ ಸಂದರ್ಭದಲ್ಲಿ ಬೂದಯ್ಯ ಸ್ವಾಮಿ, ಅಮರಣ್ಣ ಗುಡಿಹಾಳ, ಪ್ರಭಾಕರ ಪಾಟೀಲ್,ಮಲ್ಲಯ್ಯ ಇನ್ನಿತರರು ಇದ್ದರು.