Vishwakarma’s contribution is immense

ಪಂಚಯ್ಯ ಹಿರೇಮಠ,,
ಕೊಪ್ಪಳ : ಅನ್ಯಾಯಕ್ಕೊಳಗಾದ ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಕೊಪ್ಪಳ ಜಿಲ್ಲಾ ದಲಿತ ಮುಖಂಡ ಕರಿಯಪ್ಪ ಗುಡಿಮನಿ ಎಚ್ಚರಿಸಿದರು.
ಅವರು ಕೊಪ್ಪಳ ಜಿಲ್ಲಾಧಿಕಾರಿ ಕಚೇರಿಯಿಂದ ಸೆಪ್ಟಂಬರ್ 17ರಿಂದ ಸಂಗನಾಳ ಚಲೋ ಜಾಥಾ ಹಾಗೂ ಸೆಪ್ಟಂಬರ್ 18ರಂದು ಸಂಗನಹಾಲದಲ್ಲಿ ನಡೆವ ಸೌಹಾರ್ದ ಸಮಾವೇಶ ಕುರಿತು ಮಾತನಾಡಿ ದಲಿತ ದಮನಿತರ ಮೇಲಿನ ದೌರ್ಜನ್ಯ ವಿರೋಧಿಸಿ ಸಂಗನಹಾಲ ದಲಿತ ಯುವಕ ಯಮನಪ್ಪನ ಕೊಲೆ ಖಂಡಿಸಿ ಮಾತನಾಡಿ ಸರಕಾರದ ನಿರ್ಲಕ್ಷ್ಯತೆಯಿಂದ ಇಂತಹ ಪ್ರಕರಣಗಳು ಜಿಲ್ಲಾದ್ಯಂತ ಮರುಕಳಿಸುತ್ತಿವೆ ಎಂದು ಆರೋಪಿಸಿದರು.
ಕೊಪ್ಪಳದಲ್ಲಿ ಪಾಳೆಗಾರಿಕೆಯಿಂದ ಇಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಇದಕ್ಕೆ ಜಿಲ್ಲಾ ಸಚಿವರು ಹಾಗೂ ಶಾಸಕರುಗಳೇ ನೆರ ಹೊಣೆಗಾರರಾಗುತ್ತಾರೆ, ಜನ ಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದ ದಲಿತರ ಮೇಲೆ ಶೋಷಣೆ ಹಲ್ಲೆಗಳಂತಹ ಪ್ರಕರಣಗಳು ಹೆಚ್ಚುತ್ತಿವೆ.
ಮುಸ್ಲಾಪೂರದಲ್ಲಿ ಹತ್ಯೆಯಾದ ಯುವತಿ ಮರಿಯಮ್ಮ, ಹಾಗೂ ಸಂಗನಹಾಲದಲ್ಲಿಹತ್ಯೆಯಾದ ಯಮನಪ್ಪ ಇವರೆಡು ಪ್ರಕರಣಗಳನ್ನು ವಿಷೇಶ ಪ್ರಕರಣಗಳೆಂದು ಪರಿಗಣಿಸಿ ಎರಡು ಕುಟುಂಬಗಳಿಗೆ ಆರ್ಥಿಕ ಭದ್ರತೆ, ಸರಕಾರಿ ಉದ್ಯೋಗ ನೀಡಬೇಕು ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಆಗ್ರಹಿಸಿದರು.
ನಂತರದಲ್ಲಿ ದಲಿತ ಮುಖಂಡರು, ಮಹಿಳೆಯರು ಮಾತನಾಡಿ ಮಹಿಳೆಯರಿಗೆ ಭದ್ರತೆ ಒದಗಿಸಿ ದಲಿತ ಜನಾಂಗದ ಮೇಲೆ ನಿರಂತರ ಶೋಷಣೆಗಳಿಗೆ ಕಡಿವಾಣ ಹಾಕಲು ಜನ ಪ್ರತಿನಿಧಿಗಳು ಮುಂದಾಗಬೇಕು ಒಂದು ವೇಳೆ ಸ್ಪಂದನೆ ನೀಡದಿದ್ದಲ್ಲಿ ಮಳೆ, ಬಿಸಿಲು, ಗಾಳಿಗೆ ಅಂಜದೇ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.