Vishwakarma’s contribution is immense
ಸಾವಳಗಿ: ವಿಶ್ವಕರ್ಮ ಸಮುದಾಯವು ಕಲೆ ಮತ್ತು ವಾಸ್ತುಶಿಲ್ಪ ಕ್ಷೇತ್ರಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದೆ ಎಂದು ವಿಶ್ವಕರ್ಮ ಸಮಾಜದ ವಲಯ ಅಧ್ಯಕ್ಷ ಅನೀಲ ಬಡಿಗೇರ ಎಂದು ಹೇಳಿದರು.
ನಗರದ ಕಾಳಿಕಾದೇವಿ ದೇವಸ್ಥಾನದ ಆವರಣದಲ್ಲಿ ನಡೆದ ವಿಶ್ವಕರ್ಮ ಸಮಾಜದವರು ಹಾಗೂ ವಿವಿಧ ಮುಖಂಡರು ಸೇರಿ ವಿಶ್ವಕರ್ಮ ಜಯಂತಿಯನ್ನು ಆಚರಿಸಲಾಯಿತು.
ವಿಶ್ವಕರ್ಮರು ಸಾವಿರಾರು ಸಂಖ್ಯೆಯಲ್ಲಿದ್ದು ವಿವಿಧ ಕುಶಲಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ್ದು, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಈ ಸಮಾಜಕ್ಕೆ ವಿಶೇಷ ಸೌಲಭ್ಯವನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನಂತರ ಶಿಕ್ಷಕರಾದ ಪ್ರವೀಣ್ ಲೋಹಾರ ಮಾತನಾಡಿ ಪ್ರತಿನಿತ್ಯ ಜನರು ಬಳಸುವ ಕರಕುಶಲ ಸಾಮಗ್ರಿಗಳು, ಲೋಹ, ಕಬ್ಬಿಣ, ದೇವರ ವಿಗ್ರಹ, ಚಿತ್ರಪಟಗಳು, ಗೃಹಬಳಕೆ ವಸ್ತುಗಳು, ಸ್ಮಾರಕಗಳ ನಿರ್ಮಾಣದ ಕಾರ್ಯದಲ್ಲಿ ವಿಶ್ವಕರ್ಮರ ಕಲೆಯ ಜೀವಂತಿಕೆಯ ಅಸ್ತಿತ್ವವನ್ನು ಇಂದಿಗೂ ಉಳಿಸಿರುವುದೇ ಸಾಕ್ಷಿ. ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಹಿರಿಯರಾದ ಮೌನೇಶ್ ಪತ್ತಾರ, ಮೋನಪ್ಪ ಬಡಿಗೇರ, ಈರಪ್ಪ ಬಡಿಗೇರ, ತಮ್ಮಣ್ಣ ಬಡಿಗೇರ, ಸದಾಶಿವ ಬಡಿಗೇರ, ಗೋಪಾಲ ಬಡಿಗೇರ, ಮುತ್ತಣ್ಣ ಬಡಿಗೇರ, ಬಸವರಾಜ ಬಡಿಗೇರ, ಅಭಯಕುಮಾರ ನಾಂದ್ರೇಕರ, ಪ್ರವೀಣ್ ಮೇಲಿನಕೇರಿ, ಪೊಲೀಸ್ ಸಿಬ್ಬಂದಿ ಬಸಣ್ಣನವರ, ಗ್ರಾಮ ಪಂಚಾಯತ ಸದಸ್ಯರು, ಪಿಕೆಪಿಎಸ ಬ್ಯಾಂಕ ನಿರ್ದೇಶಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.