Bike Tata S head on collision,,,

ಯರೇಹಂಚಿನಾಳ ಪಿಡಿಒ ಗಂಭೀರ,,,
ವರದಿ : ಪಂಚಯ್ಯ ಹಿರೇಮಠ,,
ಕೊಪ್ಪಳ : ಬೆಣಕಲ್ ಮಾರ್ಗವಾಗಿ ಮಸಬಹಂಚಿನಾಳ ಮೂಲಕ ಯರೇಹಂಚಿನಾಳ ಗ್ರಾಮ ಪಂಚಾಯತಿ ಪಿಡಿಒ ಅಡಿವೆಪ್ಪ ಎನ್ನುವವರು ಬೈಕ್ ಮೂಲಕ ತೆರಳುವ ಸಂದರ್ಭದಲ್ಲಿ ಹಾಲು ತುಂಬಿಕೊಂಡು ಬರುತ್ತಿದ್ದ ಟಾಟಾ ಎಸ್ ವಾಹನಕ್ಕೆ ಮುಖಾ ಮುಖಿ ಡಿಕ್ಕಿ ಸಂಬಂವಿಸಿದೆ.

ಮಸಬಹಂಚಿನಾಳ ಒಳ ರಸ್ತೆಯ ಮೂಲಕ ಯರೇಹಂಚಿನಾಳ ಗ್ರಾಮ ಪಂಚಾಯತಿಗೆ ಮಂಗಳವಾರದಂದು ಬೆಳಗ್ಗೆ 8 ಗಂಟೆಗೆ ಕಲ್ಯಾಣ ಕರ್ನಾಟಕ ದ್ವಜಾರೋಹಣ ನಿಮಿತ್ಯ ಹೋರಟಿದ್ದರು ಎನ್ನಲಾಗಿದೆ.
ಡಿಕ್ಕಿ ರಭಸಕ್ಕೆ ಪಿಡಿಒ ಅವರಿಗೆ ಎದೆ ಭಾಗಕ್ಕೆ ತೀವ್ರ ಸ್ವರೂಪದ ಗಾಯವಾಗಿದ್ದು, ಎಡಗಾಲಿಗೆ ಪೆಟ್ಟಾಗಿದೆ. ಕೂಡಲೇ ಕುಕನೂರ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕಳಿಸಲಾಗಿದೆ. ಈ ಕುರಿತು ಕುಕನೂರು ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
Kalyanasiri Kannada News Live 24×7 | News Karnataka
