Eid Milad was celebrated with Kannada flag




ವರದಿ : ಬಂಗಾರಪ್ಪ .ಸಿ .
ಹನೂರು :ದೇಶಾದ್ಯಂತ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು . ಆಚರಿಸಿದರು ನಾವು ಕನ್ನಡ ಬಾವುಟವನ್ನು ಹಿಡಿದು ಕನ್ನಡ ಮಾತೆಗೆ ನಮಿಸುತ್ತ ಎಲ್ಲಾ ಮುಸ್ಲಿಂ ಸಮುದಾಯದವರಿಗೂ ಶಾಂತಿ ಸಹಬಾಳ್ವೆಯ ತಿಳಿ ಹೇಳಿ ಆಚರಿಸಿದೆವು ಎಂದು ಕರ್ನಾಟಕ ಪತ್ರಕರ್ತರ ಸಂಘದ ಸಂಘಟನೆ ಕಾರ್ಯದರ್ಶಿ ಶ್ರೀ ಶಾರುಖ್ ಖಾನ್ ತಿಳಿಸಿದರು .
ನಂತರ ಮಾತನಾಡಿದ ಅವರು .
ಹನೂರು ತಾಲ್ಲೂಕಿನ ಎಲ್ಲೇಮಾಳದಲ್ಲಿ
ಸೋಮವಾರ ಬೆಳಿಗ್ಗೆ ತಮ್ಮಗಳ ಮನೆಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ನಂತರ ಮಸೀದಿಗೆ ಬಳಿ ಜಮಯಿಸಿದ ಮುಸ್ಲಿಂ ಮುಖಂಡರು ಯುವಕರು ಪರಸ್ಪರ ಆತ್ಮೀಯ ಅಪ್ಪುಗೆಯ ಮೂಲಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಗ್ರಾಮದ ಮಸೀದಿಯಲ್ಲಿನ ಮುಸ್ಲಿಮರು ತಮ್ಮ ವಾಹನ ಮೇಲೆ ಮೆಕ್ಕಾ ಮದೀನಾ ಭಾವಚಿತ್ರವಿರಿಸಿ ಮೆರವಣಿಗೆ ಮಾಡಲಾಯಿತು. ನೂರಾರು ಮುಸ್ಲಿಂ ಸಮುದಾಯದವರು ಪಾಲ್ಗೊಂಡು ಸಂಗೀತಕ್ಕೆ ಭಕ್ತಿಯಿಂದ ಸಾಗಿದರು. ಈ ನಡುವೆ ರಾಷ್ಟ್ರಧ್ವಜ, ಕನ್ನಡ/ಕರ್ನಾಟಕ ಬಾವುಟ ಕೂಡ ರಾರಾಜಿಸುವಂತೆ ಮಾಡಿದ್ದೆವು
ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಸ್ಥಳದಲ್ಲಿದ್ದು ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದರು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಪಾಧ್ಯಕ್ಷ ತೌಸಿಪ್ ಅಹಮದ್, ಅಪ್ಸರ್ ಬೇಗ್, ಅಲ್ಲಾಬಕಶ್, ಶಾದಬ್ ಖಾನ್, ಸಲ್ಮಾನ್ ಖಾನ್, ಅಯೂಬ್ ಖಾನ್, ಜೀಯಾಉಲ್ಲಾ, ಸೇರಿದಂತೆ ಮತ್ತಿತರರು ಇದ್ದರು.