Movement of stray cattle, sent to Goshala of Mantralaya – Manjunath Gundur.
ಸಿಂಧನೂರು :-ಸೆ 11 ನಗರದ ಸಭೆಯ ವ್ಯಾಪ್ತಿಯ ಹಾದಿ-ಬೀದಿಗಳಲ್ಲಿರುವ ಬಿಡಾಡಿ ಜಾನುವಾರುಗಳಿಂದ ರಸ್ತೆ ಅಪಘಾತಗಳು ಹೆಚ್ಚಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ, ನಗರಸಭೆ ನೇತೃತ್ವದಲ್ಲಿ ಬೀಡಾಡಿ ಜಾನುವಾರುಗಳನ್ನು ಸೆರೆಹಿಡಿದು ಸುರಕ್ಷಿತವಾಗಿ ಮಂತ್ರಾಲಯದ ಗೋಶಾಲೆಗೆ ರವಾನಿಸಲಾಗಿದೆ ಎಂದು ನಗರಸಭೆ ಪೌರಾಯುಕ್ತರು ಮಂಜುನಾಥ್ ಗುಂಡೂರು ತಿಳಿಸಿದರು.
ದನಗಳ ಮಾಲೀಕರಿಗೆ ದನಗಳನ್ನು ರಸ್ತೆಗೆ ಬಿಡಬಾರದೆಂದು ಸೂಚಿಸಲಾಗಿದೆ, ದನಗಳು ಸುಕಾಲಪೇಟೆಯ ಗೊಲ್ಲ ಸಮುದಾಯಕ್ಕೆ ಸಂಬಂಧ ಪಟ್ಟದ್ದಾಗಿವೆ,ಗೊಲ್ಲ ಸಮುದಾಯದ ಮುಖಂಡರಿಗೂ ಈ ಕುರಿತು ಎಚ್ಚರಿಕೆ ನೀಡಲಾಗಿದೆ,
ಯಾವುದೇ ಪ್ರಾಣಿಗಳನ್ನು ಸಾಕಬೇಕೆಂದರೆ ನಗರಸಭೆಯ ಪರವಾನಿಗೆ ಕಡ್ಡಾಯ,08 ಕ್ಕೂ ಅಧಿಕ ದನಗಳನ್ನು ಸರೆ ಹಿಡಿಯಲಾಯಿತು.
ಪುನ: ದನಗಳನ್ನು ರಸ್ತೆಗೆ ಬಿಟ್ಟರೆ 25000₹ ದಂಡ, ಸಾದಾ ಕಾರಾಗೃಹ ಶಿಕ್ಷೆ ಎಚ್ಚರಿಕೆ ರವಾನೆ,
ದನಗಳಿಂದ ಗಾಯ,ಸಾವು,ನೋವು,ಅಪಘಾತ ಸಂಭವಿಸಿದ್ದಲ್ಲಿ ಮಾಲಿಕರೇ ಹೊಣೆಯಾಗಿದ್ದು ಸದರಿರವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ನಿರೀಕ್ಷಕರು ದುರುಗಪ್ಪ,ಆರೋಗ್ಯ ನಿರೀಕ್ಷಕರಾದ ಕಿಶನ್, ಮಹೇಶ, ಲಕ್ಷ್ಮೀ ಪತಿ, ಮೆಸ್ತ್ರಿಗಳಾದ ವೆಂಕೊಬ, ಮೌನೇಶ,ಜಗದೀಶ,ಅಮರೇಶ ಹಾಗೂ ಪೌರಕಾರ್ಮಿಕರ ತಂಡ ಹಾಜರು.