Breaking News

ಸೋಮನಾಳಹಿರೇಮಠದ ಸಿದ್ದರಾಮಯ್ಯ ಸ್ವಾಮಿ ಅವರಿಗೆ “ಪ್ರವಚನ ಪ್ರವೀಣ” ಪ್ರಶಸ್ತಿ ಪ್ರದಾನ

Siddaramaiah Swami of Somanalahiremath was presented with “Pravachan Praveena” award

ಜಾಹೀರಾತು

ಗಂಗಾವತಿ: ಭಾರತೀಯ ಸನಾತನ ಪರಂಪರೆ ದಿವ್ಯ ಭವ್ಯ ಪರಂಪರೆಯ ಉಳಿವಿಗಾಗಿ ಅವತರಿಸಿದ ಬಂದ ಸಂತ ಶ್ರೇಷ್ಠರಾಗಿ ಬಾಳಿ ಬೆಳಗಿದ ಜಗಕ್ಕೆ ಧರ್ಮ ಉಪದೇಶಾಮೃತಗಳ ಮೂಲಕ ಧರ್ಮ ಜಾಗೃತಿ ಗೈದ ಪ್ರಾಚೀನ ಕಾಲದಿಂದಲೂ ಐತಿಹಾಸಿಕ ಹಿನ್ನೆಲೆ ಇರುವ ಪಂಚಪೀಠಗಳಲ್ಲಿ ಒಂದಾದ ಉಜ್ಜಯಿನಿ ಸದ್ಧರ್ಮ ಸಿಂಹಾಸನ ಪೀಠದಲ್ಲಿ ಶ್ರೀ ಶ್ರೀ ಶ್ರೀ 1008, ಲಿಂ , ಸಿದ್ದಲಿಂಗ ಜಗದ್ಗುರುಗಳ ಪುರಾಣ ಪ್ರವಚನ ಒಂದು ತಿಂಗಳ ಪರ್ಯಂತವಾಗಿ ಸೇವೆ ಸಲ್ಲಿಸಿದಕ್ಕಾಗಿ ಶ್ರೀ ಮದ್ ಉಜ್ಜೈನಿ ಸದ್ಧರ್ಮ ಸಿಂಹಾಸನದೀಶ್ವರ ಶ್ರೀ ಶ್ರೀ ಶ್ರೀ 1008 ಅಭಿನವ ಸಿದ್ದಲಿಂಗ ರಾಜದೇಶಿಕೇಂದ್ರ ಭಗವತ್ಪಾದ ಮಹಾಸ್ವಾಮಿಗಳು ಕಾರಟಗಿ ತಾಲೂಕಿನ ಸೋಮನಾಳ ಹಿರೇಮಠದ ಪುಟ್ಟರಾಜ ಗುರುವರ್ಯರ ಶಿಷ್ಯರಾದ ಶ್ರೀ ಸಿದ್ದರಾಮಯ್ಯ ಸ್ವಾಮಿ ಇವರಿಗೆ “ಪ್ರವಚನ ಪ್ರವೀಣ ಪ್ರಶಸ್ತಿ” ಎಂಬ ಬಿರುದು ಕೊಟ್ಟು ಗೌರವಿಸಿದರು,
ಸೇವೆಯ ಮೂಲಕ ಉನ್ನತ ಸಾಧನಗೈದು ಜನಮಾನಸದಲ್ಲಿ ಎಂದಿಗೂ ಚಿರಂತನವಾಗಲಿ ಎಂದು ಆರ್ಶೀವದಿಸಿದರು, ಕಾರ್ಯಕ್ರಮದಲ್ಲಿ ಬಳ್ಳಾರಿ ಲೋಕಸಭಾ ಸದಸ್ಯರಾದ ಶ್ರೀ ತುಕಾರಾಂ ಧರ್ಮ ಪರಿಷತ್ ನ್ ಮಠಾಧೀಶರು ಉಜ್ಜಯಿನಿ ಸದ್ಧರ್ಮ ಪೀಠದ ಸಿಬ್ಬಂದಿಗಳು ಹಾಗೂ ಶ್ರೀಮಠದ ಸದ್ಭಕ್ತರು ಭಾಗವಹಿಸಿದ್ದರು

About Mallikarjun

Check Also

1001883611

ಗಿಣಿಗೇರಾ ಜಾನುವಾರು ಸಂತೆಯಲ್ಲಿ ವ್ಯಾಪಾವಿಲ್ಲದೆ ದನಕರುಗಳಿಗೆ ನೀರು ಮೇವಿಲ್ಲದೆ ಪರದಾಟ

Cattle are stranded without water or fodder at the Ginigera cattle fair due to lack …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.