Breaking News

ಸ್ವಚ್ಚತೆಯಿಂದ ಆರೋಗ್ಯ ಕಾಪಾಡಿಕೊಳ್ಳಿ ಆಶಾಬೇಗಂ ಕರೆ

Keep your health clean, call Asha Begum

ಜಾಹೀರಾತು

ಗಂಗಾವತಿ.20 :ಇಂದು ವಿಶ್ವ ಸೊಳ್ಳೆ ದಿನ. ಮಾರಣಾಂತಿಕ ಕಾಯಿಲೆಗಳಿಗೆ ದಾರಿ ಮಾಡುವ ಮಹಾಮಾರಿ ಸೊಳ್ಳೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿಷರ್ಷ ಆಗಷ್ಟ್ 20ರ ದಿನವನ್ನು ಸೊಳ್ಳೆ ದಿನವಾಗಿ ಆಚರಿಸಲಾಗುತ್ತದೆ. 

ಗಂಗಾವತಿ ನಗರದ ಎಂ.ಎನ್.ಎಂ.ಪ್ರೌಢ ಶಾಲೆಯಲ್ಲಿ ಉದ್ಘಾಟನೆ ಮಾಡಿ ಮಾತನಾಡಿದ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ

ಆಗಷ್ಟ್ 20ಕ್ಕೆ ಮತ್ತೊಂದು ಮಹತ್ವವಿದೆ. ಭಾರತೀಯ ಮೂಲದ ಬ್ರಿಟನ್‌ ವೈದ್ಯ ರೊನಾಲ್ಡ್‌ ರೋಸ್‌ ಅವರು ಮನುಷ್ಯನಿಂದ ಮನುಷ್ಯನಿಗೆ ಮಲೇರಿಯಾ ಹರಡಲು ಅನಾಫಿಲೀಸ್‌ ಎಂಬ ಹೆಣ್ಣು ಸೊಳ್ಳೆಯೇ ಕಾರಣ ಎಂಬ ವಿಷಯವನ್ನು ಕಂಡು ಹಿಡಿದಿದ್ದು 1897ರ ಆಗಸ್ಟ್‌ 20ರಂದೇ. ಹೀಗಾಗಿ ಈ ಸಂಶೋಧನೆಯ ನೆನಪಾಗಿಯೂ ಸೊಳ್ಳೆ ದಿನ ಆಚರಿಸಲಾಗುತ್ತದೆ,

ನಿಮಗೆ ಗೊತ್ತೇ, ಇಂದು ವಿಶ್ವ ಸೊಳ್ಳೆ ದಿನ ! ಲಂಡನ್‌ ಸ್ಕೂಲ್‌ ಆಫ್‌ ಹೈಜಿನ್‌ ಆಂಡ್‌ ಟ್ರಾಪಿಕಲ್‌ ಮೆಡಿಸಿನ್‌’ ಸಂಸ್ಥೆಯು ಪ್ರತಿವರ್ಷ ಸೊಳ್ಳೆ ದಿನವನ್ನು ಆಯೋಜಿಸುತ್ತದೆ. ಸುಮಾರು 1930ರ ಕಾಲದಿಂದಲೂ ಪ್ರದರ್ಶನಗಳು, ಜಾಗೃತಿ ಅಭಿಯಾನಗಳ ಮೂಲಕ ಈ ಸಂಸ್ಥೆ ಸೊಳ್ಳೆ ದಿನವನ್ನು ಆಚರಿಸಿಕೊಂಡು ಬರುತ್ತಿದೆ.

ಹುಲಿ ಸಿಂಹಗಳಿಗಿಂತ ಅಪಾಯಕಾರಿ: ಕ್ರೂರ ಪ್ರಾಣಿಗಳಾದ ಹುಲಿ, ಸಿಂಹ, ಚಿರತೆಗಳಿಗಿಂತ ಸೊಳ್ಳೆಗಳು ಹೆಚ್ಚು ಅಪಾಯಕಾರಿ. ಅದರಲ್ಲೂ ಹೆಣ್ಣು ಸೊಳ್ಳೆಗಳು ಮತ್ತಷ್ಟು ಡೇಂಜರಸ್‌. ವಿಶ್ವದಲ್ಲಿ ಇದುವರೆಗೂ ಸುಮಾರು ನಾಲ್ಕು ವರೆ ಕೋಟಿ ಜನರು ಸೊಳ್ಳೆ ಕಡಿತದಿಂದ ಉಂಟಾದ ವಿವಿಧ ರೋಗಗಳಿಗೆ ಬಲಿಯಾಗಿದ್ದಾರೆ. ಇಂದಿಗೂ ವಿಶ್ವದಲ್ಲಿ ಪ್ರತಿ ಹನ್ನೆರಡು ಸೆಕೆಂಡುಗಳಿಗೆ ಒಬ್ಬ ವ್ಯಕ್ತಿ ಸೊಳ್ಳೆಯಿಂದ ಸಾಯುತ್ತಿದ್ದಾನೆ. ಭೂಮಿಯ ಮೇಲಿನ ಇತರ ಯಾವುದೇ ಪ್ರಾಣಿಗಳ ಕಾಟದಿಂದ ಇಷ್ಟು ದೊಡ್ಡ ಪ್ರಮಾಣದಲ್ಲಿ ಮನುಷ್ಯರು ಸಾವಿಗೀಡಾಗಿಲ್ಲ.ಮಲೇರಿಯಾ, ಹಳದಿ ಜ್ವರ, ಡೆಂಘಿ, ಎನ್ಸಾಫಲಿಟಿಸ್‌ (ಮೆದುಳಿನ ಉರಿಯೂತ), ಆನೆ ಕಾಲು ರೋಗ ಸೇರಿದಂತೆ ನೂರಕ್ಕೂ ಹೆಚ್ಚು ಮಾರಕ ರೋಗಗಳನ್ನು ಈ ಹೆಣ್ಣು ಸೊಳ್ಳೆಗಳು ಒಬ್ಬರಿಂದ ಒಬ್ಬರಿಗೆ ಹರಡುತ್ತಾ ಸಾವಿಗೆ ಕಾರಣವಾಗುತ್ತವೆ. ಸೊಳ್ಳೆಯ ಇಂಗ್ಲಿಷ್‌ ಹೆಸರಾದ ಮಸ್ಕಿಟೊ’ ಪದದ ಮೂಲ ಸ್ಪ್ಯಾನಿಷ್‌. ಸ್ಪ್ಯಾನಿಷ್‌ನಲ್ಲಿ ಇದರ ಮೂಲ ಅರ್ಥ ‘ಚಿಕ್ಕ ಕೀಟ, 10ರಿಂದ 50 ಮೀಟರ್‌ ದೂರದಿಂದ ಮನುಷ್ಯನ ಉಸಿರಾಟವನ್ನು ಸೊಳ್ಳೆಗಳು ಗುರುತಿಸಬಲ್ಲವು. 5-10 ಮೀಟರ್‌ ವ್ಯಾಪ್ತಿಯಲ್ಲಿ ಮನುಷ್ಯನನ್ನು ನೋಡಬಲ್ಲವು. 20 ಸೆಂ.ಮೀಟರ್‌ ವ್ಯಾಪ್ತಿಯಲ್ಲಿ ಮನುಷ್ಯನ ದೇಹದ ಉಷ್ಣತೆ ಮತ್ತು ಬೆವರನ್ನು ಗ್ರಹಿಸಬಲ್ಲವು ಎಂದು ವಿಧ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು,

ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ವರ್ಗದವರಾದ ರಮೇಶ,ಗುರುರಾಜ, ಸರಸ್ವತಿ,ಮಲೇರಿಯಾ ಲಿಂಕ್ ವರ್ಕರ ಹೆಚ್.ಸುರೇಶ , ಮುಖ್ಯೋಪಾಧ್ಯಾಯರಾದ ಹನೀಫ್,ಹಸೀನಾಬೇಗಂ,ಮೀನಾಕ್ಷಿ, ನೀಲಗಂಗಾ, ಸೇರಿದಂತೆ ಇತರರು ಇದ್ದರು

About Mallikarjun

Check Also

ಲಯನ್ಸ್ ಶಿಕ್ಷಣ ಸಂಸ್ಥೆಯ ಆವರಣದಲ್ಲಿಅಂತ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

National Democracy Day celebration in the premises of Lions Educational Institution ಗಂಗಾವತಿ: ವಿಕಲಚೇತನರ ಹಾಗೂ ಹಿರಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.