Breaking News

ಉತ್ತಮಬಾಲಕಲಾವಿದ ಪಶಸ್ತ್ರಿ ಪಡೆದ ಸರ್.ಸಿ.ವಿ ರಾಮನ್ ಶಾಲೆಯ ವಿದ್ಯಾರ್ಥಿ

A student of Sir CV Raman School who was awarded as the best child artist

ಜಾಹೀರಾತು

ಗಂಗಾವತಿ : ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗದಗ ಬಣ್ಣದ ಮನೆ ಸಾಂಸ್ಕೃತಿಕ ವೇದಿಕೆ ಹಾಗೂ ಕರ್ನಾಟಕ ಬಾಲ ವಿಕಾಸ ಅಕಾಡಮಿ ಧಾರವಾಡ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಚಿಣ್ಣರ ಚಿತ್ರ ಚಿತ್ತಾರ 2023-24ರ ರಾಷ್ಟ್ರಮಟ್ಟದ ಮಕ್ಕಳ ಚಿತ್ರ ಕಲೋತ್ಸವದಲ್ಲಿ  ಬಸಾಪಟ್ಟಣ ಗ್ರಾಮದ ಸರ್ ಸಿ.ವಿ ರಾಮನ್ ಪಬ್ಲಿಕ್ ಶಾಲೆ  5ನೇ ತರಗತಿಯ ವಿದ್ಯಾರ್ಥಿ  ಹರೀಶ್ ಬಿ  ಇವರು  ಬಿಡಿಸಿರುವ ಕಲಾಕೃತಿಗೆ ಉತ್ತಮ ಬಾಲ ಕಲಾವಿದ  ವಿಭಾಗದಲ್ಲಿ ಆಯ್ಕೆಯಾಗಿ ಪ್ರಶಸ್ತಿ ಸ್ವೀಕರಿಸಿ ಶಾಲೆಗೆ ಕಿರ್ತಿ ತಂದಿದ್ದಾರೆ.  ಹಾಗೂ ಶಾಲೆಯಿಂದ ಸುಮಾರು 130 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಈ ರಾಷ್ಟ್ರಮಟ್ಟದ ಚಿಣ್ಣರ ಚಿತ್ರ ಚಿತ್ತಾರ ಮಕ್ಕಳ ಚಿತ್ರಕಲೋತ್ಸವದಲ್ಲಿ  ಭಾಗವಹಿಸಲು ನಮ್ಮ ಶಾಲೆಯ ಸಹ ಶಿಕ್ಷಕಿ  ಚನ್ನಬಸಮ್ಮ ಇವರಿಗೆ ಉತ್ತಮ ದೃಶ್ಯಕಲಾ ಚಿಂತನಕಾರ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಪ್ರಶಸ್ತಿ ಪಡೆದಿರುವ ವಿದ್ಯಾರ್ಥಿ ಹರೀಶ್ ಬಿ ಹಾಗೂ ಸಹ ಶಿಕ್ಷಕಿಗೆ ಇವರಿಗೆ ಶಾಲಾ ಆಡಳಿತ ಮಂಡಳಿ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರ ವರ್ಗದಿಂದ ವಿದ್ಯಾರ್ಥಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

About Mallikarjun

Check Also

1000184549

ರಾಜ್ಯ ಮಟ್ಟದ ಖಾದಿ ಗ್ರಾಮೋದ್ಯೋಗ ವಸ್ತು ಪ್ರದರ್ಶನ,ಮಾರಾಟ ಮೇಳಕ್ಕೆ ತೆರೆ: ರೂ. 1.50 ಕೋಟಿ ವಹಿವಾಟ

State-level Khadi Village Industries Exhibition, Sale Fair opens: Rs. 1.50 crore turnover ಕೊಪ್ಪಳ ಸೆಪ್ಟೆಂಬರ್ 03 …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.