A tree campaign in the name of Mother

ಸಸ್ಯ ಸಂಪತ್ತು ಬೆಳೆಸುವ ಕೆಲಸವಾಗಲಿ ತಾಪಂ ಇಓ ಲಕ್ಷ್ಮೀದೇವಿ ಹೇಳಿಕೆ
ಗಂಗಾವತಿ : ಸಸ್ಯ ಸಂಪತ್ತು ಬಹಳ ಅಮೂಲ್ಯವಾದದ್ದು, ಎಲ್ಲರೂ ಪರಿಸರ ಉಳಿಸಿ, ಬೆಳೆಸಬೇಕು ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಹೇಳಿದರು.

ತಾಲೂಕಿನ ವಡ್ಡರಹಟ್ಟಿ ಗ್ರಾಪಂ ವ್ಯಾಪ್ತಿಯ ವಡ್ಡರಹಟ್ಟಿ ಕ್ಯಾಂಪ್ ನ ಉದ್ಯಾನ ವನದಲ್ಲಿ ತಾಲೂಕು ಪಂಚಾಯತ್ ಗಂಗಾವತಿ, ಗ್ರಾಪಂ ವಡ್ಡರಹಟ್ಟಿ, ತೋಟಗಾರಿಕೆ ಮತ್ತು ಸಾಮಾಜಿ ಅರಣ್ಯ ಇಲಾಖೆ ಆಶ್ರಯದಲ್ಲಿ ಗುರುವಾರ ಆಯೋಜಿಸಿದ್ದ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ತಾಲೂಕು ಮಟ್ಟದ ಅಭಿಯಾನ ಕ್ಕೆ ಚಾಲನೆ ನೀಡಿ ಮಾತನಾಡಿದರು.
ನಾವು ಎಷ್ಟೇ ಆಧುನಿಕವಾಗಿ ಬೆಳವಣಿಗೆ ಹೊಂದಿದರೂ ಪ್ರಕೃತಿ ವಿರುದ್ಧ ಹೋಗಲು ಆಗುವುದಿಲ್ಲ. ಅರಣ್ಯ ಸಂಪತ್ತು ಬಹಳ ಕಡಿಮೆ ಆಗುತ್ತಿದೆ. ಪ್ರತಿಯೊಬ್ಬರೂ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸ ಮಾಡಬೇಕು ಎಂದರು.
ಮಾನ್ಯ ಪ್ರಧಾನ ಮಂತ್ರಿ ಅವರ ಸಂದೇಶದ ಮೇರೆಗೆ ತಾಯಿಯ ಹೆಸರಿನಲ್ಲಿ ಒಂದು ವೃಕ್ಷ ಅಭಿಯಾನ ನಡೆಸುತ್ತಿದ್ದೇವೆ. ಎಲ್ಲರೂ ಅಭಿಯಾನದಲ್ಲಿ ಭಾಗಿಯಾಗಿ ತಾಯಿ ಹೆಸರಲ್ಲಿ ಸಸಿ ನೆಟ್ಟು ಪೋಷಿಸಬೇಕು ಎಂದರು.
ಸಾಮಾಜಿಕ ವಲಯ ಅರಣ್ಯ ಅಧಿಕಾರಿಗಳಾದ ಶ್ರೀ ಬಿ.ರಾಘವೇಂದ್ರ ಅವರು ಮಾತನಾಡಿ, ತಾಯಿ ಹೆಸರಿನಲ್ಲಿ ಸಸಿ ನೆಡಲು ಕರೆ ನೀಡಿದ್ದು, ಎಲ್ಲರೂ ಸಸಿ ನೆಡಬೇಕು. ನೆಟ್ಟ ಸಸಿಗಳ ಪೋಷಣೆ ಕೂಡ ಮಾಡಬೇಕು ಎಂದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಸುರೇಶ ಚಲವಾದಿ ಅವರು ಮಾತನಾಡಿ, ನಾವು ಪರಿಸರ ಕಾಪಾಡಿದರೆ, ಪರಿಸರ ನಮ್ಮನ್ನು ಕಾಪಾಡುತ್ತದೆ ಎಂದರು.
ವಡ್ಡರಹಟ್ಟಿ ಕ್ಯಾಂಪ್ ನ ಸರಕಾರಿ ಜಾಗ ಹಾಗೂ ಉದ್ಯಾನವನದಲ್ಲಿ ನರೇಗಾ ಯೋಜನೆಯಡಿ ಸಸಿಗಳನ್ನು ನೆಡಲಾಯಿತು.
ಈ ವೇಳೆ, ಗ್ರಾಪಂ ಸದಸ್ಯರಾದ ಪೀರ್ ಮಹ್ಮದ್, ಹುಸೇನಪ್ಪ ಬಂಡೆ, ಭೀಮಣ್ಣ ಹತ್ತಿಮರದ ನಾಯಕ, ಶಾಂತಮ್ಮ, ಶ್ರೀ ಭರತ್ ಕುಮಾರ್, ಮುಖಂಡರಾದ ಶಿವಪ್ಪ ಹತ್ತಿಮರದ, ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ಗ್ರಾಪಂ ಎಲ್ಲ ಸಿಬ್ಬಂದಿಗಳು, ಕಾಯಕ ಮಿತ್ರರು, ವಿಆರ್ ಡಬ್ಲ್ಯು, ಕಾಯಕ ಬಂಧುಗಳು, ನರೇಗಾ ಕೂಲಿಕಾರರು, ಸಂಘ-ಸಂಸ್ಥೆಗಳ ಸದಸ್ಯರು ಇದ್ದರು.