Kidney failure: A liberation organization that comes to the aid of a poor family.
ಮಾನ್ವಿ : ತಾಲ್ಲೂಕಿನ ಪೋತ್ನಾಳ ಗ್ರಾಮದ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ ಸಂಸ್ಥೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಕುರುಕುಂದ ಗ್ರಾಮದ ನಿವಾಸಿಯಾದ ಶ್ರೀಮತಿ ಪಾರ್ವತೇಮ್ಮ ಗಂ/ ಶ್ರೀ ಮುದುಕಪ್ಪ. ನಮ್ಮದು ಕಡುಬಡತನದ ಕುಟುಂಬ, ನನಗೆ 2 ಗಂಡು 1 ಹೆಣ್ಣು ಒಟ್ಟು 3 ಜನ ಮಕ್ಕಳಿದ್ದಾರೆ. ನಾನು ನನ್ನ ಗಂಡ ಇಬ್ಬರು ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವು. ಕಳೆದ ವರ್ಷದವರೆಗೆ ನಾವು ತುಂಬಾ ಚೆನ್ನಾಗಿ ಇದ್ದೇವು. ನಮಗೆ ಯಾವುದೇ ತೊಂದರೆ ಇರಲಿಲ್ಲ. ಆಘಾತ ಎನ್ನುವಂತೆ ನನ್ನ ಗಂಡನಿಗೆ ಎರಡು ಕಿಡ್ನಿ ವೈಫಾಲ್ಯವಾಗಿರುವದು ಕಂಡು ಬಂತು.
ಮನೆಯಲ್ಲಿ ಚಿಕ್ಕ ಚಿಕ್ಕ ಮಕ್ಕಳು ಶಾಲೆ ಹೋಗುತ್ತಾರೆ. ನಾನು ಒಬ್ಬಳೇ ಕೂಲಿ ಕೆಲಸ ಮಾಡುವವಳು. ಹೀಗಿರುವಾಗ ಮಕ್ಕಳನ್ನು ಮತ್ತು ಗಂಡನನ್ನು ನೋಡಿಕೊಳ್ಳುವದು ನನಗೆ ಕಷ್ಟವಾಯಿತು. ಇದ್ದರಿಂದಾಗಿ ಸದ್ಯದ ಪರಿಸ್ಥಿತಿಯಲ್ಲಿ ನಾನು ನನ್ನ ತವರು ಮನೆ ಪೋತ್ನಾಳ್ ಗ್ರಾಮದಲ್ಲಿ ಆಶ್ರಯ ಪಡೆದಿದ್ದೇನೆ. ನನ್ನ ಗಂಡನಿಗೆ 2 ಕಿಡ್ನಿಗಳ ಅವಶ್ಯಕತೆ ಇದೆ. ಕಿಡ್ನಿ ದಾನಿಗಳು ಸಿಗುವವರೆಗೂ ವಾರದಲ್ಲಿ ಮೂರು ಬಾರಿ ಡಯಾಲಿಸಿಸ್ ಮಾಡಿಸಬೇಕಾಗಿದೆ.
ಅದು ರಾಯಚೂರಿನ ಭಂಡಾರಿ (ಖಾಸಗಿ) ಆಸ್ಪತ್ರೆಯಲ್ಲಿ ಡಯಾಲಿಸಿಸ್ ಮಾಡಿಸಲು ತುಂಬಾ ಖರ್ಚಾಗುತ್ತಿದೆ. ತುಂಬಾ ಸಾಲ ಮಾಡಿಕೊಂಡಿದ್ದೇನೆ. ಜೀವನ ಮಾಡಲು ಬಹಳಷ್ಟು ಕಷ್ಟವಾಗಿದೆ. ನಮ್ಮ ಪರಿಸ್ಥಿತಿ ಕಂಡ ವಿಮುಕ್ತಿ ಚಾರಿಟೇಬಲ್ ಟ್ರಸ್ಟ್ (ರಿ) ಪೋತ್ನಾಳ ಸಂಸ್ಥೆಯು ಈಗಾಗಲೇ 1.50 ಲಕ್ಷ ರೂ.ಗಳನ್ನು ನೀಡಿ ಸಹಕರಿಸಿದೆ. ಇನ್ನೂ ನನ್ನ ಕುಟುಂಬಕ್ಕೆ ಹೆಚ್ಚಿನ ಸಹಾಯ ಬೇಕಾಗಿದೆ. ನಮಗೆ ಒಳ್ಳೆಯ ಮನಸ್ಸುಳ್ಳ ಸಹೃದಯ ದಾನಿಗಳು ಸಹಾಯ ಮಾಡಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.