Cows injured due to dope bursting Forest and police officers rushed to the scene.

ವರದಿ:ಬಂಗಾರಪ್ಪ ಸಿ .
ಹನೂರು :ಕ್ಷೇತ್ರ ವ್ಯಾಪ್ತಿಯಲ್ಲಿನ ಕೌದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಿಡಿಮದ್ದು ಸಿಡಿದ ಪರಿಣಾಮವಾಗಿ ಎರಡು ಹಸುಗಳು ಗಂಭೀರ ಗಾಯಗೊಂಡಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದರು .
ಕೌದಳ್ಳಿ ಗ್ರಾಮದ ರೈತ ಮಹಿಳೆ ಅಕ್ಕಮ್ಮ ಎಂಬುವವರಿಗೆ ಸೇರಿದ ಎರಡು ಹಸುಗಳು ಕಿಡಿಗೇಡಿಗಳ ಎಸಗಿದ ಕೃತ್ಯಕ್ಕೆ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿವೆ.
ಗೋವುಗಳು ಜಮೀನನಲ್ಲಿ ಮೇವು ಅರಸಿ ತೆರಳಿದ್ದ ಸಮಯದಲ್ಲಿ ಸಿಡಿಮದ್ದಿಗೆ ಬಲಿಯಾಗಿ ಹಸುಗಳ ಮುಖ ಹಾಗೂ ದೇಹ ಭಾಗಗಳಿಗೆ ಗಂಭೀರವಾದ ಗಾಯಗೊಂಡಿದೆ ಎಂದು ತಿಳಿಸಿದ್ದಾರೆ.
ಇ ಸಂಬಂಧವಾಗಿ
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಹಾಗೂ ರಾಮಾಪುರ ಪೋಲೀಸ್ ಠಾಣೆಯ ಪೊಲೀಸ್ ಸಿಬ್ಬಂಧಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಅಂಗವಾಗಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.