Sindhnoor: Khadimar’s trickery, theft of more than 1 lakh money, anxiety among citizens
ಸಿಂಧನೂರು : ಪಿಕಾರ್ಡ್ ಬ್ಯಾಂಕ್ ಸೇರಿದಂತೆ ಜೀವನಜ್ಯೋತಿ ಪತ್ತಿನ ಸಹಕಾರ ಸಂಘ, ಚಾರ್ಟೆಡ್ ಅಕೌಂಟೆಂಟ್, ಕೃಷಿ ಪತ್ತಿನ ಸಹಕಾರ ಸಂಘ, ಬಟ್ಟೆ ಅಂಗಡಿ, ಗೊಬ್ಬರದ ಗೌಡನ್, ಹಾಗೂ ಇನ್ನಿತರ ಅಂಗಡಿಗಳಲ್ಲಿ ಮಧ್ಯರಾತ್ರಿ 1:57 ರ ಸುಮಾರಿಗೆ ಖದೀಮರ ಕೈಚಳಕವನ್ನು ತೋರಿಸಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಹಣ ಕಳ್ಳತನವಾಗಿದ್ದು, ನಾಗರಿಕರಲ್ಲಿ ಆತಂಕ ಮೂಡಿದೆ.
ತಾಲೂಕಿನಲ್ಲಿ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಕಳ್ಳತನದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದ್ದರೂ ಕೂಡ ಅಧಿಕಾರಿಗಳು ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕಾಗಿತ್ತು ಇವರ ನಿಷ್ಕಾಳಜಿಯಿಂದ ಇಂದು ಕಳ್ಳರು ಪಿಎಲ್ ಡಿ ಬ್ಯಾಂಕ್ ಸೇರಿದಂತೆ ಅಕ್ಕಪಕ್ಕದಲ್ಲಿರುವ ಅಂಗಡಿ ಸೊಸೈಟಿ ಗಳಲ್ಲಿ ಕಳ್ಳತನ ಮಾಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸಿಂಧನೂರು ಉಪವಲಯದ ಡಿವೈಎಸ್ಪಿ ಬಿ.ಎಸ್.ತಳವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ಯಾಂಕ್ ಮತ್ತು ಅಂಗಡಿ ಮುಂಗಟ್ಟುಗಳಲ್ಲಿ ಕಳ್ಳತನವಾಗಿದ್ದು, ಇದರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿ ಶೀಘ್ರವಾಗಿ ಪ್ರಕರಣವನ್ನು ಬೇಧಿಸಲಾಗುವುದ ಎಂದು ತಿಳಿಸಿದ್ದಾರೆ.