Breaking News

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವಿದ್ಯಾರ್ಥಿಗಳಿಗೆ ಪ್ರೊತ್ಸಾಹ ಧನ, ಹಾಗೂ ಹೊಸ ನಳ ಸಂಪರ್ಕಕ್ಕೆ ಅರ್ಜಿ ಆಹ್ವಾನಿತರಾಗಿ

Incentive Fund for Scheduled Caste and Scheduled Tribe students, and application invitation for new pipeline connection,,,

ಜಾಹೀರಾತು

ಕೊಪ್ಪಳ : ಕುಕನೂರು ಪಟ್ಟಣ ಪಂಚಾಯತಿ ಕಾರ್ಯಾಲಯದ ಪ್ರಕಟಣೆ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಎಸ್. ಎಫ್. ಸಿ ಅನುದಾನದಲ್ಲಿಶೇ. 24.10 ಹಾಗೂ 7.25ರ ಯೋಜನೆಯಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೇ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪೋತ್ಸಾಹ ಧನಕ್ಕಾಗಿ ನಿಗದಿಪಡಿಸಿದ ದಿನಾಂಕದೊಳಗೆ ಅಗತ್ಯ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಇನ್ನೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಹೊಸ ನಳ ಸಂಪರ್ಕ ಕಲ್ಪಿಸುವುದಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಪ್ರೋತ್ಸಾಹ ಧನ ನೀಡಲು ಲಗತ್ತಿಸಬೇಕಾದ ದಾಖಲಾತಿಗಳು. ಹಿಂದಿನ ವರ್ಷದ ಅಂಕಪಟ್ಟಿ, ಚಾಲ್ತಿ ಸಾಲಿನಲ್ಲಿ ವ್ಯಾಸಾಂಗ ಮಾಡುತ್ತಿರುವ ಬಗ್ಗೆ ಶಿಕ್ಷಣ ಸಂಸ್ಥೆಯಿಂದ ವ್ಯಾಸಾಂಗ ಮೂಲ ಪ್ರಮಾಣ ಪತ್ರ. ಪ್ರಸಕ್ತ ಸಾಲಿನಲ್ಲಿ ಸಮಾಜ ಕಲ್ಯಾಣ ಇಲಾಖೆ/ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರಿಂದ ಯಾವುದೇ ಪ್ರೋತ್ಸಾಹ ಧನ ಪಡೆಯದೇ ಇರುವ ಬಗ್ಗೆ ಸಂಬಂಧಿಸಿದ ಇಲಾಖೆಯಿಂದ ದೃಢೀಕರಣ ಪ್ರಮಾಣ ಪತ್ರ. ಚಾಲ್ತಿ ವರ್ಷದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಆಧಾರ ಕಾರ್ಡ್, ಸ್ಪಷ್ಟವಾಗಿರುವ ಬ್ಯಾಂಕ್ ಪಾಸ್ ಪುಸ್ತಕದ ಜರಾಕ್ಸ್ ಪ್ರತಿ. ಇತ್ತೀಚಿನ ಒಂದು ಭಾವ ಚಿತ್ರಗಳು ಕಡ್ಡಾಯವಾಗಿ ಹೊಂದಿರಬೇಕು.

ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಜನಾಂಗದವರಿಗೆ ಹೊಸ ನಳದ ಸಂಪರ್ಕಕ್ಕೆ ಸಲ್ಲಿಸಬೇಕಾದ ಮೂಲ ದಾಖಲಾತಿಗಳಾದ, ಚಾಲ್ತಿ ವರ್ಷದ ನಮೂನೆ, ನಮೂನೆ-3, ಚಾಲ್ತಿ ವರ್ಷದ ಆಸ್ತಿ ತೆರಿಗೆ ರಸೀದಿ, ಮತ್ತು ಎಸ್.ಎ.ಎಸ್ ಫಾರ್ಮ, ಚಾಲ್ತಿ ವರ್ಷದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣೆ ಗುರುತಿನ ಚೀಟಿ, ಪಡಿತರ ಚೀಟಿ, ನಳದ ನಕ್ಷೆ, ಸ್ಪಷ್ಟವಾಗಿರುವ ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ, ಇತ್ತಿಚಿನ ಭಾವಚಿತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

ಅರ್ಜಿದಾರರು ಕುಕನೂರು ಪಟ್ಟಣ ಪಂಚಾಯತಿ ಖಾಯಂ ನಿವಾಸಿಯಾಗಿರತಕ್ಕದ್ದು, ಅರ್ಜಿದಾರರು ದಿ.30.08.2024ರ ಒಳಗಾಗಿ ಅರ್ಜಿ ಸಲ್ಲಿಸತಕ್ಕದ್ದು, ಅವಧಿ ಮೀರಿ ಬಂದ ಅರ್ಜಿಗಳನ್ನು ಪರಿಗಣಿಸಲಾಗುವದಿಲ್ಲಾ.

ಪ.ಜಾ. ಪ.ಪಂ, ಜನಾಂಗದವರಿಗೆ ಹೊಸ ನಳ ಸಂಪರ್ಕಕ್ಕಾಗಿ ಅಗತ್ಯ ಎಲ್ಲಾ ದಾಖಲೆಗಳೊಂದಿಗೆ ಮೊದಲು ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮೊದಲನೇ ಆದ್ಯತೆ ನೀಡಲಾಗುವುದು.
ಪೂರ್ಣ ದಾಖಲಾತಿ ಇರದ ಅರ್ಜಿಗಳನ್ನು ಯಾವುದೇ ಮುನ್ಸೂಚನೆ ನೀಡದೇ ತಿರಸ್ಕರಿಸಲಾಗುವುದು.
ಅಗತ್ಯವಿದ್ದಲ್ಲಿ ಕಾರ್ಯಾಲಯದಿಂದ ಕೊರಿದ ದಾಖಲೆಗಳನ್ನು ಸಲ್ಲಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಕುಕನೂರು ಪಟ್ಟಣ ಪಂಚಾಯತಿ ಕಚೇರಿಯ ವಿಷಯ ನಿರ್ವಾಹಕರನ್ನು ಭೇಟಿ ಮಾಡಬೇಕು ಎಂದು ಈ ಮೂಲಕ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿಗಳು
ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.