Breaking News

ಹನೂರು ಕೆಸಿಪ್ ರಸ್ತೆ ವಿಕ್ಷೀಸಿದ ಶಾಸಕ ಎಮ್ ಆರ್ ಮಂಜುನಾಥ್ .

MLA M R Manjunath opened Hanur Ksip Road.

ಜಾಹೀರಾತು

ವರದಿ ; ಬಂಗಾರಪ್ಪ ಸಿ .
ಹನೂರು : ಪಟ್ಟಣದಲ್ಲಿ ನಡೆಯುತ್ತಿರುವ ಕೆಸಿಎಫ್ ರಸ್ತೆ ಕಾಮಗಾರಿಯ ಬ್ಯಾರಿ ಕೇಡ್ ಗುಣಮಟ್ಟದಿಂದ ಕೂಡಿರಬೇಕು ಕಳಪೆಯಾದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಇಲ್ಲದಿದ್ದರೆ ಬಿಡುಗಡೆಯಾಗಬೇಕಿರುವ ಹಣವನ್ನು ತಡೆಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಂ.ಆರ್ ಮಂಜುನಾಥ್ ಕೆಸಿಪ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹನೂರು ಮತ್ತು ಕೊಳ್ಳೇಗಾಲಕ್ಕೆ ಹಾದುಹೋಗುವ ಪಟ್ಟಣದ ಮುಖ್ಯ ರಸ್ತೆಯ ಎರಡು ಬದಿಯಲ್ಲಿ ಸಾರ್ವಜನಿಕರ ಸುರಕ್ಷತೆಗಾಗಿ ನಿರ್ಮಾಣ ಮಾಡುತ್ತಿರುವ ಬ್ಯಾರಿಕೇಡ್ ನಿರ್ಮಾಣ ಮಾಡುತ್ತಿರುವುದು ಸರಿಯಾದ ಕ್ರಮವಲ್ಲ ಎಂದು ಗುತ್ತಿಗೆದಾರಿಗೆ ತಿಳಿಸಲಾಯಿತು .
ಕಳೆದ ಸರ್ಕಾರದ ಅವದಿಯಲ್ಲಿ ಬಿಡುಗಡೆಯಾದ
108 ಕೋಟಿ ವೆಚ್ಚದ ಕೆಸಿಎಫ್ ರಸ್ತೆ ಕಾಮಗಾರಿ ಪರಿಶೀಲಿಸಿದ ನಂತರ ಗುತ್ತಿಗೆದಾರರ ಜೊತೆ ಮಾತನಾಡಿದ ಅವರು ಎರಡು ರಸ್ತೆ ಬದಿಯಲ್ಲಿ ಮಾಡಲಾಗುತ್ತಿರುವ ಬ್ಯಾರಿಕೇಡ್ ಗುಣಮಟ್ಟದಿಂದ ಕೂಡಿಲ್ಲ ಜೊತೆಗೆ ಅದಕ್ಕೆ ಬಣ್ಣ ಬಳಿಯುತ್ತಿರುವುದು ಮಣ್ಣು ಮತ್ತು ಎರಡು ಬದಿಯಲ್ಲಿರುವ ಧೂಳನ್ನು ಸ್ವಚ್ಛಗೊಳಿಸಲು ಬೆಳೆಯುತ್ತಿರುವ ಬಣ್ಣ ಸಹ ಕಳಪೆ ಮಟ್ಟದ್ದು ಹೀಗಾಗಿ ನಡೆಯುತ್ತಿರುವ ಕಾಮಗಾರಿ ಉತ್ತಮ ಗುಣಮಟ್ಟದ ಪೈಪ್‌ಗಳನ್ನು ಬಳಸಿ ಬ್ಯಾರಿಕೇಡ್ ನಿರ್ಮಾಣ ಮಾಡಬೇಕು ಕಳಪೆ ಗುಣಮಟ್ಟ ಕಂಡು ಬಂದರೆ, ಶಿಸ್ತು ಕ್ರಮ ಕೈಗೊಳ್ಳುವ ಮೂಲಕ ಬಿನ್ ತಡೆಹಿಡಿಯಲು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು .

ಇದೇ ಸಂದರ್ಭದಲ್ಲಿ ಎಲ್ಲೇಮಾಳ ಗ್ರಾಮ ಪಂಚಾಯಿತಿ ಸದಸ್ಯ ಚಿನ್ನವೆಂಕಟ್,ಮುಖಂಡರುಗಳಾದ ತಂಗವೇಳು, ಚಣ್ಣಲಿಂಗನಹಳ್ಳಿ ವೆಂಕಟೇಶ್,ಸೇರಿದಂತೆ ಇನ್ನಿತರ ಮುಖಂಡರುಗಳು ಹಾಜರಿದ್ದರು.

About Mallikarjun

Check Also

ಎರಡು ತಿಂಗಳ ಅನಾಥ ಮಗುವನ್ನು ರಕ್ಷಿಸಿ ನಿಯಮಾನುಸಾರ ಇಲಾಖೆಗೆ ಒಪ್ಪಿಸಿದ ಕಾರುಣ್ಯಾಶ್ರಮ.

Karunyashram rescued a two-month-old orphan and handed it over to the department as per rules. …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.