Take action to prevent waterlogging on Koppal Bhagya Nagar Over Bridge.
ಕೊಪ್ಪಳ ನಗರದಿಂದ ಭಾಗ್ಯನಗರಕ್ಕೆ ಮೇಲ್ ಸೇತುವೆ ನಿರ್ಮಾಣವಾಗಿ ಕೆಲವೇ ವರ್ಷಗಳಾಗಿವೆ. ಆದರೆ ಮೇಲ್ ಸೇತುವೆ ಮೇಲೆ ಮಳೆ ಬಂದರೆ ಸಾಕು ನೀರು ನಿಂತು ಗುಂಡಿ ಬಿದ್ದಿರುವುದು ಅಧಿಕಾರಿಗಳು ಗಮನಿಸಿದ್ದರು ಸುಮ್ಮನಿದ್ದಾರೆ.
ನೀರು ನಿಂತ ಮೇಲೆ ಅದರ ಮೇಲೆ ಬೃಹತ್ ಘನವಾಹನಗಳು ದಿನನಿತ್ಯ ಸಂಚಾರ ಮಾಡುತ್ತಿವೆ. ರೈಲ್ವೆ ಗೂಡ್ಸ ವಾಹನಗಳು ಬಂದಾಗ ಅದರ ಅಂಡ್ ಲೋಡ್ ಮಾಡಿ ಲಾರಿಯಲ್ಲಿ ತುಂಬಿಕೊಂಡು ಇದೇ ಮೇಲ್ ಸೇತುವೆ ಮೂಲಕ ವಿವಿಧ ಗೊಡಾನ್ ಸೇರುತ್ತದೆ.
ಮೇಲ್ ಸೇತುವೆ ಮೇಲೆ ಗುಂಡಿಯ ಒಳಗಿಂದ ಕಬ್ಬಿಣದ ರಾಡುಗಳು ಕಾಣುತ್ತಿರುವುದು ಇನ್ನಷ್ಟು ಅಪಾಯಕಾರಿಯಾಗುವ ಲಕ್ಷಣಗಳು ಕಾಣುತ್ತಿವೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ಇಂಥ ಮೇಲ್ ಸೇತುವೆ ಕುಸಿದು ಬಿದ್ದಿರುವುದು ನಮ್ಮ ಕಣ್ಣು ಮುಂದೆ ರಾಚ್ಚುವಂತಿದೆ. ಇಂಥ ಅಪಾಯ ಸಂಬವಿಸುವ ಮುನ್ನ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಮೇಲ್ ಸೇತುವೆ ಮೇಲೆ ಆಗಿರುವ ನಮಸ್ಯೆಯನ್ನು ಪರಿಶೀಲಿಸಿ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಹೋರಾಟಗಾರ ಶರಣು ಗಡ್ಡಿ ಹಾಗೂ ಕೊಪ್ಪಳದ ನಾಗರಿಕರ ಮಾನನಿಯಾಗಿದೆ.