Public awareness program and blood donation camp for child prevention by farmers association

ವರದಿ : ಬಂಗಾರಪ್ಪ ,ಸಿ .
ಹನೂರು : ಕರ್ನಾಟಕ ರಾಜ್ಯ ರೈತ ಸಂಘವು ದಿನಾಂಕ 7/8/2024 ರಂದು ಬೆಳಿಗ್ಗೆ ಹತ್ತು ಘಂಟೆಗೆ ಸರಿಯಾಗಿ ಹನೂರು ತಾಲ್ಲೂಕಿನ ಪುದುರಾಮಪುರದಲ್ಲಿನ ಗ್ರಾಮ ಶಾಖೆಯಲ್ಲಿ ನಮ್ಮ ಸಂಘದ ಎರಡನೆ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ನಡೆಯುವ ಕ ರಕ್ತದಾನ ಹಾಗೂ ಬಾಲ್ಯವಿವಾಹ ತಡೆಗಟ್ಟುವ ಜನಜಾಗೃತಿ ಕಾರ್ಯಕ್ರಮವನ್ನು ಹನೂರು ತಾಲ್ಲೂಕು ಘಟಕವು ಹಮ್ಮಿಕೊಳ್ಳಲಾಗಿದೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಯಾಗಿ ಮಾಡಿಕೊಡಬೇಕೆಂದು ಜಿಲ್ಲಾ ಕಾರ್ಯಧ್ಯಕ್ಷರಾದ ಶೈಲೇಂದ್ರ ತಿಳಿಸಿದರು .
ಕರ್ನಾಟಕ ಪತ್ರಕರ್ತರ ಸಂಘದ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡದ ಗೌಡೇಗೌಡರು ನಮ್ಮ ಸಂಘಟನೆಯು ಯಾವುದೇ ಜಾತಿಗೆ ಸಿಮೀತವಾಗಿಲ್ಲ ನಮ್ಮಲ್ಲಿನ ಶಕ್ತಿಯನ್ನು ಬಡವರ ಏಳಿಗೆಗೆ ಶ್ರಮಿಸಲು ಅನುಕೂಲ ಮಾಡಿಕೊಳ್ಳುತ್ತೆವೆ ,ರೈತ ಸಂಘಟನೆ ಸದಾ ಕಾಲವು ಬಡವರ ಏಳಿಗೆಗಾಗಿ ಶ್ರಮಿಸುತ್ತಿದ್ದೆವಿ ಅಂದಿನ ದಿನದಲ್ಲಿ ಪತ್ರಕರ್ತರು ಆಗಮಿಸಿ ನಮ್ಮ ಕಾರ್ಯಕ್ರಮವನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಬೇಕಾಗಿದೆ ಎಂದು ತಿಳಿಸಿದರು .
ಇದೇ ಸಂದರ್ಭದಲ್ಲಿ ಶೈಲೇಂದ್ರ ತಾಲ್ಲೂಕು ಘಟಕದ ಅಧ್ಯಕ್ಷರಾದ ಅಮ್ಜಾದ್ ಖಾನ್ , ಪುದುರಾಮಪುರದ ಅಧ್ಯಕ್ಷ ರಾದ ವೇಲುಸ್ವಾಮಿ ,ಗೌರವ ಅಧ್ಯಕ್ಷರು ರಾಜಣ್ಣ , ತಾಲ್ಲೂಕು ಉಪಾಧ್ಯಕ್ಷರಾದ ಪಳನಿಸ್ವಾಮಿ ಬಸವರಾಜು ಕಾಂಚಳ್ಳಿ , ಬಾಸ್ಕರ್ ,ಸೇರಿದಂತೆ ಇನ್ನಿತರರು ಹಾಜರಿದ್ದರು .